ಮಂಡ್ಯ: ಕಬ್ಬಿಗೆ (Sugarcane) ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಳೆದ ಹತ್ತು ದಿನಗಳಿಂದ ಮಂಡ್ಯದಲ್ಲಿ ರೈತರು (Farmers) ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಸ್ಥಳಕ್ಕೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.
Advertisement
ಕಳೆದ 11 ದಿನಗಳಿಂದ ಮಂಡ್ಯದ (Mandya) ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಅಹೋರಾತ್ರಿ ಧರಣಿ ನಿರತ ರೈತರು ನಿನ್ನೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿ ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಬಿಸಿಮುಟ್ಟಿಸಿದ್ರು. ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸುಮಲತಾ, ನಾನು ರೈತರ ಸಮಸ್ಯೆಯನ್ನು ನನ್ನ ಸಮಸ್ಯೆಯೆಂದು ಭಾವಿಸಿದ್ದೇನೆ. ಅಕ್ರಮ ಗಣಿಗಾರಿಕೆ, ಮನ್ಮುಲ್ ಹಾಲು (Milk) ನೀರು ಮಿಶ್ರಣ ಹಗರಣ ಸೇರಿದಂತೆ ಹಲವು ವಿಚಾರದಲ್ಲಿ ನಾನು ರೈತರ ಜೊತೆ ನಿಂತಿದ್ದೇನೆ. ಮುಂದೆಯು ನಿಮ್ಮ ಜೊತೆ ಇರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಎಷ್ಟು ದುಡಿದ್ರೂ ದುಡ್ಡು, ದುಡ್ಡು ಅಂತಾಳೆ – ಹೆಂಡತಿ ಟಾರ್ಚರ್‌ಗೆ ಮಂಡ್ಯದ ಪತಿ ಆತ್ಮಹತ್ಯೆ
Advertisement
Advertisement
ಅಲ್ಲದೇ ಕಬ್ಬಿನ ಬೆಲೆ ನಿಗದಿ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು, ಹಿಂದೆಯು ಸಿಎಂಗೆ ಈ ಕುರಿತು ಮನವಿ ಮಾಡಿದ್ದೇನೆ. ಮತ್ತೆ ಈ ಕುರಿತು ಸಿಎಂ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಪಾಲಿಗೆ ಸತ್ತು ಹೋಗಿವೆ – ರೈತರ ಆಕ್ರೋಶ