ನೈರೋಬಿ: ಉಪವಾಸ ಮಾಡಿದರೆ ಏಸು ಕ್ರಿಸ್ತನನ್ನು (Jesus) ಭೇಟಿಯಾಗಬಹುದು ಎಂಬ ನಕಲಿ ಧಾರ್ಮಿಕ ಬೋಧಕನ ಮಾತನ್ನು ಕೇಳಿ ಉಪವಾಸ (Fasting) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 403ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 12 ಜನರ ಶವ ಕೀನ್ಯಾದ (Kenya) ಶಕಹೊಲ (Shakahola) ಅರಣ್ಯದಲ್ಲಿ ಪತ್ತೆಯಾಗಿದೆ.
ಮೃತಪಟ್ಟವರಲ್ಲಿ ಹೆಚ್ಚಿನವರು ಗುಡ್ ನ್ಯೂಸ್ ಇಂಟರ್‌ನ್ಯಾಷನಲ್ ಚರ್ಚ್‌ನ ಸಂಸ್ಥಾಪಕ, ಬೋಧಕ ಪೌಲ್ ಮೆಕೆಂಜಿ ಅನುಯಾಯಿಗಳಾಗಿದ್ದರು. ಉಪವಾಸ ಮಾಡಿದರೆ ಏಸುಕ್ರಿಸ್ತನನ್ನು ಸೇರಬಹುದು ಎಂಬ ಆತನ ಮಾತನ್ನು ನಂಬಿದ ಅನುಯಾಯಿಗಳು ಉಪವಾಸ ಮಾಡಿದ್ದು, 403ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 610ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ನಾಪತ್ತೆ
Advertisement
Advertisement
ಸದ್ಯ ಉಪವಾಸ ಮಾಡಲು ಸಲಹೆ ನೀಡಿದ ಆರೋಪಿ ಪೌಲ್ ಮೆಕೆಂಜಿ ಮತ್ತು ಇನ್ನಿತರ 36 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಪತ್ತೆಯಾದ 610ಕ್ಕೂ ಹೆಚ್ಚು ಜನರು ಅರಣ್ಯದ ಸುತ್ತಲಿನ ಗ್ರಾಮದವರಾಗಿದ್ದಾರೆ. ಇದುವರೆಗೆ ಹೊರತೆಗೆದ 403 ಮೃತದೇಹಗಳ ಪೈಕಿ 253 ದೇಹಗಳಲ್ಲಿ ಡಿಎನ್‌ಎ ಹೊಂದಾಣಿಕೆಯನ್ನು ನಡೆಸಲಾಗಿದೆ. ಇದನ್ನೂ ಓದಿ: ಚಂದ್ರನ ವೀಕ್ಷಣೆಗೆ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ: ಚಂದ್ರಯಾನ-3 ಲೇವಡಿ ಮಾಡಿದ ಪಾಕಿಸ್ತಾನ ಮಾಜಿ ಸಚಿವ
Advertisement
ಆರೋಪಿ ಪಾದ್ರಿ 2017ರಲ್ಲಿ ಮಕ್ಕಳಿಗೆ ಶಾಲೆಗೆ ಹೋಗಬೇಡಿ, ಬೈಬಲ್ ಶಿಕ್ಷಣವನ್ನು ಮಾನ್ಯ ಮಾಡುವುದಿಲ್ಲ ಎಂದು ಪ್ರಚಾರ ಮಾಡಿದ್ದ. ಅಲ್ಲದೇ ಜನರಿಗೆ ಏಸುಕ್ರಿಸ್ತನ ಭೇಟಿ ಮಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿ ಜನರನ್ನು ಅರಣ್ಯಕ್ಕೆ ಕರೆಸಿ ಅಲ್ಲಿ ಉಪವಾಸ ಮಾಡಿಸುತ್ತಿದ್ದ. ಇದನ್ನೂ ಓದಿ: ಭಾರತಕ್ಕೆ ಸಂಬಂಧಿಸಿದ 105 ಪ್ರಾಚೀನ ವಸ್ತುಗಳನ್ನು ವಾಪಸ್ ನೀಡಿದ ಅಮೆರಿಕ
Advertisement
ಮೃತಪಟ್ಟವರ ಶವಗಳನ್ನು ಅಧಿಕೃತವಾಗಿ ಪರೀಕ್ಷೆ ನಡೆಸಿದಾಗ ಹೆಚ್ಚಿನವರು, ಅಪೌಷ್ಟಿಕತೆ, ಉಸಿರುಗಟ್ಟುವಿಕೆ ಮುಂತಾದ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಶೋಧನೆಗಳನ್ನು ಮುಖ್ಯ ಸರ್ಕಾರಿ ರೋಗಶಾಸ್ತ್ರಜ್ಞ ಜೋಹಾನ್ಸೆನ್ ಓಡುರ್ ದೃಢಪಡಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ಹಸಿವಿನಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆಗೆ ಮತ್ತೆ ಹಾನಿ; ರಷ್ಯಾ-ಕ್ರಿಮಿಯಾ ಸಂಪರ್ಕ ಕಡಿತ
Web Stories