ಬೆಂಗಳೂರು: ಮಹದಾಯಿ ನದಿ ನೀರು ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ. ನೂರಾರು ರೈತರು ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮುಂದುವರೆಸಿದ್ದಾರೆ.
Advertisement
ಕೊರೆಯುವ ಚಳಿಯಲ್ಲಿ ರೈತರು ರಾತ್ರಿ ರಸ್ತೆಯಲ್ಲೆ ವಾಸ್ತವ್ಯ ಹೂಡಿದ್ದು, ರಸ್ತೆ ಮತ್ತು ಫುಟ್‍ಪಾತ್ ಮೇಲೆ ಮಲಗಿ ನಿದ್ದೆ ಮಾಡಿದ್ರು. ಯಡಿಯೂರಪ್ಪನವರು ಇಲ್ಲಿಗೆ ಬರಬೇಕು. ನಮ್ಮ ಮನವಿ ಸ್ವೀಕರಿಸಬೇಕು. ಅಲ್ಲಿವರೆಗೆ ಜಪ್ಪಯ್ಯ ಅಂದ್ರೂ ಕದಲಲ್ಲ ಅಂತ ಪಟ್ಟು ಹಿಡಿದಿದ್ದಾರೆ.
Advertisement
Advertisement
ಪ್ರತಿಭಟನಾನಿರತರಿಗೆ ಸಿಲಿಕಾನ್ ಸಿಟಿ ಜನ ತಿಂಡಿ, ಊಟೋಪಚಾರದ ವ್ಯವಸ್ಥೆ ಮಾಡ್ತಿದ್ದಾರೆ. ಅತ್ತ ಹಾವೇರಿಯ ಪರಿವರ್ತನಾ ರ‍್ಯಾಲಿಯಲ್ಲಿ ಭಾನುವಾರದಂದು ಮಾತನಾಡಿದ್ದ ಯಡಿಯೂರಪ್ಪ, ಹೋರಾಟಗಾರರೇ ಮೊದಲು ಬಿಜೆಪಿ ಕಚೇರಿ ಮುಂದಿನಿಂದ ಎದ್ದೇಳಿ. ನೀವು ಸಿಎಂ ಮನೆ ಮುಂದೆ ಹೋರಾಟ ಮಾಡಿ ಅಂತಾ ತಾಕೀತು ಮಾಡಿದ್ದಾರೆ.
Advertisement
ಈ ಮಧ್ಯೆ ಮಹದಾಯಿ ನಮ್ಮ ತಾಯಿ. ರಾಜಕೀಯಕ್ಕಾಗಿ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ. ಯಾವುದೇ ಕಾರಣಕ್ಕೂ ನೀರು ಹರಿಸೋ ಪ್ರಶ್ನೆಯೇ ಇಲ್ಲ ಅಂತ ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ನಾಯಕರಿಗೂ ಪರೋಕ್ಷವಾಗಿ ಪಾಲೇಕರ್ ಉತ್ತರ ನೀಡಿದ್ದಾರೆ.