ಕೊಪ್ಪಳ: ಸಿಎಂ ಸಾಲಮನ್ನಾ ಯೋಜನೆ ಇದೀಗ ರಿವರ್ಸ್ ಗೇರ್ ಹಾಕಿದ್ದು, ಕಳೆದ ಮೂರು ನಾಲ್ಕು ತಿಂಗಳಲ್ಲಿ ಮನ್ನಾವಾಗಿದ್ದ ಸಾಲವೆಲ್ಲಾ ವಾಪಸ್ ಆಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸಿಎಂ ಅವರ ಸಾಲಮನ್ನಾ ಯೋಜನೆಯಿಂದ ಖುಷಿಯಾಗಿದ್ದ ರೈತರಿಗೆ ಇದೀಗ ಬಿಗ್ ಶಾಕ್ ಆಗಿದೆ. ಹೌದು. ಸಿಎಂ ಅವರು ಅಂದುಕೊಂಡಂತೆ ಬೇಳೆ ಸಾಲಮನ್ನಾ ಮಾಡಿದ್ದರು. 50 ಸಾವಿರದಂತೆ ಎರಡು ಕಂತುಗಳಂತೆ ಒಟ್ಟು ಒಂದು ಲಕ್ಷ ರೂಪಾಯಿ ಸಾಲ ಮನ್ನಾವಾಗಿತ್ತು.
ಗಂಗಾವತಿ ತಾಲೂಕಿನ ಗುಂಡೂರು ಗ್ರಾಮದ ನಿಂಗಪ್ಪ ಅವರಿಗೆ ಐಸಿಐಸಿಐ ಬ್ಯಾಂಕ್ ಅಲ್ಲಿ ಮೂರು ಲಕ್ಷ ಬೇಳೆ ಸಾಲವಿತ್ತು. ಇವರ ಸಾಲ ಕೂಡ ಸಾಲಮನ್ನಾ ಯೋಜನೆಯಲ್ಲಿ ಮನ್ನಾವಾಗಿತ್ತು. ಹೀಗಾಗಿ ರೈತ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ ಇತ್ತೀಚಿಗೆ ಉಳಿದ ಸಾಲದ ಬಡ್ಡಿ ಕಟ್ಟಲು ಬ್ಯಾಂಕ್ ಗೆ ಹೋದಾಗ ಸಾಲಮನ್ನಾ ರಿಟರ್ನ್ ಆಗಿದೆ ಎನ್ನುವ ಸುದ್ದಿ ಕೇಳಿ ರೈತ ಕಂಗಾಲಾಗಿದ್ದಾರೆ.
ಯಾಕೆ? ಹೀಗಾಯ್ತು? ಎಂದು ಬ್ಯಾಂಕ್ ಮ್ಯಾನೇಜರ್ ಅವರನ್ನ ಕೇಳಿದರೆ, ಹೋಗಿ ಸಿಎಂ ಅವರನ್ನ ಕೇಳಿ ನಮಗೇನ್ ಗೊತ್ತು ಎನ್ನುತ್ತಿದ್ದಾರೆ. ಹಿಂಗಾದರೆ ನಾವು ಯಾರನ್ನ ಕೇಳೋದು ಎಂದು ರೈತ ನಿಂಗಪ್ಪ ನೋವನ್ನು ಹೊರ ಹಾಕಿದ್ದಾರೆ.