ಬೀದರ್: ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಳ್ಳಾಟಕ್ಕೆ ರೈತರು ರೋಸಿ ಹೋಗಿದ್ದು, ಕಾರ್ಖಾನೆಯ ಅಧ್ಯಕ್ಷರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
Advertisement
ಒಪ್ಪಂದದ ಪ್ರಕಾರ ಕಬ್ಬು ಕಟಾವಿನ ದಿನಾಂಕದಂದು ಕಬ್ಬು ಕಟಾವು ಮಾಡಿಕೊಳ್ಳಬೇಕು. ಆದರೆ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯವರು ಕೇಂದ್ರ ಸಚಿವ ಭಗವಂತ್ ಖೂಬಾ ಸೇರಿದಂತೆ ರಾಜಕಾರಣಿಗಳ ಪ್ರಭಾವದಿಂದಾಗಿ ಬೆಂಬಲಿಗರ ಕಬ್ಬು ಮಾತ್ರ ಕಟಾವು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
Advertisement
ಲಕ್ಷ ಲಕ್ಷ ಸಾಲ ಮಾಡಿ ಕಬ್ಬು ಬೆಳೆದ ಸಾಮಾನ್ಯ ರೈತರ ಕಬ್ಬು ಕಟಾವು ಇಲ್ಲದೆ ಜಮೀನಿನಲ್ಲೇ ಒಣಗಿ ಹಾಳಾಗುತ್ತಿದೆ. ಇದ್ರಿಂದ ಕಂಗಟಿ, ಶ್ರೀ ಮಂಡಲ್, ನೇಮತಾಬಾದ್, ಅಲ್ಲಾಪೂರ್, ನವಲಾಸಪೂರ್ ಸೇರಿದಂತೆ ಬೀದರ್ ತಾಲೂಕಿನ ಹತ್ತಾರು ಹಳ್ಳಿಗಳ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಮೇವು ಹಗರಣ – ಲಾಲು ಪ್ರಸಾದ್ ಯಾದವ್‌ಗೆ 5 ವರ್ಷ ಜೈಲು, 60 ಲಕ್ಷ ದಂಡ
Advertisement
ಕೇಂದ್ರ ಸಚಿವರು ಸೇರಿದಂತೆ ಪ್ರಭಾವಿಗಳ ಬೆಂಬಲಿಗರ ಕಬ್ಬು ಮಾತ್ರ ಕಟಾವು ಮಾಡುತ್ತಿದೆ. ನಮ್ಮಂತ ಸಾಮಾನ್ಯ ರೈತರ ಗತಿ ಏನು? ಎಂದು ಪ್ರಶ್ನೆ ಮಾಡಿದ್ದಾರೆ. ಡಿ.ಕೆ.ಸಿದ್ರಾಮ್ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಮೇಲೆ ಸಕ್ಕರೆ ಕಾರ್ಖಾನೆಯಲ್ಲಿ ಈ ರೀತಿ ಕಳ್ಳಾಟ ಮಾಡುವ ಮೂಲಕ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಬೇಸತ್ತ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.