ಮೈಸೂರು: ಗ್ರಾಮಸ್ಥರು ತಮ್ಮ ಜಾಗದಿಂದ ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕುಟುಂಬವೊಂದು ದಯಾಮರಣಕ್ಕೆ (Euthanasia) ಅರ್ಜಿ ಸಲ್ಲಿಸಿರುವ ಘಟನೆ ಸಿಎಂ ಸಿದ್ದರಾಮಯ್ಯ ( Siddaramaiah) ಅವರ ವರುಣ (Varuna) ಕ್ಷೇತ್ರದ ರಾಂಪುರದಲ್ಲಿ ನಡೆದಿದೆ.
90 ವರ್ಷಗಳಿಂದ ವಾಸವಿರುವ ಕುಟುಂಬವನ್ನು ಗ್ರಾಮಸ್ಥರು ಎತ್ತಂಗಡಿ ಮಾಡಲು ಹುನ್ನಾರ ಮಾಡುತ್ತಿದ್ದಾರೆ. ಇದು ನಮ್ಮ ಪೂರ್ವಿಕರಿದ್ದ ಜಾಗವಾಗಿದ್ದು, ಬೇಕಾದರೆ ಇದೇ ನೆಲದಲ್ಲಿಯೇ ನಾವು ಪ್ರಾಣ ಬಿಡಲು ಸಿದ್ಧರಿದ್ದೇವೆ ಎಂದು ಇಡೀ ಕುಟುಂಬ ದಯಾಮರಣ ಕೋರಿ ತಹಶೀಲ್ದಾರ್‍ಗೆ ಅರ್ಜಿ ಸಲ್ಲಿಸಿದೆ. ಇದನ್ನೂ ಓದಿ: ಆಹ್ವಾನ ಬಂದಿದ್ದು, ಜ.22 ರ ಬಳಿಕ ರಾಮಮಂದಿರಕ್ಕೆ ಭೇಟಿ ನೀಡುತ್ತೇನೆ: ಅಖಿಲೇಶ್ ಯಾದವ್
ನಮ್ಮ ಮುತ್ತಾತನ ಕಾಲದಿಂದಲೂ ಈ ಜಾಗದಲ್ಲಿ ವಾಸವಾಗಿದ್ದೇವೆ. ಸುಮಾರು 90 ವರ್ಷಗಳಿಂದ ಈ ಖರಾಬು ಜಮೀನಿನಲ್ಲಿ ನಮ್ಮ ಕುಟುಂಬ ವಾಸವಿದೆ. ಈಗ ಗ್ರಾಮಸ್ಥರು ಒಕ್ಕಲೆಬ್ಬಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಗ್ರಾಮದ ಜ್ಯೋತಿ ಎಂಬ ಮಹಿಳೆ ಹಾಗೂ ಅವರ ಕುಟುಂಬ ಆರೋಪಿಸಿದೆ.
ಸರ್ವೇ ನಂಬರ್ 39ರಲ್ಲಿ ಈಗಾಗಲೇ ಒಂದು ಎಕರೆ ಪ್ರದೇಶದಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಇನ್ನುಳಿದಿರುವ 18 ಗುಂಟೆ ಪ್ರದೇಶದಲ್ಲಿ ವಾಸವಿದ್ದ ಜಮೀನಿನಲ್ಲಿ ಗ್ರಾಮಸ್ಥರು ಸಮುದಾಯ ಭವನ ನಿರ್ಮಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ಈಗಾಗಲೇ ಒಂದು ಎಕರೆ ಜಮೀನು ಸ್ವಾಧೀನಕ್ಕೆ ಪಡೆದಿದ್ದಾರೆ. ಉಳಿದ 18 ಗುಂಟೆ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ನಡೆಸುತ್ತಿದ್ದೇವೆ. ಈ ಜಾಗದಲ್ಲಿ ಜನತಾ ಮನೆ ನಿರ್ಮಿಸಲು ನಮಗೆ ಮಂಜೂರಾತಿ ಪತ್ರ ದೊರೆತಿದೆ. ಈಗ ಈ ಜಾಗದಲ್ಲಿ ಅಡುಗೆ ಮನೆ ನಿರ್ಮಿಸಲು ಗ್ರಾಮಸ್ಥರು ಮುಂದಾಗಿದ್ದು, ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಮಣಿಪುರಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ