ಚೆನ್ನೈ: ಕೋವಿಡ್-19 ಸೋಂಕಿಗೆ ಹೆದರಿ ಕುಟುಂಬದ ಸದಸ್ಯರೊಂದಿಗೆ ವಿಷ ಸೇವಿಸಿದ ತಾಯಿ ಹಾಗೂ ಆಕೆಯ 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ.
ಸೋಂಕಿನ ಭಯದಿಂದ ಮಹಿಳೆ, ಆಕೆಯ ತಾಯಿ ಹಾಗೂ ಸಹೋದರರು ಸೇರಿದಂತೆ ಕುಟುಂಬದ 5 ಜನರು ವಿಷ ಸೇವಿಸಿದ್ದಾರೆ. ವಿಷ ಸೇವಿಸಿದವರಲ್ಲಿ ಮೂವರು ಬದುಕುಳಿದಿದ್ದು, ಮಹಿಳೆ ಹಾಗೂ ಆಕೆಯ ಕಂದಮ್ಮ ಸಾವನ್ನಪ್ಪಿದ್ದಾರೆ.
Advertisement
Advertisement
ಮೃತ ಮಹಿಳೆ ಜ್ಯೋತಿಕಾ(23)ಳ ತಂದೆ 2021ರ ಡಿಸೆಂಬರ್ ತಿಂಗಳಿನಲ್ಲಿ ಸಹಜ ಸಾವನ್ನಪ್ಪಿದ್ದರು. ಇದರಿಂದ ಇಡೀ ಕುಟುಂಬವೇ ನೊಂದಿತ್ತು. ಜ್ಯೋತಿಕಾ ಕೂಡಾ ತನ್ನ ಪತಿಯಿಂದ ಬೇರ್ಪಟ್ಟು, ಮಗುವಿನೊಂದಿಗೆ ತನ್ನ ತವರು ಮನೆಯಲ್ಲಿ ವಾಸವಿದ್ದಳು. ಇದನ್ನೂ ಓದಿ: ಇಂದಿನಿಂದ ಬೂಸ್ಟರ್ ಡೋಸ್ – ಯಾರು ಪಡೆಯಬಹುದು? ಅರ್ಹತೆ ಏನು?
Advertisement
ಜನವರಿ 8 ರಂದು ಜ್ಯೋತಿಕಾಳಿಗೆ ಕೋವಿಡ್ ಸೋಂಕು ತಗುಲಿರುವ ವಿಷಯ ತಿಳಿದು ಬಂದಿದೆ. ಈ ವಿಚಾರವನ್ನು ಮನೆಯವರಿಗೆ ತಿಳಿಸಿ, ಅದು ಹರಡುವ ಭೀತಿಯಿಂದ ಮನೆಯವರು ವಿಷ ಸೇವಿಸಿದ್ದಾರೆ.
Advertisement
ವಿಷ ಸೇವಿಸಿದ ವಿಚಾರ ನೆರೆಹೊರೆಯವರಿಗೆ ಮರುದಿನ ತಿಳಿದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಜ್ಯೋತಿಕಾ ಹಾಗೂ ಆಕೆಯ ಮಗು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಸೋಂಕಿಗೆ ತುತ್ತಾದವರಲ್ಲಿ ಯುವಕರದ್ದೇ ಸಿಂಹ ಪಾಲು!
ಕೋವಿಡ್-19ಗೆ ಹೆದರಿ ತಮ್ಮ ಜೀವನವನ್ನು ಕೊನೆಗೊಳಿಸುವ ನಿರ್ಧಾರ ಮಾಡಿರುವುದಾಗಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಿವಾಸಿಗಳಿಗೆ ಕೋವಿಡ್‌ಗೆ ಹೆದರುವ ಅಗತ್ಯ ಇಲ್ಲ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಸಹಾಯ ಪಡೆದುಕೊಳ್ಳಬೇಕು ಎಂದು ಆರೋಗ್ಯ ಅಧಿಕಾರಿಗಳು ಒತ್ತಾಯಿಸಿದ್ದಾರೆ.