ಗಾಯಕಿ ಪೃಥ್ವಿ ಭಟ್ (Prithwi Bhat) ಅವರ ಪ್ರೇಮ ವಿವಾಹ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಬೆನ್ನಲ್ಲೇ ಮೊದಲ ಬಾರಿಗೆ ಪತಿಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪ್ರತಿ ಜನ್ಮಕೂ ನೀನೇ ಬೇಕು – ಚಿರು ಜೊತೆಗಿನ ಸ್ಪೆಷಲ್ ಫೋಟೋ ಹಂಚಿಕೊಂಡ ಮೇಘನಾ
ಮದುವೆಯಾದ ಬಳಿಕ ಮೊದಲ ಬಾರಿಗೆ ಪತಿ ಅಭಿಷೇಕ್ (Abhishek) ಜೊತೆಗಿನ ಫೋಟೋವನ್ನು ಗಾಯಕಿ ಪೃಥ್ವಿ ಹಂಚಿಕೊಂಡಿದ್ದಾರೆ. ಪತಿ ಜೊತೆ ರಾಘವೇಂದ್ರ ಸ್ವಾಮಿ ದೇವಸ್ಥಾನ ಮಂತ್ರಾಲಯಕ್ಕೆ ಗಾಯಕಿ ಭೇಟಿ ನೀಡಿದ್ದಾರೆ. ಈ ದಂಪತಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಇದನ್ನೂ ಓದಿ:ಯಶ್ ತಾಯಿ ನಿರ್ಮಾಣದ ಸಿನಿಮಾದಲ್ಲಿ ಪೃಥ್ವಿ ಅಂಬರ್- ’ಕೊತ್ತಲವಾಡಿ’ ಚಿತ್ರದ ಪೋಸ್ಟರ್ ಔಟ್
View this post on Instagram
ಇತ್ತೀಚೆಗೆ ಗಾಯಕಿ ಪೃಥ್ವಿ ಪ್ರೇಮ ವಿವಾಹವನ್ನು ತಂದೆ ಶಿವಪ್ರಸಾದ್ ಧಿಕ್ಕರಿಸಿದ್ದರು. ಜೀ ವಾಹಿನಿಯಲ್ಲೇ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಕೆಲಸ ಮಾಡುತ್ತಿರುವ ಅಭಿಷೇಕ್ ಜೊತೆ ಮಗಳು ಪೃಥ್ವಿ ಮದುವೆಯಾಗಿದ್ದಕ್ಕೆ ಶಿವಪ್ರಸಾದ್ ಅಸಮಾಧಾನ ವ್ತಕ್ತಪಡಿಸಿದ್ದರು. ತಮ್ಮ ಮಗಳಿಗೆ ಹವ್ಯಕ ಹುಡುಗನನ್ನೇ ಹುಡುಕಿ ಮದುವೆ ಮಾಡುವ ಕನಸು ಹೊತ್ತಿದ್ದೆ. ಈ ವಿಷಯವನ್ನು ಜೀ ಕನ್ನಡವಾಹಿನಿಯ ಸರಿಗಮಪ ಶೋನಲ್ಲಿ ಜ್ಯೂರಿಯಾಗಿರೋ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಎನ್ನುವವರಿಗೆ ತಿಳಿಸಿದ್ದೆ. ಅವರು ಪೃಥ್ವಿ ಭಟ್ ಪ್ರೇಮಿಸುತ್ತಿರುವ ಹುಡುಗನ ಬಗ್ಗೆ ತಿಳಿಸಿದ್ದರು. ನಾನು ನನ್ನ ಮಗಳನ್ನು ಕೇಳಿದಾಗ, ನೀವು ತೋರಿಸಿದ ಹುಡುಗನ ಜೊತೆಯೇ ಮದುವೆ ಆಗುತ್ತೇನೆ ಅಂತ ದೇವರ ಮೇಲೆ ಪ್ರಮಾಣ ಮಾಡಿದ್ದಳು. ಆದರೆ, ಇದೀಗ ನನ್ನ ಮಗಳನ್ನು ಆ ನರಹರಿ ದೀಕ್ಷಿತ್ ಧಾರೆ ಎರೆದು ಕೊಟ್ಟಿದ್ದಾರೆ. ಮದುವೆಯ ವಿಷಯವನ್ನು ನನ್ನಿಂದ ಮುಚ್ಚಿಟ್ಟಿದ್ದಾರೆ ಅಂತ ಪೃಥ್ವಿ ಭಟ್ ತಂದೆ ಆಡಿಯೋ ಮೂಲಕ ಹೊರಹಾಕಿದ್ದರು.
ಮಗಳನ್ನು ಕೂರಿಸಿಕೊಂಡು ಮಾತಾಡಿದಾಗ, ಹುಡುಗನೊಬ್ಬ ನನ್ನ ಹಿಂದೆ ಬಿದ್ದಿರೋದು ನಿಜ. ಆದರೆ, ನೀವು ಇಷ್ಟಪಟ್ಟರೆ ಮಾತ್ರ ಮುಂದುವರೆಯುವೆ. ಇಲ್ಲದಿದ್ದರೆ, ನೀವು ತೋರಿಸಿದ ಹುಡುಗನ ಜೊತೆಯೇ ಹೊಸ ಜೀವನಕ್ಕೆ ಕಾಲಿಡುತ್ತೇನೆ ಅಂತ ಪೃಥ್ವಿ ಭಟ್ ತಂದೆ ತಾಯಿಯ ಮೇಲೆ ಪ್ರಮಾಣ ಮಾಡಿದ್ದರಂತೆ. ಆ ಪ್ರಮಾಣ ಮುರಿದುಕೊಂಡು ಮದುವೆ ಆಗಿದ್ದಾರೆ. ಹಾಗಾಗಿ ಆಕೆ ನನ್ನ ಮನೆಗೆ ಬರೋದು ಬೇಡ ಅಂತ ತಿಳಿಸಿದ್ದಾಗಿ ಪೃಥ್ವಿ ಅವರ ತಂದೆ ಅಸಮಾಧಾನ ಹೊರಹಾಕಿದ್ದರು. ಹವ್ಯಕ ಸಮಾಜವು ನರಹರಿ ದೀಕ್ಷಿತ್ ಅಂಥವರಿಗೆ ಪ್ರೋತ್ಸಾಹ ಮಾಡಬಾರದು ಅಂತ ಪೃಥ್ವಿ ತಂದೆ ಮನವಿ ಮಾಡಿಕೊಂಡಿದ್ದರು. ಇದ್ದೊಬ್ಬ ಮಗಳ ಧಾರೆಯರೆಯದಂತೆ ನರಹರಿ ಮಾಡಿದ್ದಾರೆ. ನಾನು ನೋವಿನಿಂದಲೇ ಈ ಸಂಗತಿಯನ್ನು ಹಂಚಿಕೊಳ್ಳುತ್ತಿರುವೆ ಅಂತ ಆಡಿಯೋವೊಂದನ್ನು ಮಾಡಿ, ಹವ್ಯಕ ಗ್ರೂಪ್‌ನಲ್ಲಿ ಪೋಸ್ಟ್ ಮಾಡಿದ್ದರು ಪೃಥ್ವಿ ತಂದೆ. ಆ ಆಡಿಯೋ ಸಖತ್ ವೈರಲ್ ಆಗಿತ್ತು.
ಬಳಿಕ ತಂದೆ ಆರೋಪಕ್ಕೆ ಗಾಯಕಿ ಪ್ರತಿಕ್ರಿಯಿಸಿ, ನನ್ನ ಮದುವೆ ವಿಚಾರದಲ್ಲಿ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಅವರ ಯಾವುದೇ ಕೈವಾಡವಿಲ್ಲ. ಮದುವೆ ಆಗುವ ದಿನ ನರಹರಿ ದೀಕ್ಷಿತ್ ಅವರಿಗೆ ವಿಷಯ ತಿಳಿಸಿ, ಅವರಿಂದ ಆಶೀರ್ವಾದ ಪಡೆದೆವು. ಇದರಲ್ಲಿ ಅವರ ತಪ್ಪೇನು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮದುವೆ ವಿಚಾರದಲ್ಲಿ ನನ್ನಿಂದ ತಪ್ಪಾಗಿದೆ ಕ್ಷಮಿಸಿ ಅಂತ ಆಡಿಯೋ ಮೂಲಕ ಮನವಿ ಮಾಡಿದ್ದರು.
ಮಾರ್ಚ್ 7ರಂದು ಅಭಿಷೇಕ್‌ನನ್ನು ಪ್ರೀತಿಸುತ್ತಿರುವ ವಿಚಾರವನ್ನು ಪಾಲಕರಿಗೆ ತಿಳಿಸಿದ್ದೆ. ಅಂದು ತಂದೆ ತಾಯಿಯ ಭಯಕ್ಕೆ ಸುಮ್ಮನಾದೆ ಎಂದಿದ್ದಾರೆ. ಪ್ರೀತಿ ವಿಚಾರ ತಿಳಿಸಿದ ನಂತರ ನನಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿದರು. ಯಾವುದೇ ಕಾರ್ಯಕ್ರಮ, ಶೋಗಳಿಗೂ ಕಳುಹಿಸಿ ಕೊಡಲು ನಿರಾಕರಿಸಿದರು. ನನ್ನನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಿದ್ದರಿಂದ ಅನಿವಾರ್ಯವಾಗಿ ಮನೆಯಿಂದ ಆಚೆ ಹೋಗಿ ಮದುವೆ ಆಗಿರೋದಾಗಿ ಆಡಿಯೋ ಮೂಲಕ ಪೃಥ್ವಿ ಭಟ್ ಸ್ಪಷ್ಟನೆ ನೀಡಿದ್ದರು.