ನೀವು ಕೂದಲು ಕತ್ತರಿಸಲು ನಿರ್ಧರಿಸಿದಾಗ ಮೊದಲು ಯೋಚಿಸುವುದೇ ಚೆನ್ನಾಗಿ ಕಾಣಿಸಬೇಕು ಎಂದು. ಆದರೆ ನಿಮ್ಮ ಮೂದಲು ಕತ್ತರಿಸುವುದಕ್ಕೂ ಮೊದಲು ಗಮನಹರಿಸಬೇಕಿರುವುದು, ಹೇರ್‌ಕಟ್ ನಿಮ್ಮ ಮುಖಕ್ಕೆ ಹೊಂದುತ್ತದೆಯೇ ಇಲ್ಲವೇ ಎಂಬುದು.
ಹೇರ್ ಸ್ಟೈಲಿಸ್ಟ್‌ಗಳು ನಿಮ್ಮ ಹೇರ್ ಕಟ್ ಮಾಡುವಾಗ ಹಲವು ಆಯ್ಕೆಗಳನ್ನು ನೀಡುತ್ತಾರೆ. ಯಾವುದೋ ಟ್ರೆಂಡಿ ಎನ್ನುವುದಕ್ಕಿಂತ ಮುಖದ ಆಕಾರಕ್ಕೆ ಹೊಂದುವ ಶೇಪ್ ಕೊಡಿಸುವುದೇ ಉತ್ತಮ ಅಲ್ವಾ? ನಿಮ್ಮ ಮುಖದ ಆಕಾರ ಹೇಗೆಯೇ ಇರಲಿ. ಆದರೆ ಕೂದಲು ಕತ್ತರಿಸಿದ ಬಳಿಕ ಅದರ ಫಲಿತಾಂಶ ಆಕರ್ಷಕವಾಗಿರಬೇಕು ಹಾಗೂ ಮುಖ ಆದಷ್ಟು ಸ್ಲಿಮ್ ಆಗಿ ಕಾಣಿಸಬೇಕು ಎಂದೇ ಹೆಚ್ಚಿನವರು ಭಾವಿಸುತ್ತಾರೆ.
Advertisement
Advertisement
ಯಾವುದೋ ಹೇರ್ ಕಟ್ ಮಾಡಿಸುವುದಕ್ಕಿಂತಲೂ ಮೊದಲು ಸ್ವಲ್ಪ ಯೋಚಿಸಿ. ಕೆಲವರ ಸಲಹೆ ತಿಳಿದು ಬಳಿಕ ನಿಮ್ಮ ಕೂದಲು ಕತ್ತರಿಸಲು ಮುಂದಾಗಿ. ನಿಮ್ಮ ಮುಖದ ಶೇಪ್‌ಗೆ ಅನುಗುಣವಾಗಿ ಯಾವ ರೀತಿ ಹೇರ್‌ಸ್ಟೈಲ್ ಮಾಡಬಹುದೆಂಬ ಕೆಲವು ಟಿಪ್ಸ್ ಇಲ್ಲಿವೆ.
Advertisement
ಬ್ಯಾಂಗ್ಸ್:
ಎತ್ತರದ ಹಣೆ ಅಥವಾ ಅಗಲವಾದ ಕೆನ್ನೆ ಹೊಂದಿರುವವರಿಗೆ ಬ್ಯಾಂಗ್ಸ್ ಅತ್ಯುತ್ತಮ ಆಯ್ಕೆ. ಹಣೆಯ ವಿಶಾಲ ಭಾಗವನ್ನು ಮುಚ್ಚಲು ಹುಬ್ಬಿನವರೆಗಿನ ಬ್ಯಾಂಗ್ಸ್ ಸಹಾಯ ಮಾಡಿದರೆ, ಕೆನ್ನೆಯ ವಿಶಾಲ ಭಾಗವನ್ನು ಮರೆಮಾಚಲು ಕಿವಿವರೆಗಿನ ಉದ್ದದ ಬ್ಯಾಂಗ್ಸ್ ಸಹಾಯ ಮಾಡುತ್ತದೆ. ಇಲ್ಲಿವರೆಗೂ ನೀವು ಬ್ಯಾಂಗ್ಸ್ ಕಟ್ ಟ್ರೈ ಮಾಡಿಲ್ಲವೆಂದರೆ ಮಾರುಕಟ್ಟೆಗಳಲ್ಲಿ ನಕಲಿ ಬ್ಯಾಂಗ್ಸ್‌ಗಳು ಲಭ್ಯವಿರುತ್ತವೆ. ಅವುಗಳನ್ನು ಒಮ್ಮೆ ಟ್ರೈ ಮಾಡಿ. ನಿಮ್ಮ ಫೇಸ್ ಕಟ್‌ಗೆ ಸೂಟ್ ಆಗುತ್ತೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿ, ಕೊನೆಗೆ ಕತ್ತರಿಸುವ ಬಗ್ಗೆ ನಿರ್ಧಾರ ಮಾಡಿ. ಇದನ್ನೂ ಓದಿ: ಇಂಡಿಯನ್ ಸ್ಕಿನ್ ಟೋನ್‌ಗೆ ಈ ಬಣ್ಣದ ಲಿಪ್‌ಸ್ಟಿಕ್‌ಗಳು ಬೆಸ್ಟ್
Advertisement
ಬಾಬ್:
ಎತ್ತರದ ಕೆನ್ನೆ ಮೂಳೆ ಹಾಗೂ ಮೊನಚಾದ ಗಲ್ಲವನ್ನು ನೀವು ಹೊಂದಿದ್ದರೆ, ಭುಜದ ವರೆಗೆ ಬರುವ ಬಾಬ್ ಕಟ್ ನಿಮಗೆ ಬೆಸ್ಟ್. ಈ ಮುಖದ ಆಕರ ನಿಮ್ಮ ಭುಜದ ವರೆಗೆ ಬರುವ ಕೂದಲಿನೊಂದಿಗೆ ಜೋಡಿಸಿದರೆ, ಉತ್ತಮವಾಗಿ ಕಾಣಿಸುತ್ತದೆ. ಮುಖ್ಯವಾಗಿ ನೀವು ಜನರ ಗಮನವನ್ನು ನಿಮ್ಮ ಗಲ್ಲದ ಕಡೆಗೆ ಸೆಳೆಯಲು ಬಯಸುವುದಿಲ್ಲ ಎಂದಾದಲ್ಲಿ ಈ ಕಟ್ ನಿಮಗೆ ಸೂಕ್ತ. ಇದನ್ನೂ ಓದಿ: ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ
ದುಂಡು ಮುಖಕ್ಕೆ ಈ ಕಟ್ ಬೆಸ್ಟ್:
ನೀವು ದುಂಡು ಮುಖ ಹೊಂದಿದ್ದೀರಾ? ನಿಮ್ಮ ಮುಖವನ್ನು ಉದ್ದವಾಗಿ ಕಾಣಿಸುವಂತೆ ಮಾಡಲು, ದುಂಡು ಮುಖದ ಅಗಲವನ್ನು ಕಡಿಮೆ ಮಾಡುವುದು ಅಗತ್ಯ. ಇದಕ್ಕಾಗಿ ಉದ್ದವಾದ ಬಾಬ್ ಕಟ್ ಸೂಕ್ತ. ಈ ಕಟ್ ನಿಮ್ಮ ಮುಖವನ್ನು ಸ್ಲಿಮ್ ಆಗಿ ಕಾಣಿಸುವಂತೆ ಮಾಡುತ್ತದೆ. ಕೂದಲ ಕೊನೆಯಲ್ಲಿ ಕೊಂಚ ಕರ್ಲ್ ಇದ್ದಲ್ಲಿ ಪರ್ಫೆಕ್ಟ್ ಲುಕ್ ನಿಮ್ಮದಾಗುತ್ತದೆ. ಏಕೆಂದರೆ ಕೂದಲ ಕೆಳಭಾಗದ ವಕ್ರತೆ ನಿಮ್ಮ ಕೆನ್ನೆಯ ಅಗಲವನ್ನು ಮರೆಮಾಚಲು ಸಹಾಯ ಮಾಡುತ್ತದೆ.
ನೀವು ಯಾವುದೇ ಮುಖದ ಆಕಾರವನ್ನು ಹೊಂದಿದ್ದರೂ ಕೊನೆಯದಾಗಿ ಕೂದಲು ಕತ್ತರಿಸುವಾಗ ಅದಕ್ಕೆ ಹೊಂದುವಂತಹ ಆಕಾರದಲ್ಲಿ ಕತ್ತರಿಸುವುದೇ ಸೂಕ್ತ. ನಿಮ್ಮ ಮುಖಕ್ಕೆ ಹೊಂದಿಕೊಳ್ಳುವ ಹೇರ್ ಕಟ್‌ಗಳು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಕೂದಲ ವಿನ್ಯಾಸದ ಬಳಿಕ ಅದನ್ನು ಹೆಮ್ಮೆಯಿಂದ ಇರಿಸಿಕೊಳ್ಳಿ.