ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ (Pakistan) 1.1 ಕೋಟಿಯಷ್ಟು ಜನರಿಗೆ ಆಹಾರದ ಅಭದ್ರತೆ (Food Insecurity) ಪರಿಣಾಮ ಬೀರಲಿದೆ ಎಂದು ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ.
ಪಾಕಿಸ್ತಾನದಲ್ಲಿ ನವೆಂಬರ್ 2024 ರಿಂದ ಮಾರ್ಚ್ 2025 ರವರೆಗೆ ಹೆಚ್ಚಿನ ಮಟ್ಟದ ಆಹಾರ ಅಭದ್ರತೆ ಮುಂದುವರೆದಿದೆ. 11 ಮಿಲಿಯನ್ ಜನರು ಅಭದ್ರತೆಯನ್ನು ಎದುರಿಸಬೇಕಾಗುತ್ತದೆ ಎಂದು ತನ್ನ ವರದಿಯಲ್ಲಿ ಅಂದಾಜಿಸಿದೆ. ಇದನ್ನೂ ಓದಿ: ಪಾಕಿಸ್ತಾನ ಬೇಕಾ, ನರಕ ಬೇಕಾ ಅಂತ ಕೇಳಿದ್ರೆ ನಾನು ನರಕವನ್ನೇ ಆಯ್ಕೆ ಮಾಡ್ತೀನಿ: ಜಾವೇದ್ ಅಖ್ತರ್
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಶುಕ್ರವಾರ ಪ್ರಕಟಿಸಿದ 2025 ರ ಆಹಾರ ಬಿಕ್ಕಟ್ಟುಗಳ ಜಾಗತಿಕ ವರದಿಯನ್ನು ಉಲ್ಲೇಖಿಸಿ, ಬಲೂಚಿಸ್ತಾನ್, ಸಿಂಧ್ ಮತ್ತು ಖೈಬರ್ ಪಖ್ತುನ್ಖ್ವಾದಾದ್ಯಂತ ಪ್ರವಾಹ ಪೀಡಿತ 68 ಗ್ರಾಮೀಣ ಜಿಲ್ಲೆಗಳಲ್ಲಿ 1.1 ಕೋಟಿ ಜನರು (ಶೇ.22 ರಷ್ಟು) ತೀವ್ರ ಆಹಾರ ಅಭದ್ರತೆಯನ್ನು ಎದುರಿಸಲಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿದ್ದರೂ, ಹವಾಮಾನ ವೈಪರೀತ್ಯವು ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಪಾಕ್ ಡ್ರೋನ್‌ಗಳು ‘ಆಕಾಶ’ದಲ್ಲೇ ಛಿದ್ರ – ಆಕಾಶ್ ಕ್ಷಿಪಣಿ ಪರಾಕ್ರಮ; ವಿಶೇಷತೆ ಏನು?
ಪಾಕಿಸ್ತಾನದಲ್ಲಿ 2024 ರ ಗರಿಷ್ಠ ಮಟ್ಟವು 2023 ರಂತೆಯೇ ಇತ್ತು. ನವೆಂಬರ್ 2023 ಮತ್ತು ಜನವರಿ 2024 ರ ನಡುವೆ 11.8 ಮಿಲಿಯನ್ ಜನರು ಹೆಚ್ಚಿನ ಮಟ್ಟದ ತೀವ್ರ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಪಾಕಿಸ್ತಾನವು 2018 ರಿಂದ 2024 ರ ಆರಂಭದವರೆಗೆ ಬಲೂಚಿಸ್ತಾನ್ ಮತ್ತು ಸಿಂಧ್‌ನ ವಿಶ್ಲೇಷಿಸಿದ ಪ್ರದೇಶಗಳಲ್ಲಿ ನಿರಂತರವಾಗಿ ಹೆಚ್ಚಿನ ಮಟ್ಟದ ತೀವ್ರ ಅಪೌಷ್ಟಿಕತೆಯನ್ನು ಅನುಭವಿಸಿದೆ. ಜಾಗತಿಕ ತೀವ್ರ ಅಪೌಷ್ಟಿಕತೆ (GAM) ಹರಡುವಿಕೆಯು ಸ್ಥಿರವಾಗಿ ಶೇ.10 ಕ್ಕಿಂತ ಹೆಚ್ಚಿದೆ. ಕೆಲವು ಜಿಲ್ಲೆಗಳಲ್ಲಿ ಶೇ.30 ಕ್ಕಿಂತ ಹೆಚ್ಚು ತಲುಪಿದೆ. ಸಾಕಷ್ಟು ಹಣದ ಕೊರತೆಯು ಪೌಷ್ಟಿಕಾಂಶ ಸೇವಾ ವ್ಯಾಪ್ತಿಯನ್ನು ಸೀಮಿತಗೊಳಿಸಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಪಾಕ್ ಹೈಕಮಿಷನ್ ಅಧಿಕಾರಿ ಜೊತೆ ಜ್ಯೋತಿ ಫೋಟೊ ರಿವೀಲ್ – ಪಾಕಿಸ್ತಾನಕ್ಕೆ ಬರ್ತೀನಿ ಎನ್ನುತ್ತಿದ್ದ ಯೂಟ್ಯೂಬರ್