ಬೀಜಿಂಗ್: ಚೀನಾದ (China) ವಿದೇಶಾಂಗ ಸಚಿವ (Foreign Minister) ಕ್ವಿನ್ ಗ್ಯಾಂಗ್ (Quin Gang) ಕಳೆದ ಮೂರು ವಾರಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದ ಹಿನ್ನೆಲೆ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತವೆ.
ಕಳೆದ ವಾರ ಜಕರ್ತಾದಲ್ಲಿ ನಡೆದ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ ಶೃಂಗಸಭೆಗೆ ಕ್ವಿನ್ ಗ್ಯಾಂಗ್ ಗೈರು ಹಾಜರಾಗಿದ್ದರು. ಜೂನ್ 25ರಂದು ಬೀಜಿಂಗ್‌ನಲ್ಲಿ ವಿಯೇಟ್ನಾಂ, ರಷ್ಯಾ ಮತ್ತು ಶ್ರೀಲಂಕಾದ ರಾಯಭಾರಿಗಳನ್ನು ಭೇಟಿಯಾಗಿದ್ದರು. ಅವರು ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಈ ಭೇಟಿಯಲ್ಲಿಯೇ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಚಂದ್ರನ ವೀಕ್ಷಣೆಗೆ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ: ಚಂದ್ರಯಾನ-3 ಲೇವಡಿ ಮಾಡಿದ ಪಾಕಿಸ್ತಾನ ಮಾಜಿ ಸಚಿವ
Advertisement
Advertisement
ಕ್ವಿನ್ ಗ್ಯಾಂಗ್ ಸತತ ಮೂರು ವಾರಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದ ಹಿನ್ನೆಲೆ ಅವರ ಸ್ಥಾನವನ್ನು ದೇಶದ ಉನ್ನತ ರಾಜತಾಂತ್ರಿಕ ಮತ್ತು ಮುಖ್ಯಸ್ಥರಾಗಿರುವ ವಾಂಗ್ ಯೀ (Wang Yi) ಅವರು ತೆಗೆದುಕೊಂಡಿದ್ದಾರೆ. ಅಲ್ಲದೇ ಕ್ವಿನ್ ಅವರ ಅನುಪಸ್ಥಿತಿಯಲ್ಲಿ ಚೀನಾದ ಅಂತರಾಷ್ಟ್ರೀಯ ಸಂಬಂಧಗಳನ್ನು ಮುನ್ನಡೆಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಸಂಬಂಧಿಸಿದ 105 ಪ್ರಾಚೀನ ವಸ್ತುಗಳನ್ನು ವಾಪಸ್ ನೀಡಿದ ಅಮೆರಿಕ
Advertisement
ಕ್ವಿನ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅವರು ಕಣ್ಮರೆಯಾಗಿದ್ದಾರೆ ಎಂದು ಚೀನಾ ಅಧಿಕೃತವಾಗಿ ಹೇಳಿದೆ. ಆದರೆ ಅವರು ಚಿಕಿತ್ಸೆ ಪಡೆಯುತ್ತಿರುವ ಅಥವಾ ಆಸ್ಪತ್ರೆಯಲ್ಲಿರುವ ಯಾವುದೇ ಫೋಟೋಗಳು ಹೊರಬಾರದ ಕಾರಣ ನಾಪತ್ತೆಯಾಗಿದ್ದರೆ ಎಂಬ ವದಂತಿಗಳು ಎಲ್ಲೆಡೆ ಕೇಳಿಬರುತ್ತಿವೆ. ಇದನ್ನೂ ಓದಿ: ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆಗೆ ಮತ್ತೆ ಹಾನಿ; ರಷ್ಯಾ-ಕ್ರಿಮಿಯಾ ಸಂಪರ್ಕ ಕಡಿತ
Advertisement
ವದಂತಿಗಳ ಪ್ರಕಾರ ಕ್ವಿನ್ ಅವರು ಹಾಂಗ್‌ಕಾಂಗ್ ಮೂಲದ ಫೀನಿಕ್ಸ್ ಟವಿಯೊಂದಿಗೆ ಸಂಯೋಜಿತವಾಗಿರುವ ಫೂ ಕ್ಸಿಯಾಟಿನ್ ಎಂಬ ಟವಿ ಶೋ ಹೋಸ್ಟ್‌ನೊಂದಿಗೆ ಸಂಬಂಧ ಹೊಂದಿದ್ದರು. ಅಲ್ಲದೇ ಅವರು ಮದುವೆಗು ಮುನ್ನವೇ ಫೂ ಕ್ಸಿಯಾಟಿನ್ ಅವರೊಂದಿಗೆ ಮಗುವನ್ನು ಹೊಂದಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಮೆಜಾನ್ ಕಾಡಲ್ಲಿ 40 ದಿನಗಳ ಬಳಿಕ ಪತ್ತೆಯಾಗಿ ಆಸ್ಪತ್ರೆ ಸೇರಿದ್ದ ಮಕ್ಕಳು ಡಿಸ್ಚಾರ್ಜ್
ಚೀನಾ ಅಧ್ಯಕ್ಷ ಕ್ಸಿ ಅವರ ವಿಶ್ವಾಸಾರ್ಹ ಮಿತ್ರ ಮತ್ತು ಸಂವಾದಕರಾಗಿದ್ದ ಕ್ವಿನ್ (57) ಅವರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿದೇಶಾಂಗ ಸಚಿವರನ್ನಾಗಿ ನೇಮಿಸಿದ್ದರು. ಅವರು ದೇಶದ ಅತ್ಯಂತ ಕಿರಿಯ ಅಧಿಕಾರಿಗಳಲ್ಲಿ ಒಬ್ಬರು. ಇದನ್ನೂ ಓದಿ: ನೇಪಾಳದ ಆಸ್ಪತ್ರೆ-ಶಾಲೆಗಳಿಗೆ ಅಂಬುಲೆನ್ಸ್, ಶಾಲಾ ವಾಹನ ಗಿಫ್ಟ್ ಕೊಟ್ಟ ಭಾರತ
ಒಂದು ವೇಳೆ ಅವರು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವುದೇ ಆದರೇ ಮತ್ತೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆಯೇ ಅಥವಾ ವದಂತಿಗಳ ಊಹಾಪೋಹಗಳು ನಿಜವಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ರೂಪಾಯಿ, ದಿರ್ಹಾಮ್ ವ್ಯವಹಾರಕ್ಕೆ ಭಾರತ, ಯುಎಇ ಒಪ್ಪಿಗೆ
Web Stories