ಬೆಂಗಳೂರು: ಮನೆಯಲ್ಲಿ ವಯಸ್ಸಾಗಿರೋ ತಂದೆ-ತಾಯಿನೋ, ಅಜ್ಜ-ಅಜ್ಜಿನೋ ಮಿಸ್ಸಾದ್ರೆ ಹುಡುಕೋ ಪ್ರಯತ್ನ ಮಾಡದ ಈ ಕಾಲದಲ್ಲಿ, ಮನೆಯಲ್ಲಿ ಸಾಕಿದ ಬೆಕ್ಕು ಮಿಸ್ಸಾಗಿದೆ ಅಂತಾ ಕುಟುಂಬವೊಂದು ಠಾಣೆ ಮೆಟ್ಟಿಲೇರಿದೆ. ಆ ಇಂಟಸ್ಟಿಂಗ್ ಸ್ಟೋರಿಯ ಫುಲ್ ಡಿಟೇಲ್ಸ್ ಇಲ್ಲಿದೆ.
Advertisement
ಹೌದು. ನಾಯಿ ಕಳೆದೋಗಿದೆ ಹುಡುಕಿ ಕೊಡಿ ಅಂತ ಇತ್ತೀಚೆಗೆ ದೂರು ಕೊಡುವವರ ಸಂಖ್ಯೆ ಬೆಂಗಳೂರಿನಲ್ಲಿ ಸ್ವಲ್ಪ ಜಾಸ್ತಿನೇ ಇದೆ. ಆದರೆ ಇದು ವಿಚಿತ್ರ. ಈ ಬಾರಿ ಬೆಕ್ಕು ಹುಡುಕಿಕೊಡಿ ಅಂತ ಕುಟುಂಬವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Advertisement
Advertisement
ತಿಲಕನಗರ ನಿವಾಸಿ ಅನ್ವರ್ ಶರೀಫ್ ಮಗಳು ಮಿಸ್ಬಾ ಶರೀಫ್‍ಗೆ ಪ್ರಾಣಿಗಳನ್ನು ಸಾಕೋದು ಅಂದ್ರೆ ತುಂಬಾ ಪ್ರೀತಿ. 3 ವರ್ಷದ ಹಿಂದೆ ವೈಟ್ ಪರ್ಷಿಯನ್ ಬೆಕ್ಕಿನ ಮರಿಗೆ ಚರ್ಮದ ಅಲರ್ಜಿ ಆಗಿದೆ ಅಂತ ಯಾರೋ ರಸ್ತೆ ಪಕ್ಕದಲ್ಲಿ ಬಿಟ್ಟು ಹೋಗಿದ್ರು. ಇದನ್ನು ನೋಡಿದ ಮಿಸ್ಬಾ ಶರೀಫ್ ಅದನ್ನು ತಂದು ಆರೈಕೆ ಮಾಡಿ ಗುಣಪಡಿಸಿದ್ರು. ಅಂದಿನಿಂದ ಆ ಬೆಕ್ಕು ಇವ್ರಯ ಸದಸ್ಯರಲ್ಲಿ ಒಬ್ಬರಾಗಿದ್ರು. ಆದರೆ ಇದೀಗ ಪ್ರೀತಿಯ ಬೆಕ್ಕು ಇದೇ 15ರಂದು ನಾಪತ್ತೆಯಾಗಿದೆ. ಇದನ್ನೂ ಓದಿ: ಬೋಸ್‍ರ ಆಜಾದ್ ಹಿಂದ್ ಫೌಜ್‍ನಿಂದ ಸ್ವಾತಂತ್ರ್ಯ: ಅರ್ಧೇಂದು ಬೋಸ್
Advertisement
ಪ್ರಾಣಿಗಳ ಕಳ್ಳರ ಗ್ಯಾಂಗ್ ಬೆಕ್ಕನ್ನು ಕದ್ದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ತಿಲಕನಗರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಬೆಕ್ಕಿನ ಫೋಟೋ ಅಂಟಿಸಿ ಹುಡುಕಿಕೊಡುವವರಿಗೆ 35 ಸಾವಿರ ಬಹುಮಾನ ಕೊಡುವುದಾಗಿ ತಿಳಿಸಿದ್ದಾರೆ.
ಸದ್ಯ ಪೊಲೀಸರು ವೈಟ್ ಪರ್ಷಿಯನ್ ತಳಿ ಬೆಕ್ಕಿನ ಹುಡುಕಾಟದಲ್ಲಿದ್ದಾರೆ. ಮತ್ತೊಂದ್ಕಡೆ ಇವತ್ತಲ್ಲ ನಾಳೆ ನಮ್ಮ ಬೆಕ್ಕು ಬಂದೇ ಬರುತ್ತೆ ಅಂತ ಕುಟುಂಬಸ್ಥರು ಕಾಯ್ತಿದ್ದಾರೆ.