DistrictsKarnatakaLatestMain PostMandya

ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್‍ಗೆ ಹೆಚ್ಚಾಯ್ತು ಫೈಟ್

ಮಂಡ್ಯ: ವಿಧಾನಸಭಾ ಚುನಾವಣೆಗೆ (Assembly Election) ಇನ್ನೂ ಕೆಲವೇ ತಿಂಗಳು ಬಾಕಿ ಇರುವ ಕಾರಣ ಕೆಪಿಸಿಸಿ ಆಯಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್‍ಗಾಗಿ ಅರ್ಜಿ ಹಾಕಲು ಆಹ್ವಾನಿಸಿದ್ದು, ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಕಾಂಗ್ರೆಸ್ (Congress) ಟಿಕೆಟ್‍ಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರ ಒಂದರಲ್ಲೇ ಬಿ ಫಾರಂಗಾಗಿ 14 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಸದ್ಯ ದಿನಾಂಕ ವಿಸ್ತರಣೆ ಆಗಿರುವುದರಿಂದ ಮತ್ತಷ್ಟು ಅರ್ಜಿಗಳು ಸಲ್ಲಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್‍ನಲ್ಲಿ (JDS) ಗುರುತಿಸಿಕೊಂಡಿದ್ದ ಕೀಲಾರ ರಾಧಾಕೃಷ್ಣ ಕಾಂಗ್ರೆಸ್‍ನಿಂದ ಟಿಕೆಟ್‍ಗೆ ಅರ್ಜಿ ಹಾಕಿರುವುದು ಸಾಕಷ್ಟು ಅಚ್ಚರಿ ತಂದಿದೆ. ಇನ್ನೂ ಕಳೆದ ಬಾರಿ ಚುನಾವಣೆಯ ಪರಾಜಿತ ಅಭ್ಯರ್ಥಿ ಗಣಿಗ ರವಿಕುಮಾರ್, ಮಾಜಿ ಸಚಿವ ಆತ್ಮಾನಂದ, ಮಾಜಿ ಶಾಸಕ ಎಚ್.ಬಿ.ರಾಮು, ಮನ್ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಡಾ.ಕೃಷ್ಣ ಸೇರಿ 14 ಮಂದಿ ಟಿಕೆಟ್‍ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಡೇಟಿಂಗ್ ಆ್ಯಪ್, ಲೀವ್ ಇನ್ ಟುಗೆದರ್ ಹಾವಳಿ- ಕಾಲೇಜುಗಳಲ್ಲಿ ಮಹಿಳಾ ಆಯೋಗದಿಂದ ಸ್ಪೆಷಲ್ ಕ್ಲಾಸ್

ಕಾಂಗ್ರೆಸ್‍ಗೆ ಎರಡು ಎಂಎಲ್‍ಸಿ ಚುನಾವಣೆಯ ಗೆಲುವು ಹಾಗೂ ಭಾರತ್ ಜೋಡೋ ಯಾತ್ರೆ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಹೊಸ ಉರುಪು ಬಂದಿರುವ ಕಾರಣ ಈ ಬಾರಿ ಟಿಕೆಟ್ ದಂಗಲ್‍ಗೆ ಕಾರಣವಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಟಿಕೆಟ್ ಪೈಪೋಟಿ ಆರಂಭವಾಗಿರುವುದರಿಂದ ರಾಜ್ಯ ಕೈ ನಾಯಕರಿಗೆ ತಲೆನೋವು ತಂದಿದ್ದು, ಒಬ್ಬರಿಗೆ ಟಿಕೆಟ್ ನೀಡಿ ಉಳಿದವರು ಬಂಡಾಯ ಹೇಳದಂತೆ ಸಮಾಧಾನ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಬಂಡಾಯ ಉದ್ಭವಿಸಿದರೆ, ಜೆಡಿಎಸ್‍ಗೆ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ಮಂಡ್ಯ ಕ್ಷೇತ್ರದಲ್ಲಿ ಮುಸ್ಲಿಂ, ಪರಿಶಿಷ್ಟ ಜಾತಿ, ಕುರುಬ ಮೂರು ಸಮುದಾಯದಿಂದ 75 ಸಾವಿರ ಮತಗಳನ್ನು ಹೊಂದಿರುವ ಕಾರಣ ಜಾತಿವಾರು ಲೆಕ್ಕಾಚಾರದಲ್ಲಿ ಕಾಂಗ್ರೆಸ್‍ಗೆ ಸುಲಭವಾಗಿರುವ ಕ್ಷೇತ್ರ ಇದಾಗಿದೆ.

ಒಂದು ಕಡೆ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‍ನಲ್ಲಿ ಟಿಕೆಟ್ ಫೈಟ್ ಹೆಚ್ಚಿದ್ದರೆ, ಮತ್ತೊಂದೆಡೆ ನಾಗಮಂಗಲ, ಮದ್ದೂರು ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಟಿಕೆಟ್‍ಗೆ ಬೇಡಿಕೆ ಕಂಡುಬಂದಿಲ್ಲ. ನಾಗಮಂಗಲದಿಂದ ಕೆಪಿಸಿಸಿ ಉಪಾಧ್ಯಕ್ಷ ಚೆಲುವರಾಯಸ್ವಾಮಿ ಮಾತ್ರ ಬಿ ಫಾರಂಗೆ ಅರ್ಜಿ ನೀಡುವ ಕಾರಣ ಯಾರು ಅರ್ಜಿ ಸಲ್ಲಿಸಿಲ್ಲ. ಇನ್ನೂ ಮದ್ದೂರಿನಲ್ಲಿ 2, ಕೆ.ಆರ್.ಪೇಟೆಯಲ್ಲಿ 6, ಮಳವಳ್ಳಿ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದಿಂದ ತಲಾ ಮೂರು ಅರ್ಜಿಗಳು ಸಲ್ಲಿಕೆಯಾಗಿವೆ. ಇದನ್ನೂ ಓದಿ: ವೈಟ್‍ಫೀಲ್ಡ್ ಮೆಟ್ರೋ ಸಂಚಾರ – ವೋಲ್ವೋ ಬಸ್ ಸಂಚಾರಕ್ಕೆ ಹೊಡೆತ

Live Tv

Leave a Reply

Your email address will not be published. Required fields are marked *

Back to top button