ಬೆಂಗಳೂರು: ಹಣಕ್ಕಾಗಿ ಕುಟುಂಬವೇ ಕಳ್ಳರಾದ ಇಂಟರೆಸ್ಟಿಂಗ್ ಸ್ಟೋರಿ ಇದಾಗಿದೆ. ಬ್ಯಾಂಕ್‍ನಲ್ಲಿ ಚಿನ್ನವನ್ನು ಅಡವಿಟ್ಟು, ಕಳ್ಳತನವಾಗಿದೆ ಎಂದು ಠಾಣೆಯಲ್ಲಿ ಸುಳ್ಳು ದೂರನ್ನು ನೀಡುತ್ತಿದ್ದ ಕುಟುಂಬವನ್ನು ಪೊಲೀಸರು ಬಂಧಿಸಿದ್ದಾರೆ.
ಕುಟುಂಬದ ಯಜಮಾನ ರವಿ ಪ್ರಕಾಶ್, ಮಗ ಮಿಥುನ್ ಕುಮಾರ್. ಆತನ ಹೆಂಡತಿ ಸಂಗೀತಾ, ತಂಗಿ ಆಶಾ ಮತ್ತು ಆಕೆಯ ಗಂಡ ಚರಣ್ ಹಾಗೂ ಮಿಥುನ್ ಕುಮಾರ್ ಪ್ರಿಯತಮೆ ಅಸ್ಮಾ ಹಾಗೂ ಸ್ನೇಹಿತ ದೀಪಕ್ ಬಂಧಿತ ಆರೋಪಿಗಳಾಗಿದ್ದಾರೆ. ಕಳ್ಳ ಮಾರ್ಗದ ಮೂಲಕ ಹಣ ಮಾಡಲು ಹೋಗಿ ಈಗ ಇಡೀ ಕುಟುಂಬವೇ ಪರಪ್ಪನ ಅಗ್ರಹಾರ ಜೈಲು ಪಾಲಾಗಿದೆ. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ
Advertisement
Advertisement
ಬೆಂಗಳೂರು ಹೊರವಲಯದ ಸರ್ಜಾಪುರದಲ್ಲಿ ನಿವಾಸಿಯಾಗಿರುವ ಕುಟುಂಬವೊಂದು ಮನೆಯಲ್ಲಿದ್ದ ಚಿನ್ನ ಅಡವಿಟ್ಟು, ಚಿನ್ನ ಕಳುವಾಗಿದೆ ಎಂದು ಪೊಲೀಸರಿಗೆ ಸುಳ್ಳು ಮಾಹಿತಿ ನೀಡುತ್ತಿತ್ತು. ಪರಿಚಿತರ ಹೆಸರಿನಲ್ಲಿ ಚಿನ್ನ ಅಡವಿಡುತ್ತಿದ್ದ, ಕಳ್ಳ ಕುಟುಂಬದ ಸುಳ್ಳನ್ನು ಸರ್ಜಾಪುರ ಪೊಲೀಸರು ಬಯಲಿಗೆಳೆದಿದ್ದಾರೆ. ಇದನ್ನೂ ಓದಿ: UP Election – ಅಮಿತ್ ಶಾ ಮನೆ-ಮನೆ ಪ್ರಚಾರ
Advertisement
Advertisement
ಕುಟುಂಬದ ಪ್ಲ್ಯಾನ್ ಏನು ಗೊತ್ತಾ?: ನಾವು ಇಡೀ ಕುಟುಂಬಸ್ಥರು ದೇವಸ್ಥಾನಕ್ಕೆ ಹೊರ ಹೋಗಿದ್ದೆವು. ಸುಮಾರು 25 ಲಕ್ಷ ಮೌಲ್ಯದ ಒಂದೂಕಾಲು ಕೆಜಿ ಚಿನ್ನ ಕಳ್ಳತನವಾಗಿದೆ ಎಂದು ಆರೋಪಿಗಳಲ್ಲಿ ಒಬ್ಬನಾದ ರವಿ ಪ್ರಕಾಶ್ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಸರ್ಜಾಪುರ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಆರೋಪಿಗಳು ಮಾತ್ರ ಪತ್ತೆಯಾಗಿರಲಿಲ್ಲ. ಕೊನೆಗೆ ಮನೆಯವರ ಮೇಲೆ ಸಂಶಯ ಮೂಡಿ ತನಿಖೆಗಿಳಿದಾಗ ಸ್ಫೋಟಕ ಸತ್ಯ ಬಯಲಾಗಿದೆ. ಆರೋಪಿಗಳು ಈ ಹಿಂದೆ ಸಹ ಇದೇ ರೀತಿ ಯಶವಂತಪುರ ಸೇರಿದಂತೆ ಎರಡು ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದರು. ಒಡವೆ ಕಳವು ಪ್ರಕರಣ ದಾಖಲು ಮಾಡಿ ಒಡವೆ ಪಡೆದುಕೊಂಡಿದ್ದರು. ಈ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರ ತನಿಖೆಯ ದಿಕ್ಕು ಕಳ್ಳತನದ ದೂರು ನೀಡಿದ್ದ ಕುಟುಂಬಸ್ಥರ ಮೇಲೆ ಅನುಮನ ಮೂಡುವಂತೆ ಮಾಡಿದೆ.
ನಂತರ ಪೊಲೀಸರು ದೂರುದಾರ ರವಿ ಪ್ರಕಾಶ್, ಮಗ ಮಿಥುನ್ ಕುಮಾರ್ ತನ್ನ ಸ್ನೇಹಿತ ದೀಪಕ್ ಮೂಲಕ ಬ್ಯಾಂಕೊಂದರಲ್ಲಿ ಒಡವೆಗಳನ್ನು ಗಿರವಿಯಿಡಿಸುತ್ತಾನೆ. ಉಳಿದವರು ಒಡವೆ ಕಳ್ಳತನವಾದಂತೆ ಪೊಲೀಸರಿಗೆ ನಂಬಿಸುವಂತೆ ನಾಟಕವಾಡುತ್ತಾರೆ. ಕೊನೆಗೆ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇಡೀ ಮನೆ ಮಂದಿಯನ್ನು ವಿಚಾರಣೆಗೊಳಪಡಿಸಿದಾಗ ತಮ್ಮ ಬಳಿ ಇರುವ ಎಲ್ಲಾ ಚಿನ್ನಾಭರಣವನ್ನು ಪರಿಚಿತನೊಬ್ಬನ ಮೂಲಕ ಗಿರವಿ ಇಟ್ಟು ಹಣ ಪಡೆದುಕೊಳ್ಳುವುದು. ಬಳಿಕ ದೂರು ನೀಡುವುದು ಗಿರವಿ ಇಟ್ಟ ಸ್ನೇಹಿತರ ಮೇಲೆಯೇ ಕೇಸು ದಾಖಲಿಸುವ ಹುನ್ನಾರ ನಡೆಸುವುದು ಇವರ ಪ್ಲ್ಯಾನ್ ಆಗಿತ್ತು ಎನ್ನುವ ಅಸಲಿ ಕಹಾನಿ ಬಯಲಾಗಿದೆ.