ಹುಬ್ಬಳಿ: ಅವರು ನೀರಿಗಾಗಿ ನಿರಂತರವಾಗಿ ಹೋರಾಟ ಮಾಡಿದ್ದರು. ಹಾಗಾಗಿಯೇ ಪೊಲೀಸರಿಂದ ಲಾಠಿ ರುಚಿ ಕಂಡಿದ್ದರು. ಆದರೆ ಆಗ ಸರ್ಕಾರ ಅವರ ಮೇಲೆ ಹಾಕಿದ ಕೇಸ್ ಗಳಿಂದಾಗಿ ಕೋರ್ಟ್ ಕಚೇರಿ ಎಂದು ಅಲೆದು ಅಲೆದು ಸುಸ್ತಾಗಿದ್ದಾರೆ. ಈಗ ಮತ್ತೇ ಪೊಲೀಸರ ಮೇಲೆ ದಾಖಲಾದ ಕೇಸ್ ಗಳ ವಿಚಾರಣೆಗೆ ಸಾಕ್ಷಿ ಹೇಳಲು ಅಲೆದಾಡುತ್ತಿದ್ದಾರೆ. ಹೀಗಾಗಿ ಇದರಿಂದ ನಮಗೆ ಯಾವಾಗ ಮುಕ್ತಿ ಆ ಜನ ಹೇಳುತ್ತಿದ್ದಾರೆ.
ಮಹದಾಯಿ ಹೋರಾಟ ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ನಡೆದ ಬಹು ದೊಡ್ಡ ಹೋರಾಟ ಎನಿಸಿಕೊಂಡಿದೆ. ಆದರೆ ಹೋರಾಟ ಮಾಡಿದ ರೈತರು ಪೊಲೀಸರ ಲಾಠಿ ರುಚಿಯನ್ನು ಕಂಡಿದ್ದರು. ಕಳೆದ ವರ್ಷ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರು ಹಾಗೂ ಅರೇಕುರಟ್ಟಿ ಗ್ರಾಮದಲ್ಲಿ ರೈತರು ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿದ್ದರು. ಅಂದು ಲಾಠಿ ಏಟು ತಿಂದಿದ್ದ ರೈತರು, ಪೊಲೀಸರು ಹಾಕಿದ ವಿವಿಧ ಪ್ರಕರಣಗಳಿಂದ ಕೋರ್ಟ್ ಗೆ ಅಲೆದು ಸುಸ್ತಾಗಿದ್ದಾರೆ. ಇವಾಗ ಪೊಲೀಸ್ ಮುಂದೆ ಸಾಕ್ಷಿ ಹೇಳಲು ಕೆಲಸ ಬಿಟ್ಟು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ.
Advertisement
Advertisement
ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಕೇಂದ್ರದಿಂದ ಮಹಾಮೋಸ- ಸುಳ್ಳು ವರದಿ ಆಧರಿಸಿ ಕರ್ನಾಟಕಕ್ಕೆ ಸುಪ್ರೀಂ ಎಚ್ಚರಿಕೆ
Advertisement
ಕಳೆದ ವರ್ಷ ಮಹದಾಯಿ ನ್ಯಾಯಾಧೀಕರಣ ಮಧ್ಯಂತರ ತೀರ್ಪಿನ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಯಮನೂರು ಹಾಗೂ ಅರೇಕುರಟ್ಟಿ ಗ್ರಾಮದ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ಮನ ಬಂದಂತೆ ಹಲ್ಲೆ ಮಾಡಿದ್ದರು. ಹಲ್ಲೆಯಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ವಯೋವೃದ್ಧರು ಗಂಭೀರವಾಗಿ ಗಾಯ ಗೊಂಡಿದ್ದರು.
Advertisement
ಇದನ್ನೂ ಓದಿ: ಮಹದಾಯಿ ಹೋರಾಟಗಾರರಿಗೆ ಸಮನ್ಸ್- ಅಂಬ್ಯುಲೆನ್ಸ್ ಸಿಬ್ಬಂದಿ, ಸೈನಿಕ, ಎಂಜಿನೀಯರ್‍ಗೂ ನೋಟಿಸ್
ಈ ಸಂಬಂಧ ಸರ್ಕಾರ ಎಡಿಜಿಪಿ ಕಮಲ್ ಪಂತ್ ನೇತ್ರತ್ವದಲ್ಲಿ ತನಿಖೆ ನಡೆಸುವಂತೆ ಸೂಚಿಸಿತ್ತು. ಕಾರಣ ಇಂದು ಪ್ರಕರಣದ ವಿಚಾರಣಾ ಅಧಿಕಾರಿ ಎನ್ ಶಿವಪ್ರಸಾದ ಅವರು ಹುಬ್ಬಳ್ಳಿಯ ಸಿ ಆರ್ ಮೈದಾನದಲ್ಲಿ 15 ಕ್ಕೂ ಹೆಚ್ಚು ಜನ ರೈತ ಮಹಿಳೆಯರು ವಯೋವೃದ್ದರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಹಾಗಾಗಿ ಪದೇ ಪದೇ ಅಲೆದಾಡುವದರಿಂದ ಬಹಳ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ.
ಕೆಲಸ ಬಗಸೆ ಬಿಟ್ಟು ಕೋರ್ಟ್ ಕಚೇರಿ ಎಂದು ಅಲೆದಾಡುವಂತಾಗಿದೆ ರೈತಾಪಿ ವರ್ಗದ ಜನರ ಸ್ಥಿತಿ ಏನಾದರೂ ಸರ್ಕಾರ ಇವರ ಅಲೆದಾಟ ತಪ್ಪಿಸಬೇಕಾಗಿದೆ. ಒಟ್ಟಿನಲ್ಲಿ ಮಹದಾಯಿ, ಕಳಸಾ ಬಂಡೂರಿ ಸಮಸ್ಯೆಯನ್ನು ಇತ್ಯರ್ಥ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಶ್ರಮಿಸಿ, ಸುದೀರ್ಘ ಹೋರಾಟಕ್ಕೆ ನ್ಯಾಯ ನೀಡಬೇಕಾಗಿದೆ.