ರಿಷಬ್ ಶೆಟ್ಟಿ (Rishabh Shetty) ನಟನೆಯ ಕಾಂತಾರ (Kantara) ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡವೂ ಸೇರಿದಂತೆ ಬಹುತೇಕ ಕಡೆ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರಾಗಿದೆ. ಕೇವಲ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತ ಆಗಿದ್ದ ರಿಷಬ್, ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾಗಿದ್ದಾರೆ. ಹಾಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಿರ್ದೇಶಕನಿಗೆ ಹೊಸದೊಂದು ಬಿರುದು ಕೊಡಲು ಮುಂದಾಗಿದ್ದಾರೆ.
ರಿಯಲ್ ಸ್ಟಾರ್, ಪವರ್ ಸ್ಟಾರ್, ರಾಕಿಂಗ್ ಸ್ಟಾರ್, ಸೂಪರ್ ಸ್ಟಾರ್ ಹೀಗೆ ತಮ್ಮ ನೆಚ್ಚಿನ ಕಲಾವಿದರಿಗೆ ಅಭಿಮಾನಿಗಳು ಬಿರುದು ಕೊಟ್ಟು ಅಭಿಮಾನ ತೋರಿದ್ದಾರೆ. ರಿಷಬ್ ಶೆಟ್ಟಿ ಅವರಿಗೂ ಕೂಡ ಸದ್ಯ ‘ಡಿವೈನ್ ಸ್ಟಾರ್’ (Divine Star) ಎಂದು ಬಿರುದು ಕೊಟ್ಟಿದ್ದು, ಅನೇಕರು ಇದೇ ಹೆಸರಿನಿಂದಲೇ ಕರೆಯುತ್ತಿದ್ದಾರೆ. ಈ ಹಿಂದೆ ಕಾಂತಾರ ಸಿನಿಮಾ ನೋಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ‘ಡಿವೈನ್’ ಶಬ್ದವನ್ನು ಬಳಸಿಯೇ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಹೀಗಾಗಿ ಅಭಿಮಾನಿಗಳು ಇನ್ಮುಂದೆ ‘ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ’ ಎಂದು ಕರೆಯಲು ನಿರ್ಧರಿಸಿರುವ ಕುರಿತು ಚರ್ಚೆ ಆಗುತ್ತಿದೆ. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ
ಕಾಂತಾರ ಸಿನಿಮಾ ಬಗ್ಗೆ ಸಾಮಾನ್ಯ ನೋಡುಗರು ಮಾತ್ರವಲ್ಲ, ಸ್ಟಾರ್ ಕಲಾವಿದರು ಕೂಡ ನೋಡಿದ್ದಾರೆ. ನೋಡಲು ಕಾಯುತ್ತಿದ್ದಾರೆ. ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ (Kangana Ranaut) ಕೂಡ ಕಾಂತಾರ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ‘ಕಾಂತಾರ ಸಿನಿಮಾ ಕುತೂಹಲ ಹೆಚ್ಚಿಸಿದೆ. ಸಿನಿಮಾ ನೋಡಲು ನಾನೂ ಕಾಯುತ್ತಿದ್ದೇನೆ. ಶೀಘ್ರದಲ್ಲೇ ಸಿನಿಮಾ ನೋಡುವೆ’ ಎಂದು ಹೇಳಿದ್ದಾರೆ.
ಬಾಲಿವುಡ್ (Bollywood) ಸಿನಿಮಾಗಳನ್ನು ತೆಗಳುತ್ತಲೇ ಬಂದಿರುವ ಕಂಗನಾ, ಇತ್ತೀಚಿನ ದಿನಗಳಲ್ಲಿ ದಕ್ಷಿಣದ ಸಿನಿಮಾಗಳನ್ನು ಹೊಗಳುತ್ತಿದ್ದಾರೆ. ಅಲ್ಲದೇ, ದಕ್ಷಿಣ ಭಾರತದ ಹೀರೋಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಬಾಲಿವುಡ್ ನಟರನ್ನು ಸದಾ ಕಾಲೆಳೆಯುವ ಕಂಗನಾ, ಈ ಹಿಂದೆ ಯಶ್ ಅವರನ್ನು ಹೊಗಳಿದ್ದರು. ಇದೀಗ ಕಾಂತಾರ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ನೋಡುವುದಾಗಿಯೂ ತಿಳಿಸಿದ್ದಾರೆ.