ಬೆಳಗಾವಿ: ಸಿಎಂ ಬಸವರಾಜ್ ಬೊಮ್ಮಾಯಿ ಬೆಳಗಾವಿ ಸುವರ್ಣಸೌಧದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸುವ ಮುನ್ನ ರೈತ ಮುಖಂಡರೊಬ್ಬರು ಸಿಎಂ ಕಾಲಿಗೆ ಬಿದ್ದು, ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ ಘಟನೆ ನಡೆಯಿತು.
ಬೆಳಗಾವಿಯ ಸುವರ್ಣಸೌಧದಲ್ಲಿ ಕೋವಿಡ್ ಹಾಗೂ ಪ್ರವಾಹ ಪೀಡಿತ ಪರಿಹಾರ ಕಾರ್ಯಗಳ ಕುರಿತು ಸಭೆ ನಡೆಸಲು ಸುವರ್ಣಸೌಧಕ್ಕೆ ಆಗಮಿಸುತ್ತಿದ್ದಂತೆ ರೈತ ಮುಖಂಡರು ಸಿಎಂ ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು. ಸುವರ್ಣಸೌಧಕ್ಕೆ ಕಚೇರಿಗಳ ಸ್ಥಳಾಂತರ, ಶುಗರ್ ಕಮಿಷನರ್ ಕಚೇರಿ ಸ್ಥಳಾಂತರಕ್ಕೆ ಮನವಿ ಮಾಡಿದ ರೈತರು, ಬೆಳಗಾವಿಗೆ ಸಕ್ಕರೆ ಆಯುಕ್ತರ ಕಚೇರಿ ಸ್ಥಾಪಿಸುವಂತೆ ಒತ್ತಾಯಿಸಿ ರೈತ ಮುಖಂಡ ಪ್ರಕಾಶ್ ನಾಯಕ್ ಎಂಬವರು ಸಿಎಂ ಕಾಲಿಗೆ ಬಿದ್ದು ಸಿಎಂ ಗಮನ ಸೆಳೆದರು. ಇದನ್ನೂ ಓದಿ: ರಾಜ್ಯದಲ್ಲಿ ಕಳೆದ ಏಳು ತಿಂಗಳಲ್ಲಿ 2,139 ಮಂದಿಗೆ ಡೆಂಗ್ಯೂ
ಕೆಲ ನಿಮಿಷಗಳ ಕಾಲ ರೈತರ ಜೊತೆ ಮಾತುಕತೆ ನಡೆಸಿದ ಬೊಮ್ಮಾಯಿ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಇದೇ ವೇಳೆ ಸಿಎಂ ಸುವರ್ಣಸೌಧಕ್ಕೆ ಆಗಮಿಸುತ್ತಿದ್ದಂತೆ ಗೌರವ ವಂದನೆ ಸಲ್ಲಿಸಲು ಪೊಲೀಸ್ ಸಿಬ್ಬಂದಿ ಮುಂದಾಗಿದ್ದಕ್ಕೆ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು. ಪದೇ ಪದೇ ಗೌರವ ವಂದನೆ ಸಲ್ಲಿಸುವುದು ಬೇಡ. ದಿನಕ್ಕೆ ಒಮ್ಮೆ ಮಾತ್ರ ಸಾಕು ಎಂದು ಸಿಎಂ ಪೊಲೀಸ್ ಆಯುಕ್ತರ ವಿರುದ್ಧ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ನಿಮ್ಮ ಹೊಟ್ಟೆ ಇನ್ನೂ ಕಡಿಮೆಯಾಗಿಲ್ವಲ್ರಿ, ಈಗಲಾದರೂ ಜನ ಪರ ಕೆಲಸ ಮಾಡಿ- ಸ್ಲಂ ಬೋರ್ಡ್ ಸಿಇಒಗೆ ಸೋಮಣ್ಣ ತರಾಟೆ