ಚಿಕ್ಕಬಳ್ಳಾಪುರ: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತ ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದ ಮಾರುತಿ ನಗರದಲ್ಲಿ ನಡೆದಿದೆ.
ಮಾರುತಿ ನಗರದ ನಿವಾಸಿ ದೇವಿರಮ್ಮ (48) ಮೃತ ರೈತ ಮಹಿಳೆ. ಕೃಷ್ಣಪ್ಪ ಎಂಬುವವರ ಜಮೀನು ಪಕ್ಕದಲ್ಲಿ ಹುಲ್ಲು ಕಟಾವು ಮಾಡುವಾಗ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಿಚ್ಛೇದನ ಜೀವನಾಂಶ ಹಣ ಹೊಂದಿಸಲಾಗಿಲ್ಲ ಅಂತ ಪತಿ ಆತ್ಮಹತ್ಯೆ
ಇನ್ನೂ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವ ಮಾಹಿತಿಯನ್ನ ಜಮೀನು ಮಾಲೀಕ ನಿನ್ನೆ ಸಂಜೆಯೇ ಲೈನ್ ಮ್ಯಾನ್‍ಗೆ ತಿಳಿಸಿದ್ದರು ಎನ್ನಲಾಗಿದೆ. ಆದರೂ ಕೂಡ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಲೀ ಅಥವಾ ವಿದ್ಯುತ್ ತಂತಿ ದುರಸ್ಥಿ ಮಾಡುವಾದಗಲೀ ಮಾಡಿಲ್ಲ.
ರೈತ ಮಹಿಳೆಯ ಜೀವ ಬಲಿಯಾಗಲು ಬೆಸ್ಕಾಂ ಅಧಿಕಾರಿಗಳೇ ಕಾರಣ ಅಂತ ಸ್ಥಳಕ್ಕೆ ಬಂದ ಬೆಸ್ಕಾಂ ಅಧಿಕಾರಿಗಳನ್ನ ಮೃತಳ ಕುಟುಂಬಸ್ಥರು ಹಾಗೂ ರೈತ ಮುಖಂಡರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಂತಿ ತುಂಡಾಗಿ ಬಿದ್ದಿರೋ ಮಾಹಿತಿ ನೀಡಿದರು ಯಾಕೆ ಕ್ರಮ ಕೈಗೊಂಡಿಲ್ಲ, ನಿಮಗೆ ಜವಾಬ್ದಾರಿ ಇಲ್ಲವೇ? ಈಗ ಜೀವ ಹೋದ ಮೇಲೆ ಬಂದು ಏನ್ ಮಾಡ್ತೀರಿ ಅಂತ ಖಾರವಾಗಿ ಬೆಸ್ಕಾಂ ಎಇಇ ಹಾಗೂ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಟಾಕಿ ಅಂಗಡಿಯಲ್ಲಿ ಸ್ಫೋಟದಿಂದ ಇಬ್ಬರು ಸಾವು- ತಲಾ 2 ಲಕ್ಷ ಪರಿಹಾರ ಘೋಷಿಸಿದ ಜಮೀರ್