ರಾಯಚೂರು: ಚುನಾವಣೆ ಲಾಭಕ್ಕೆ ಸಾಲಮನ್ನಾ ಮಾಡಿದರೂ ತಪ್ಪಲ್ಲ ಈ ದಿಕ್ಕಿನಲ್ಲಿ ಸಿಎಂ ಸಿದ್ದರಾಮಯ್ಯನವರು ಯೋಚಿಸಬೇಕು ಅಂತ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ್ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಈಶ್ವರಪ್ಪ, ಕೇಂದ್ರ ಸರ್ಕಾರದ 700 ಕೋಟಿ ಬರ ಪರಿಹಾರ ಹಣ ರಾಜ್ಯ ಖಜಾನೆಯಲ್ಲಿದೆ ಬ್ಯಾಂಕುಗಳಿಗೆ ತಲುಪಿಲ್ಲ ಅಂತ ಆರೋಪಿಸಿದರು. ಸಿಎಂ ಸಾಲಮನ್ನಾ ಯೋಚನೆಯಲ್ಲಿದ್ದಾರೆ. ಈಗಲೇ ಸಾಲಮನ್ನಾ ಮಾಡಿದರೆ ಒಳ್ಳೆಯದು ಎಂದರು.
Advertisement
Advertisement
ಸಭಾಪತಿ ಶಂಕರಮೂರ್ತಿಯನ್ನ ಕೆಳಗಿಳಿಸುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಆಂತರಿಕ ಗೊಂದಲವಿದೆ. ಜಾತಿಗೊಂದು ಸ್ಥಾನಮಾನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಈಗ ಸಭಾಪತಿ ಸ್ಥಾನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಸ್‍ಆರ್ ಪಾಟೀಲ್ ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ. ಹೀಗಾಗಿ ಸಭಾಪತಿ ಸ್ಥಾನಕೊಟ್ಟು ಸಮಾಧಾನ ಮಾಡಲು ಮುಂದಾಗಿದ್ದಾರೆ ಎಂದರು.
Advertisement
ಬ್ರಿಗೇಡ್ ನ ಸಾಕಷ್ಟು ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆ. ಆದ್ರೆ ಬಿಜೆಪಿ ರಾಷ್ಟ್ರಾಧ್ಯಕರ ಸೂಚನೆ ಮೇರೆಗೆ ಹಿಂದೆ ಸರಿದಿದ್ದೇನೆ. ಬ್ರಿಗೇಡ್ ಕಾರ್ಯಕರ್ತರನ್ನು ಪಕ್ಷದಲ್ಲಿ ಸೇರಿಸಿಕೊಳ್ಳುತ್ತೇವೆ. ಓಬಿಸಿ ಮೋರ್ಚಾಕ್ಕೆ ಸಾಕಷ್ಟು ಜನ ಬರುತ್ತಿದ್ದಾರೆ ಅಂತ ಈಶ್ವರಪ್ಪ ಹೇಳಿದರು.