ಬಿಗ್ ಬಾಸ್ (Bigg Boss) ಸ್ಪರ್ಧಿ ವಿನಯ್ ಗೌಡ (Vinay Gowda) ಅವರ ಅಭಿಮಾನಿಯೊಬ್ಬರು (Fan) ರಕ್ತದಲ್ಲಿ ಪತ್ರ ಬರೆದಿದ್ದಾರೆ. ಪತ್ರ ಬರೆದಿರುವ ವಿಡಿಯೋವನ್ನು ಪೋಸ್ಟ್ ಮಾಡಿ ವಿನಯ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಈ ವಿಡಿಯೋವನ್ನು ನೋಡಿರುವ ವಿನಯ್, ಅಭಿಮಾನಿಗೆ ಮನವಿಯೊಂದನ್ನು ಮಾಡಿದ್ದಾರೆ.
ಅಭಿಮಾನಿ ಸಿರಿಂಜ್ ಮೂಲಕ ರಕ್ತ ತೆಗೆದುಕೊಂಡು, ಅದರಿಂದ ವಿನಯ್ ಗೌಡ ಅವರ ಚಿತ್ರ ಬರೆದಿದ್ದಾರೆ. ಅಲ್ಲದೇ, ಈ ಮೂಲಕ ಅಭಿಮಾನ ಮರೆದಿದ್ದಾರೆ. ಈ ನಡೆವೆಯು ವಿನಯ್ ಅವರಿಗೆ ಇಷ್ಟವಾಗಿಲ್ಲ. ಕಾರಣ, ರಕ್ತವನ್ನು ಹೀಗೆ ವೇಸ್ಟ್ ಮಾಡಬಾರದು ಎನ್ನುವ ಕಲ್ಪನೆ. ಹಾಗಾಗಿ ಅಭಿಮಾನಿಗೆ ಮನವಿ ಮಾಡಿದ್ದಾರೆ.
ದಯವಿಟ್ಟು, ರಕ್ತ ಅಮೂಲ್ಯವಾದದ್ದು. ಅದನ್ನು ಹಾಳ ಮಾಡಬೇಡಿ. ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಧನ್ಯವಾದಗಳು. ರಕ್ತ ಬೇಕಾದವರಿಗೆ ರಕ್ತ ದಾನ ಮಾಡಿ ಎಂದು ವಿನಯ್ ಕೇಳಿಕೊಂಡಿದ್ದಾರೆ. ಈ ರೀತಿಯಲ್ಲಿ ಯಾರ ಅಭಿಮಾನಿಯೂ ಮಾಡಬಾರದು ಎಂದು ವಿನಂತಿಸಿದ್ದಾರೆ.