ಮಲಯಾಳಂ (Malayalam) ಖ್ಯಾತ ನಟ ಮುಮ್ಮುಟ್ಟಿ (Mammootty) ಅವರ ತಾಯಿ ಫಾತಿಮಾ ಇಸ್ಮಾಯಿಲ್ (Fatima Ismail) ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದ ಕಾರಣದಿಂದಾಗಿ ಫಾತಿಮಾ ಅವರಿಗೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ (Passed Away) ತ್ಯಜಿಸಿದ್ದಾರೆ.
ಪುತ್ರ ಮಮ್ಮುಟ್ಟಿ ಮತ್ತು ಮೊಮ್ಮಗ ಹಾಗೂ ಖ್ಯಾತ ನಟ ದುಲ್ಕರ್ ಸಲ್ಮಾನ್ (Dulquer Salmaan) ಬೆಳೆಸುವುದರಲ್ಲಿ ಫಾತಿಮಾ ಅವರ ಪಾತ್ರ ದೊಡ್ಡದಿದೆ. ಇವರಿಗೆ ಇಬ್ರಾಹಿಂ ಕುಟ್ಟಿ, ಶಫಿನಾ, ಸೌದಾ, ಜಕರಿಯಾ ಹಾಗೂ ಅಮೀನಾ ಹೀಗೆ ಐದು ಜನ ಮಕ್ಕಳು. ಮಮ್ಮುಟ್ಟಿ ಹಿರಿಯ ಪುತ್ರನಾಗಿದ್ದಾರೆ. ಅಗಲಿದ ಫಾತಿಮಾ ಅವರಿಗೆ ಮಲಯಾಳಂ ಚಿತ್ರೋದ್ಯಮ ಕಂಬನಿ ಮಿಡಿದಿದೆ. ಇದನ್ನೂ ಓದಿ:ಐಟಂ ಸಾಂಗ್‌ಗೆ ಸೊಂಟ ಬಳುಕಿಸಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ‘ಕಬ್ಜ’ ಸುಂದರಿ
ಕುಟುಂಬದ ಮಾಹಿತಿಯ ಪ್ರಕಾರ ಇಂದು ಸಂಜೆ ಐದು ಗಂಟೆಗೆ ಕೊಟ್ಟಾಯಂನ ಚೆಂಪುವಿನ ಜುಮಾ ಮಸೀದಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಮಮ್ಮುಟ್ಟಿ ಕೇವಲ ಮಲಯಾಳಂನಲ್ಲಿ ಮಾತ್ರವಲ್ಲ, ಕನ್ನಡವೂ ಸೇರಿದಂತೆ ಹಲವು ಸಿನಿಮಾ ರಂಗದಲ್ಲಿ ನಟಿಸಿದ್ದಾರೆ. ದುಲ್ಕರ್ ಬಾಲಿವುಡ್ ನಲ್ಲೂ ಮಿಂಚಿದ್ದಾರೆ.