ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಿಡ್ನಿ ಡೋನರ್ಸ್ ಹಾಗೂ ಕಿಡ್ನಿ ಪಡೆದುಕೊಳ್ಳುವವರಿಗೆ ಅಂಗೈಯಲ್ಲಿ ಚಂದ್ರನನ್ನು ತೋರಿಸಿ ಮಕ್ಮಲ್ ಟೋಪಿ ಹಾಕುತ್ತಿದ್ದ ಕಿರಾತಕ ವಿದೇಶಿಗರ ಗ್ಯಾಂಗ್‍ವೊಂದು ಪೊಲೀಸರ ಬಲೆಗೆ ಬಿದ್ದಿದೆ.
ನಯ ವಂಚಕರು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಾದ ಸಾಗರ್, ಬ್ಯಾಪ್ಟಿಸ್, ಕಾವೇರಿ ಹೀಗೆ ಸಾಲು ಸಾಲು ಆಸ್ಪತ್ರೆಗಳ ಹೆಸರಲ್ಲಿ ನಕಲಿ ವೆಬ್ ಸೈಟ್‍ಗಳನ್ನು ತೆರೆದು ಕಿಡ್ನಿ ಡೋನರ್ಸ್ ಹಾಗೂ ಕಿಡ್ನಿ ಪಡೆದುಕೊಳ್ಳಲು ಇಚ್ಚಿಸುತ್ತಿದ್ದವರನ್ನ ಸಂಪರ್ಕ ಮಾಡಿ ಕೋಟಿ, ಕೋಟಿ ಹಣದ ಆಮಿಷ ಒಡ್ಡುತ್ತಿದ್ದರು. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ
Advertisement
Advertisement
ಕಿಡ್ನಿ ಕೊಡುವವರಿಗೆ ಕಿಡ್ನಿ ಪಡೆದುಕೊಳ್ಳವವರಿಗೂ ಪ್ರತಿ ಕಿಡ್ನಿಗೆ 4 ಕೋಟಿ ರೂಪಾಯಿ ಕೊಡುವುದಾಗಿ ಆಸೆ ಹುಟ್ಟಿಸುತ್ತಿದ್ದರು. ಆರೋಪಿಗಳು ನಾಲ್ಕು ಕೋಟಿ ಹಣ ಬರುವುದಕ್ಕೆ ಪ್ರೋಸೆಸಿಂಗ್ ಚಾರ್ಜ್ ಇರುತ್ತೆ ಆರಂಭದಲ್ಲಿ ಭರಿಸಬೇಕೆಂದು ನಂಬಿಸಿ 10 ರಿಂದ 20 ಸಾವಿರ ರೂ. ಪಡೆಯುತ್ತಿದ್ದರು.
Advertisement
ಹಣ ಕೈಗೆ ಸಿಗುತ್ತಿದ್ದಂತೆ ನಾಲ್ಕು ಕೋಟಿ ಹಣ ಬ್ಯಾಂಕ್‍ನಲ್ಲಿ ಹಾಕಿದ್ದು ಅದು ನಿಮ್ಮ ಅಕೌಂಟಿಗೆ ಬರುವುದಕ್ಕೂ ಮುನ್ನ ಶೇ.10 ಹಣ ಕೊಡಬೇಕೆಂದು ಲಕ್ಷ ಲಕ್ಷ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದರು. ವಂಚಕರ ಬಗ್ಗೆ ಎಚ್ಚೆತ್ತ ಮೋಸ ಹೋದವರು ಹೆಚ್‍ಎಸ್‍ಆರ್ ಲೇ-ಔಟ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಇದನ್ನೂ ಓದಿ: ಬಾಲಕಿಯ ಮೇಲೆ ಅತ್ಯಾಚಾರ – ಪಾದ್ರಿ ಅರೆಸ್ಟ್
Advertisement
ಪ್ರಕರಣವನ್ನ ಗಂಭೀರವಾಗಿ ಪರಿಶೀಲನೆ ಮಾಡಿದ ಪೊಲೀಸರು ಆರೋಪಿಗಳಿಗಾಗಿ ಜಾಲ ಬೀಸಿದಾಗ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ವಾಸವಾಗಿರೋ ಮಾಹಿತಿ ತಿಳಿದು ಬಂಧಿಸಿದ್ದಾರೆ. ಆರೋಪಿಗಳ ತನಿಖೆಯಿಂದ ಕಿಡ್ನಿ ಹೆಸರಲ್ಲಿ ಕೋಟಿ, ಕೋಟಿ ಹಣ ವಂಚನೆ ಮಾಡಿರೋದು ಆರೋಪಿಗಳ ತನಿಖೆಯಿಂದ ಬಹಿರಂಗವಾಗಿದೆ. ಮೋಸ ಹೋದವರು ಠಾಣೆಗೆ ಬಂದು ದೂರು ಕೊಡುವಂತೆ ಪೊಲೀಸ್ ಅಧಿಕಾರಿಗಳು ಮನವಿಯನ್ನು ಮಾಡಿಕೊಂಡಿದ್ದಾರೆ.