ಹಾವೇರಿ: ಸ್ನೇಹಿತೆಯ ಜೊತೆಗೆ ಹೋಗಿದ್ದ ಯುವಕನ ಮೇಲೆ ಆಕೆಯ ಪ್ರಿಯಕರ ಮತ್ತು ಆತನ ಗ್ಯಾಂಗ್ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಚೇತನ್ ಎಂದು ಗುರುತಿಸಲಾಗಿದೆ. ಅರುಣ್, ನಾಗರಾಜ್, ಅಕ್ಷಯ್, ಚೇತನ್ ಹಾಗೂ ಅಣ್ಣಪ್ಪ ಎಂಬವರು ಹಲ್ಲೆ ನಡೆಸಿದ ಆರೋಪಿಗಳಾಗಿದ್ದು, ಇವರನ್ನು ಹಾವೇರಿ ನಗರ ಪೊಲೀಸರು (Police) ಬಂಧಿಸಿದ್ದಾರೆ.
ಖಾಸಗಿ ಕಾಲೇಜ್‍ವೊಂದರಲ್ಲಿ ಬಿ.ಕಾಂ ಓದುತ್ತಿದ್ದ ಚೇತನ್, ತನ್ನದೇ ತರಗತಿಯ ಯುವತಿ ಜೊತೆ ಸ್ನೇಹ ಬೆಳಸಿದ್ದ. ಅಲ್ಲದೇ ಒಟ್ಟೊಟ್ಟಿಗೆ ಕಂಪ್ಯೂಟರ್ ಕ್ಲಾಸ್‍ಗೂ ಹೋಗುತ್ತಿದ್ದರು. ಒಂದು ಸಲ ಯುವತಿಯ ಮೊಬೈಲ್‍ಗೆ ಕರೆಮಾಡಿದ್ದಾಗ ಅರುಣ್ ಕಾಲ್ ರೀಸಿವ್ ಮಾಡಿದ್ದ. ಇವರಿಬ್ಬರ ಸ್ನೇಹ ನೋಡಿ ಅರುಣ್ ಸಹಿಸಲಾಗದೆ ತಲೆಕಡೆಸಿಕೊಂಡಿದ್ದ.
ನಾನು ಪ್ರೀತಿಸುತ್ತಿರುವ ಹುಡುಗಿಯನ್ನ ನೀನು ಪ್ರೀತಿಸ್ತಿದ್ದಿಯಾ ಎಂದು ಚೇತನ್ ಮೇಲೆ ಸಿಟ್ಟುಮಾಡಿಕೊಂಡಿದ್ದ. ಇದೇ ಕಾರಣಕ್ಕೆ ಚೇತನ್‍ಗೆ ಯುವತಿ ಮೊಬೈಲ್‍ನಿಂದ ಕರೆ ಮಾಡಿ ಹೊರಗಡೆ ಕರೆಸಿಕೊಂಡು ಸ್ವಿಪ್ಟ್ ಕಾರ್‌ನಲ್ಲಿ ಅಪಹರಿಸಿದ್ದರು. ಬಳಿಕ ಬಾರ್ ಒಂದರಲ್ಲಿ ಕುಡಿದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದರು.
ಸದ್ಯ ಗಾಯಾಳು ಚೇತನ್‍ಗೆ ಖಾಸಗಿ ಆಸ್ಪತ್ರೆಯಲ್ಲಿ ಮುಂದುವರಿದಿದೆ. ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.