ಹಾವೇರಿ: ಸಾಲ ಬಾಧೆ ತಾಳಲಾರದೆ ರೈತರೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ರಾಣೆಬೆನ್ನೂರು ತಾಲೂಕಿನ ಚೆನ್ನಾಪುರ ತಾಂಡಾದಲ್ಲಿ ನಡೆದಿದೆ.
ಲೋಕಪ್ಪ ಲಮಾಣಿ (52) ಮೃತ ರೈತ. ಲೋಕಪ್ಪ 6 ಎಕರೆ ಜಮೀನು ಹೊಂದಿದ್ದು, ಬ್ಯಾಂಕ್ ಮತ್ತು ಕೈಸಾಲ ಅಂತಾ ಏಳೂವರೆ ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದರು. ಈರುಳ್ಳಿ, ಮೆಕ್ಕೆಜೋಳ, ಮತ್ತು ಶೇಂಗಾ ಬೆಳೆಗಳು ಪದೆ ಪದೆ ಮಳೆಯಿಂದ ಹಾನಿಯಾಗಿದ್ದಕ್ಕೆ ಬೇಸತ್ತು ಮನೆಯಲ್ಲೇ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂವರು ಗಂಡು ಮತ್ತು ಒಂದು ಹೆಣ್ಣು ಸೇರಿದಂತೆ ನಾಲ್ಕು ಮಕ್ಕಳನ್ನ ಹೊಂದಿದ್ದ ಅವರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಕುರಿತು ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.