ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಅಭಿಮಾನಿಗಳಿಗಾಗಿ ಆರತಕ್ಷತೆಯನ್ನು ಆಯೋಜಿಸಿದ್ದರು. ಈ ಆರತಕ್ಷತೆಯಲ್ಲಿ ನಟಿ ಮೇಘನಾ ರಾಜ್ ಅವರು ನಡೆದುಕೊಂಡ ರೀತಿ ನೋಡಿ ಎಲ್ಲರೂ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನವೆಂಬರ್ 25ರಂದು ನಡೆದ ಧ್ರುವ ಹಾಗೂ ಪ್ರೇರಣಾ ಆರತಕ್ಷತೆಗೆ ಮಹಿಳಾ ಅಭಿಮಾನಿಯೊಬ್ಬರು ಆಗಮಿಸಿದ್ದರು. ಈ ಮಹಿಳಾ ಅಭಿಮಾನಿಯನ್ನು ನಟಿ ಮೇಘನಾ ಅವರು ತುಂಬಾ ಚೆನ್ನಾಗಿ, ಆತ್ಮೀಯತೆಯಿಂದ ನೋಡಿಕೊಂಡಿದ್ದಾರೆ. ಅಭಿಮಾನಿ ಸೆಲ್ಫಿ ಕೇಳಿದ ತಕ್ಷಣ ಮೇಘನಾ ಫೋಟೋಗೆ ಪೋಸ್ ನೀಡಿದ್ದಾರೆ.
Advertisement
Advertisement
ಮೇಘನಾ ಅವರು ಅಭಿಮಾನಿ ಜೊತೆ ಸರಳವಾಗಿ ನಡೆದುಕೊಂಡು ರೀತಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಮೇಘನಾ ಹಾಗೂ ಮಹಿಳಾ ಅಭಿಮಾನಿ ಕ್ಲಿಕ್ಕಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Advertisement
ಈ ಹಿಂದೆ ಧ್ರುವ ಸರ್ಜಾ ಅವರು ಕೂಡ ಅಭಿಮಾನಿಗಳನ್ನು ವಿಐಪಿ ಎಂದು ಕರೆದಿದ್ದರು. ಅಲ್ಲದೆ ಅವರಿಗಾಗಿ ವಿಶೇಷವಾಗಿ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಎಲ್ಲರ ಮನ ಗೆದಿದ್ದರು. ಹಲವು ಅಭಿಮಾನಿಗಳು ಆರತಕ್ಷತೆಗೆ ಆಗಮಿಸಿ ನವಜೋಡಿಗೆ ಶುಭ ಕೋರಿದ್ದರು.
Advertisement
ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಮದುವೆ 24ರಂದು ಬೆಂಗಳೂರಿನ ಸಂಸ್ಕೃತಿ ಬೃಂದಾವನ ಕನ್ವೆನ್ಷನ್ ಹಾಲ್ನಲ್ಲಿ ಅದ್ಧೂರಿಯಾಗಿ ನಡೆದಿದೆ. ಸಂಜೆ ಆಯೋಜನೆ ಮಾಡಿದ್ದ ಆರತಕ್ಷತೆಗೆ ಚಿತ್ರರಂಗದ ಗಣ್ಯರು ಬಂದು ನವ ಜೋಡಿಗೆ ಶುಭಾಶಯ ಕೋರಿದ್ದರು.