ಚೆನ್ನೈ: ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ರೈತರೊಬ್ಬರು (Farmer) ತಮ್ಮ ಮೇಕೆಗಳಿಗೆ (Goats) ತಿರುಗಾಡಿ ಮೇಯಿಸಲು ತೊಂದರೆ ಆಗಬಾರದು ಎಂದು ತಾತ್ಕಾಲಿಕ ರೈನ್‍ಕೋಟ್‍ಗಳನ್ನು ರಚಿಸಿದ್ದಾರೆ.
ತಮಿಳುನಾಡಿನ (Tamil Nadu) ತಂಜಾವೂರಿನ (Thanjavur) ಕುಲಮಂಗಲಂ ಗ್ರಾಮದ ಗಣೇಶನ್ (70) ಎಂಬವರಿಗೆ ಪ್ರಾಣಿಗಳೆಂದರೆ ಬಹಳ ಇಷ್ಟ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಜಮೀನಿನಲ್ಲಿ ಕುರಿಗಳು, ಹಸುಗಳು, ಕೋಳೀಗಳನ್ನು ಸಹ ಸಾಕುತ್ತಿದ್ದಾರೆ. ಅಕಾಲಿಕ ಮಳೆಯಿಂದಾಗಿ ತನ್ನ ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ. ಹಾಗೂ ಮೇಕೆಗಳು ಮೇಯುವಾಗ ವಿಪರೀತ ಚಳಿಯಿಂದ ನಡುಗುತ್ತಿರುವುದನ್ನು ಅವರು ಗಮನಿಸಿದ್ದಾರೆ.
Advertisement
Advertisement
ಇದರಿಂದಾಗಿ ಅವುಗಳ ರಕ್ಷಣೆಗೆ ಏನಾದರೂ ಮಾಡಬೇಕು ಎಂದುಕೊಂಡ ಗಣೇಶನ್ ಅವುಗಳಿಗೆ ರೈನ್‍ಕೋಟ್‍ನ್ನು ನಿರ್ಮಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಕಿ ಮೂಟೆಗಳನ್ನು ತಂದ ಚೀಲವನ್ನು ಅವರು ತಮ್ಮ ಮೇಕೆಗಳಿಗೆಂದೇ ರೈನ್ ಕೋಟ್‍ಗಳನ್ನಾಗಿ ಪರಿವರ್ತಿಸಿದರು. ಇದನ್ನೂ ಓದಿ: ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು
Advertisement
Advertisement
ಮೊದಲಿಗೆ ಅಲ್ಲಿನ ಗ್ರಾಮಸ್ಥರು ಗಣೇಶನ್ ಅವರ ಈ ಕೆಲಸದಿಂದ ಆಶ್ಚರ್ಯಕ್ಕೊಳಗಾದರೂ, ಆನಂತರದಲ್ಲಿ ಗಣೇಶನ್ ಅವರಿಗೆ ಮೇಕೆಗಳ ಮೇಲಿರುವ ಕಾಳಜಿಯ ಕುರಿತು ಶ್ಲಾಘಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್‍ಗೆ ಹೆಚ್ಚಾಯ್ತು ಫೈಟ್