ಚಿಕ್ಕಬಳ್ಳಾಪುರ: ಲಕ್ಷಾಂತರ ರೂಪಾಯಿ ಮೌಲ್ಯದ ಹುಬ್ಲೋಟ್ ವಾಚ್ ಉಡುಗೊರೆ ಪಡೆದು ವಿವಾದಕ್ಕೆ ಕಾರಣವಾಗಿದ್ದ ಸಿಎಂ ಸಿದ್ದರಾಮಯ್ಯ ನವರಿಗೆ ಇಂದು ಅಭಿಮಾನಿಯೊಬ್ಬರು ಕುರಿ ಮರಿ ಗಿಫ್ಟ್ ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯಗೆ ಗುಡಿಬಂಡೆ ತಾಲೂಕಿನ ಜಮ್ಮಿಗೆಮರದಹಳ್ಳಿ ನಿವಾಸಿ ಕಾರಕೂರಪ್ಪ ಕುರಿಮರಿ ಗಿಫ್ಟ್ ಕೊಟ್ಟಿದ್ದಾರೆ. ಕುರುಬ ಸಮುದಾಯದ ಸಿದ್ದರಾಮಯ್ಯ ನವರಿಗೆ ಗುಡಿಬಂಡೆ ತಾಲೂಕು ಕುರುಬರ ಸಂಘದ ವತಿಯಿಂದ ಪೇಟಾ, ಶಾಲು ಹೊದಿಸುವ ಮೂಲಕ ಸನ್ಮಾನ ಮಾಡಿದರು. ಇದೇ ವೇಳೆ ಕಾರಕೂರಪ್ಪ ಕೂಡ ಕುರಿಮರಿ ಗಿಫ್ಟ್ ಕೊಟ್ಟು ಸಿಎಂ ಜೊತೆ ಫೋಟೋ ತೆಗೆಸಿಕೊಂಡರು.
Advertisement
Advertisement
Advertisement
ಕುರಿ ಮರಿಯನ್ನು ಎರಡು ಕೈಗಳಿಂದ ಬಿಗಿದಪ್ಪಿದ ಸಿಎಂ ಅಭಿಮಾನಿ ನೀಡಿದ ಗಿಫ್ಟ್ ಪಡೆದರು. ಬಳಿಕ ನಾನು ಹೋದ ಕಡೆಯಲ್ಲಿ ಇದೇ ರೀತಿ ಕುರಿ ಮರಿ ಗಿಫ್ಟ್ ಕೊಡುತ್ತಾರೆ. ನಾನು ಅವರಿಗೆ ಕುರಿ ಮರಿಯನ್ನು ದೊಡ್ಡದು ಮಾಡಿ ತಂದು ಕೊಡಿ ಎಂದು ಹೇಳುತ್ತೇನೆ ಎಂದು ಸಂಸದ ಮೊಯ್ಲಿ ಅವರಿಗೆ ಹೇಳಿ ನಸು ನಕ್ಕರು.
Advertisement
ಸಿಎಂ ಗೆ ಉಡುಗೊರೆಯಾಗಿ ಸಿಕ್ಕ ಕುರಿ ಮರಿಯನ್ನ ಕರೆದುಕೊಂಡು ಹೋದ ಭದ್ರತಾ ಸಿಬ್ಬಂದಿಯೊಬ್ಬರು ಅದನ್ನ ಕಾರ್ಯಕರ್ತರೊಬ್ಬರಿಗೆ ಕೊಟ್ಟಿರುವುದಾಗಿ ತಿಳಿಸಿದರು. ಅಭಿಮಾನಿ ಉಡುಗೊರೆ ಕೊಟ್ಟ ಕುರಿಮರಿಯನ್ನು ಸಿದ್ದರಾಮಯ್ಯ ಅವರು ತೆಗೆದುಕೊಂಡು ಹೋಗಲಿಲ್ಲ.
ಇದಕ್ಕೂ ಮುನ್ನ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದ ಸಾಧನಾ ಸಮಾವೇಶದ ವೇಳೆ ಮತಾನಾಡಿದ ಸಿಎಂ, ಸರ್ಕಾರದ ಸಾಧನೆಗಳ ಕಾಂಗ್ರೆಸ್ ಸಾಧನಾ ಸಮಾವೇಶ ಸರ್ಕಾರದಿಂದ ಹಣದಿಂದಲೇ ಮಾಡೋದು, ನನ್ನ ಹಣದಿಂದ ಮಾಡಲಾ..? ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಈ ಹಿಂದೆ ವಿರೋಧ ಪಕ್ಷಗಳು ತಮ್ಮ ಹಣದಿಂದ ಮಾಡಿದ್ದರಾ? ಪ್ರಧಾನಮಂತ್ರಿ ಮೋದಿ ಫಾರಿನ್ ಗೆ ತಮ್ಮ ಹಣದಿಂದ ಹೋಗುತ್ತಾರಾ ಎಂದು ಪ್ರಶ್ನೆ ಮಾಡಿದರು.
ಈ ವೇಳೆ ಕಾಂಗ್ರೆಸ್ ಹೈಕಮಾಂಡ್ ಗೆ ಸಂಪುಟದ ಕೆಲ ಮಂತ್ರಿಗಳು ಕಪ್ಪ ಕಾಣಿಕೆ ಕೊಡುತ್ತಾರೆ ಎನ್ನುವ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಕುಮಾರಸ್ವಾಮಿಯವರ ಬಳಿ ಹಣ ನೀಡಿರುವ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಇದು ಕುಮಾರಸ್ವಾಮಿ ಯವರ ಅತ್ಯಂತ ಬೇಜಾವಾಬ್ದಾರಿ ಹೇಳಿಕೆ ಎಂದರು. ಅಲ್ಲದೇ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತಾವು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಸ್ಪಷ್ಟಪಡಿಸಿದರು.