ಬ್ರಿಟನ್ ಸಂಗೀತ ಕ್ಷೇತ್ರದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದ್ದ, ಪಂಜಾಬಿ ಮೂಲದ ಗಾಯಕ ಬಲ್ವಿಂದರ್ ಸಫ್ರಿ ನಿಧನರಾಗಿದ್ದಾರೆ. 63ರ ವಯಸ್ಸಿನ ಸಂಫ್ರಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸ್ವತಃ ಕುಟುಂಬದ ಮೂಲಗಳೇ ತಿಳಿಸಿವೆ. ಭಾರತೀಯ ಮೂಲದ ಬ್ರಿಟನ್ ನಲ್ಲಿ ಫೇಮಸ್ ಆಗಿದ್ದ ಸಫ್ರಿ ಅವರು ಬರ್ಮಿಂಗ್ ಹ್ಯಾಮ್ ನಲ್ಲಿ ನೆಲೆಸಿದ್ದರು.
ಪಂಜಾಬಿನಲ್ಲಿ ಜನಿಸಿದ್ದರೂ, ಬರ್ಮಿಂಗ್ ಹ್ಯಾಮ್ ನಲ್ಲಿ ನೆಲೆ ಕಂಡುಕೊಂಡಿದ್ದ ಬಲ್ವಿಂದರ್ ಸಫ್ರಿ, 1989ರಿಂದ ಯುಕೆ ಭಾಂಗ್ರಾದ ಭಾಗವಾಗಿದ್ದ ಅವರು 1990ರಲ್ಲಿ ಸಫ್ರಿ ಬಾಯ್ಸ್ ಬ್ಯಾಂಡ್ ಕಟ್ಟಿಕೊಂಡು ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಫ್ರಿ ಬಾಯ್ಸ್ ಬ್ಯಾಂಡ್ ಅತೀ ದುಬಾರಿ ಬ್ಯಾಂಡ್ ಎಂದೂ ಖ್ಯಾತಿಗಳಿಸಿತ್ತು. ಇದನ್ನೂ ಓದಿ:ಓಟಿಟಿನಲ್ಲಿ ಬರುತ್ತಿದ್ದಾಳೆ ರಕ್ಷಿತ್ ಶೆಟ್ಟಿ ನಟನೆಯ ಕನ್ನಡದ ‘ಚಾರ್ಲಿ
ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಸಫ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಶಸ್ತ್ರ ಚಿಕಿತ್ಸೆಯ ನಂತರ ಅವರು ಕೋಮಾಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೇ ಬ್ರೈನ್ ಡ್ಯಾಮೇಜ್ ಕೂಡ ಆಗಿತ್ತಂತೆ. ಆನಂತರ ಜುಲೈ 15ರಂದು ಆಸ್ಪತ್ರೆಯಿಂದ ಅವರನ್ನು ಮನೆಗೆ ಕರೆತರಲಾಗಿತ್ತು. ಮನೆಯಲ್ಲೇ ಸಫ್ರಿ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.