ಸೌತ್‌ನ ಸ್ಟಾರ್ ನಟ ವಿಜಯ್ ದೇವರಕೊಂಡ (Vijay Devarakonda) ಅವರು ಆಗಾಗ ಸಿನಿಮಾಗಿಂತ ಖಾಸಗಿ ಬದುಕಿನ ವಿಚಾರವಾಗಿ ಹೆಚ್ಚುಚ್ಚು ಸುದ್ದಿಯಾಗುತ್ತಾರೆ. ಇದೀಗ ತಮ್ಮ ಮದುವೆ (Wedding) ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಅದಷ್ಟೇ ಅಲ್ಲ, ಲವ್ ಮ್ಯಾರೇಜ್ ಆಗುವುದಾಗಿ ಸ್ವತಃ ವಿಜಯ್ ದೇವರಕೊಂಡ ಹೇಳಿದ್ದಾರೆ. ಇದನ್ನೂ ಓದಿ:ಅಪ್ಪನ ಮೇಣದ ಪ್ರತಿಮೆ ಮುಂದೆ ಕುಣಿದು ಕುಪ್ಪಳಿಸಿದ ಅಲ್ಲು ಅರ್ಜುನ್ ಪುತ್ರಿ
ಇದೀಗ ಚೆನ್ನೈನಲ್ಲಿ ‘ಫ್ಯಾಮಿಲಿ ಸ್ಟಾರ್’ (Family Star Film) ಚಿತ್ರದ ಪ್ರಚಾರ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಈ ವೇಳೆ, ವಿಜಯ್ ದೇವರಕೊಂಡ ಮದುವೆಯ ಬಗ್ಗೆ ಪ್ರಶ್ನೆ ಎದುರಾಗಿದೆ. ವಿಜಯ್ ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ನಟಿಸಿದ್ದೇನೋ ನಿಜ. ಹಾಗೇ ಇದೇ ವರ್ಷ ರಿಯಲ್ ಲೈಫ್‌ನಲ್ಲೂ ಫ್ಯಾಮಿಲಿ ಸ್ಟಾರ್ ಆಗುವ ಸಾಧ್ಯತೆ ಇದೆಯೇ ಎಂದು ಪ್ರಶ್ನೆ ಮಾಡಲಾಗಿದೆ. ಆ ಪ್ರಶ್ನೆಗೆ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿ, ನಾನು ಖಂಡಿತವಾಗಿಯೂ ಮದುವೆ ಆಗುತ್ತೇನೆ. ನನಗೂ ಮದುವೆ ಆಗಬೇಕೆಂಬ ಆಸೆ ಇದೆ. ನನಗೂ ಮಕ್ಕಳು ಬೇಕು. ಆದರೆ, ಈ ವರ್ಷ ಖಂಡಿತಾ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
- Advertisement -
ಮತ್ತೆ ಲವ್ ಮ್ಯಾರೇಜ್ ಆಗುತ್ತೀರಾ? ಅರೇಂಜ್ಡ್ ಮ್ಯಾರೇಜ್ ಆಗುತ್ತೀರಾ? ಎಂದು ಮರು ಪ್ರಶ್ನೆ ಮಾಡಲಾಗಿದೆ. ಅದಕ್ಕೆ ವಿಜಯ್ ದೇವರಕೊಂಡ, ಖಂಡಿತಾ ಲವ್ ಮ್ಯಾರೇಜ್ ಎಂದು ಹೇಳಿದ್ದಾರೆ. ಆದರೂ, ಆ ಹುಡುಗಿಯನ್ನು ಅಪ್ಪ, ಅಮ್ಮ ಇಬ್ಬರೂ ಮೆಚ್ಚಬೇಕು. ಅವರಿಗೆ ಆ ಹುಡುಗಿ ಇಷ್ಟ ಆಗಬೇಕು ಎಂದು ಹೇಳಿಕೊಂಡಿದ್ದಾರೆ. ಇದರ ಮಧ್ಯೆ ಆ ಹುಡುಗಿ ಯಾರು? ಎಂದಾಗ, ವಿಜಯ್ ‘ಡಾರ್ಲಿಂಗ್ ಐ ಲವ್ ಯೂ’ ಎಂದು ನಗುತ್ತಲೇ ಉತ್ತರಿಸಿ ಸುಮ್ಮನಾಗಿದ್ದಾರೆ. ಅಲ್ಲಿಗೆ ಆ ಹುಡುಗಿ ಯಾರು ಎಂಬುದನ್ನು ಗುಟ್ಟು ಬಿಟ್ಟು ಕೊಟ್ಟಿಲ್ಲ.
- Advertisement -
- Advertisement -
ಸದ್ಯ ವಿಜಯ್ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನಿಮ್ಮ ಹುಡುಗಿ ರಶ್ಮಿಕಾ ಮಂದಣ್ಣ (Rashmika Mandanna) ಅಲ್ವಾ ಅಂತ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.