ನವದೆಹಲಿ: ಮಾಜಿ ಪ್ರಧಾನಿಯೂ ಆಗಿರುವ ರಾಜ್ಯಸಭಾ ಸದಸ್ಯ ಹೆಚ್.ಡಿ ದೇವೇಗೌಡ (HD Devegowda) ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ಭೇಟಿ ಮಾಡಿದ್ದಾರೆ.
It was an honour to meet former Prime Minister, Shri HD Devegowda Ji at 7, Lok Kalyan Marg. His wisdom and perspective on various subjects are deeply valued. I am also thankful for the artwork that he gave me, taking my mind back to my recent visit to Kanyakumari. @H_D_Devegowda… pic.twitter.com/ZKPNjiD9K8
— Narendra Modi (@narendramodi) July 25, 2024
Advertisement
ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿಯವರ ನಿವಾಸದಲ್ಲಿ ಭೇಟಿಯಾಗಿ, ಹಲವು ಮಹತ್ವದ ವಿಚಾರಗಳನ್ನ ಚರ್ಚಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಮೋದಿ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 2 ವರ್ಷಗಳ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್ ಮುಕ್ತ – ಈ ಷರತ್ತು ಅನ್ವಯ
Advertisement
Advertisement
ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಜೀ ಅವರನ್ನು ಭೇಟಿಯಾಗಿರುವುದು ಗೌರವದ ಸಂಗತಿ. ವಿವಿಧ ವಿಚಾರಗಳ ಬಗ್ಗೆ ಅವರಿಗಿರುವ ಬುದ್ಧಿವಂತಿಕೆ ಹಾಗೂ ಅವರ ಆಳವಾದ ದೃಷ್ಟಿಕೋನ ಅತ್ಯಂತ ಮೌಲ್ಯಯುತವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೊಯ್ನಾ ಡ್ಯಾಂನಿಂದ 21 ಸಾವಿರ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ – ಚಿಕ್ಕೋಡಿ, ಬಾಗಲಕೋಟೆಯಲ್ಲಿ ಪ್ರವಾಹ ಭೀತಿ
Advertisement
ಅಲ್ಲದೇ ಲೋಕಸಭಾ ಚುನಾವಣೆಯ ಬಳಿಕ ಮೋದಿ ಅವರು ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದರ ಅಧ್ಯಾತ್ಮದ ಪ್ರಿಯ ತಾಣ ʻವಿವೇಕಾನಂದ ರಾಕ್ ಸ್ಮಾರಕʼಕ್ಕೆ ಭೇಟಿ ನೀಡಿದ್ದರು. ಇದರ ನೆನಪಿನಾರ್ಥವಾಗಿ ವಿವೇಕಾನಂದ ಮೂರ್ತಿಯ ಮುಂದೆ ಧ್ಯಾನಸ್ಥರಾಗಿರುವ ಮೋದಿ ಅವರ ಕಲಾಕೃತಿಯನ್ನು ಉಡುಗೊರೆಯಾಗಿ ದೇವೇಗೌಡರು ನೀಡಿದ್ದಾರೆ. ಇದನ್ನು ಸ್ವೀಕರಿಸಿದ ಮೋದಿ, ಇದು ಕನ್ಯಾಕುಮಾರಿಗೆ ಭೇಟಿ ನೀಡಿದ ಕ್ಷಣಗಳತ್ತ ನನ್ನ ಮನಸ್ಸನ್ನು ಸೆಳೆಯಿತು. ಅದಕ್ಕಾಗಿ ನಾನು ಕೃತಜ್ಞನಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.
ರಾಜ್ಯಸಭಾ ಅಧಿವೇಶನದಲ್ಲಿಂದು ಪಾಲ್ಗೊಂಡಿದ್ದ ಹೆಚ್.ಡಿ ದೇವೇಗೌಡ ಅವರಿಂದು ಶಿರೂರು ಅಂಕೋಲದಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದ ಬಗ್ಗೆ ಗಮನ ಸೆಳೆದಿದ್ದರು. ಅಧಿವಶೇನದ ಬಳಿಕ ಪ್ರಧಾನಿ ಮೋದಿ ಅವರನ್ನ ಭೇಟಿಯಾಗಿದ್ದಾರೆ. ಇದನ್ನೂ ಓದಿ: IPL 2025: ಪರ್ಸ್ ಮೊತ್ತ 140 ಕೋಟಿ ರೂ.ಗೆ ಏರಿಕೆ ಸಾಧ್ಯತೆ – ಫ್ರಾಂಚೈಸಿಗಳ ಬೇಡಿಕೆಗಳೇನು?