ಬೆಂಗಳೂರು: ರೈತರ (Farmers) ಸಾಲಮನ್ನಾ (Loan waiver) ಆಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ಸರ್ಕಾರ ನಿರಾಸೆ ಮೂಡಿಸಿದೆ. ರೈತರ ಸಾಲಮನ್ನಾ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿಟಿ ರವಿ (CT Ravi) ಪ್ರಶ್ನೆಗೆ ಉತ್ತರಿಸಿದ ಅವರು, ಸಾಲಮನ್ನಾ ಮಾಡುವ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: Union Budget 2024: ಬಿಹಾರ, ಆಂಧ್ರಪ್ರದೇಶಕ್ಕೆ ಬಜೆಟ್‌ನಲ್ಲಿ ಭರ್ಜರಿ ಅನುದಾನ
Advertisement
Advertisement
ಸಿಟಿ ರವಿ ಮಾತನಾಡಿ, ಸಹಕಾರ ಸಂಘದಲ್ಲಿ ಸರಿಯಾಗಿ ಸಾಲ ಸೌಲಭ್ಯ ನೀಡುತ್ತಿಲ್ಲ. ಅಗತ್ಯವಾಗಿ ಸಾಲ ಬೇಕಾಗಿರುವವರಿಗೆ ಸಾಲ ಸಿಗುತ್ತಿಲ್ಲ. ತಮಗೆ ಬೇಕಾದವರಿಗೆ ಮಾತ್ರ ಸಾಲ ನೀಡುವ ವ್ಯವಸ್ಥೆ ಸಹಕಾರಿ ಬ್ಯಾಂಕುಗಳಲ್ಲಿ ಇವೆ. ಬಾಗಿಲು ಹಾಕಿಕೊಂಡು ಕಿಟಕಿಯಲ್ಲಿ ವ್ಯವಹಾರ ಮಾಡುವ ವ್ಯವಸ್ಥೆ ಸಹಕಾರಿ ಇಲಾಖೆಯಲ್ಲಿ ಇದೆ ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕು. ರೈತರ ಸಾಲಮನ್ನಾ ಸರ್ಕಾರ ಮಾಡಬೇಕು. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 1 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ರೈತರ ನೆರವಿಗೆ ಬರಬೇಕು. 2023ರ ಭಾಷಣದಲ್ಲಿ ಈ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಹೀಗಾಗಿ ರೈತರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಉದ್ಯೋಗಿಗಳಿಗೆ 17,500 ರೂ. ಉಳಿತಾಯ – ಮೊದಲು ತೆರಿಗೆ ಎಷ್ಟಿತ್ತು? ಈಗ ಏನು ಬದಲಾವಣೆಯಾಗಿದೆ?
Advertisement
Advertisement
ಇದಕ್ಕೆ ಸಚಿವ ರಾಜಣ್ಣ ಉತ್ತರ ನೀಡಿ, 2024-25ರ ಸಾಲಿನಲ್ಲಿ ಜೂನ್ ಅಂತ್ಯದವರೆಗೆ ಸಹಕಾರಿ ಸಂಘಗಳು ಹೊಸದಾಗಿ ಅರ್ಜಿ ಸಲ್ಲಿಸಿದ 9,797 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 93.49 ಕೋಟಿ ರೂ. ಬೆಳೆ ಸಾಲ ನೀಡಿದೆ. 2,815 ರೈತರಿಗೆ 138.36 ಕೋಟಿ ರೂ. ಮಧ್ಯಮ ಸಾಲ, ದೀರ್ಘಾವಧಿ ಸಾಲ ನೀಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಹೆಚ್ಚು ಸಾಲಮನ್ನಾ ಮಾಡಿದೆ. ರಾಜಕೀಯಗೋಸ್ಕರ ರೈತರನ್ನು ಬಳಕೆ ಮಾಡೋದು ಬೇಡ. ಬಿಜೆಪಿ ಅವರು ಸಾಲಮನ್ನಾ ಮಾಡಿ ಎನ್ನುವ ಬದಲು ರಾಷ್ಟ್ರೀಯ ಬ್ಯಾಂಕ್ ಸಾಲಮನ್ನಾ ಕೇಂದ್ರ ಮಾಡಲಿ. ಅದನ್ನು ನೋಡಿಕೊಂಡು ನಾವು ಬೇಕಾದರೆ ಮಾಡುತ್ತೇವೆ. ಹೆಚ್ಚು ಸಾಲಮನ್ನಾ ಮಾಡಿರೋದು ಕಾಂಗ್ರೆಸ್ ಸರ್ಕಾರ. ಇದರಲ್ಲಿ ಬಿಜೆಪಿ ರಾಜಕೀಯ ಮಾಡೋದು ಬೇಡ. ಹಣಕಾಸು ಇತಿಮಿತಿಯಲ್ಲಿ ಸಾಲ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹರೀಶ್ ಪೂಂಜಾ ಗೂಂಡಾ ಎಂದ ರಾಜೇಗೌಡ: ವಿಧಾನಸಭೆಯಲ್ಲಿ ಗದ್ದಲ