ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ (K Venkatesh) ಅವರಿಗೆ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ಮಂಗಳವಾರ ಜಿಲ್ಲೆಯ ರೈತರು ಫುಲ್ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೆದಿದೆ.
ಸ್ವಾತಂತ್ರ‍್ಯ ಬಂದು 76 ವರ್ಷಕಳೆದರೂ ಜಿಲ್ಲೆಗೆ ಇನ್ನೂ ಸರಿಯಾದ ಮೂಲ ಸೌಕರ್ಯಗಳು ಸಿಕ್ಕಿಲ್ಲ. ಕೇವಲ ಸರ್ಕಾರಿ (Government) ಕಾರ್ಯಕ್ರಮದಲ್ಲಿ ಮಾತ್ರ ಬಂದು ಭಾಗಿಯಾಗುತ್ತೀರಿ ಹೊತು ಕುಂದುಕೊರತೆಗಳನ್ನು ಬಗೆಹರಿಸುವ ಬಗ್ಗೆ ಗಮನ ಹರಿಸುತ್ತಿಲ್ಲ. ಮಳೆ ಇಲ್ಲದೆ ಫಸಲುಗಳು ನೆಲಕಚ್ಚಿವೆ. ಅನ್ನದಾತ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಸಾಲದಲ್ಲಿದ್ದಾರೆ. ನೀವು ಮಂತ್ರಿಗಳಾಗಿದ್ದೀರಾ ನಿಮ್ಮದೇ ಸರ್ಕಾರ ಇದೆ, ಈಗಲಾದರೂ ನಮಗೆ ಸೂಕ್ತ ನ್ಯಾಯಕೊಡಿಸಿ ಅಂತಾ ಸಚಿವರನ್ನ ತರಾಟೆಗೆ ತೆಗೆದುಕೊಂಡರು.
Advertisement
Advertisement
ಈ ವೇಳೆ ರೈತರನ್ನ (Farmers) ಸಮಾಧಾನಪಡಿಸಲು ಮುಂದಾದ ಸಚಿವರು ಶೀಘ್ರದಲ್ಲೇ ಸಮಸ್ಯೆಗಳನ್ನ ಬಗೆಹರಿಸುವ ಬಗ್ಗೆ ಗಮನಕೊಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಾರಿಗೆ ಇಲಾಖೆ ಸಿಬ್ಬಂದಿಯ ಯಡವಟ್ಟು – ಧ್ವಜಾರೋಹಣ ವೇಳೆ ಅಂಬೇಡ್ಕರ್ ಪೋಟೋ ಇಡದ್ದಕ್ಕೆ ಆಕ್ರೋಶ
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು 4 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಬೀಳುತ್ತೆ ಅನ್ನೋ ಪ್ರಶ್ನೆಗೆ ಉತ್ತರಿಸಿ, ಯತ್ನಾಳ್ (Basangouda Patil Yatnal) ಕನಸು ಕಾಣ್ತಿದ್ದಾರೆ. ಪಾಪ ಅವರ ಕನಸನ್ನು ನಾವು ಯಾಕೆ ಭಗ್ನ ಮಾಡಬೇಕು, ಹೇಳ್ಕೊಂಡು ತಿರುಗ್ಲಿ ಬಿಡಿ. ಅವರಿಗೆ ಕನಸು ಕಾಣಬೇಡಿ ಅಂತಾ ಹೇಳೋಕಾಗುತ್ತಾ ಎಂದು ಟಾಂಗ್ ನೀಡಿದರು.
Advertisement
ಸಚಿವ ಚಲುವರಾಯಸ್ವಾಮಿ ವಿರುದ್ದ ಭ್ರಷ್ಟಾಚಾರ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವರು, ಆರೋಪ ಸುಳ್ಳು ಅಂತಾ ಸಾಭೀತಾಗ್ತಾ ಇದೆ. ಸುಮ್ಮಸುಮ್ಮನೆ ಆರೋಪ ಮಾಡಿದ್ದಾರೆ. ಯಾವ ಆರೋಪ ಸಾಬೀತು ಮಾಡಿದ್ದಾರೆ ಹೇಳಿ? ಇದು ವೈಯಕ್ತಿಕ ದ್ವೇಷ ಅಲ್ಲದೆ ಇನ್ನೇನ್ನು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರ, 40% ಕಮಿಷನ್ ತಗೊಂಡಿಲ್ಲ ಅಂತ ಬಿಜೆಪಿಯವರು ಮನೆದೇವರ ಮೇಲೆ ಆಣೆ ಮಾಡ್ಲಿ: ರಾಮಲಿಂಗಾ ರೆಡ್ಡಿ
Web Stories