ಬೆಂಗಳೂರು: ನಕಲಿ ವೋಟರ್ ಐಡಿ (Fake Voter ID) ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಸುರೇಶ್ (Byrathi Suresh) ರಾಜೀನಾಮೆ ನೀಡಬೇಕು ಅಂತ ಬಿಜೆಪಿ (BJP) ಒತ್ತಾಯ ಮಾಡಿದೆ. ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ರವಿಕುಮಾರ್ (N Ravikumar) ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಸಂವಿಧಾನ ವಿರೋಧಿ ಕೆಲಸವನ್ನು ಈ ಸರ್ಕಾರದ ಸಚಿವರು ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಭೈರತಿ ಸುರೇಶ್. ಸುರೇಶ್ ಗೆಲ್ಲೋಕೆ ನಕಲಿ ವೋಟರ್ ಐಡಿ ಮಾಡಿದ್ದಾರೆ. ಮೌನೇಶ್ ಎಂಬ ಸುರೇಶ್ ಆಪ್ತರನ್ನ ಸಿಸಿಬಿ (CCB) ಬಂಧನ ಮಾಡಿದೆ. ಅಕ್ರಮವಾಗಿ ಐಡಿ ಸಂಗ್ರಹ, ಆಧಾರ್ ಕಾರ್ಡ್ ಸೃಷ್ಟಿ ಮಾಡೋ ಕೆಲಸ ಮೌನೇಶ್ ಮಾಡಿದ್ದಾನೆ. ಇದಕ್ಕೆ ಕಾರಣ ಸಚಿವರು. ಹೀಗಾಗಿ ಭೈರತಿ ಸುರೇಶ್ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಶೀಘ್ರದಲ್ಲೇ ಬಿಜೆಪಿ ನೂತನ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ: ಬಿ.ವೈ ವಿಜಯೇಂದ್ರ
Advertisement
Advertisement
ಇದೊಂದು ಅಕ್ರಮ. ಇದೊಂದು ಸಂವಿಧಾನ ವಿರೋಧಿ ಚಟುವಟಿಕೆ. ಸಿಸಿಬಿ ತನಿಖೆ ಸರಿಯಾಗಿ ಆಗಬೇಕು. ಎಷ್ಟು ನಕಲಿ ವೋಟರ್ ಐಡಿ ಮಾಡಿದರು? ಎಷ್ಟು ನಕಲಿ ಆಧಾರ್ ಮಾಡಿದ್ದಾರೆ ಅನ್ನೋ ಸಂಪೂರ್ಣ ತನಿಖೆ ಆಗಬೇಕು. ತನಿಖೆ ಆಗಿ ವರದಿ ಬರುವ ಹೊತ್ತಿಗೆ ಸಚಿವ ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು. ಯಾವುದೇ ಪ್ರಭಾವ ಬೀರದೆ ತನಿಖೆ ಆಗಬೇಕಾದರೆ, ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು ಎಂದರು. ಇದನ್ನೂ ಓದಿ: ನನ್ನ, ಡಿಕೆಶಿ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ: ಸತೀಶ್ ಜಾರಕಿಹೊಳಿ
Advertisement
Advertisement
ಇದೇ ರೀತಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ತನಿಖೆ ಮೇಲೆ ಪ್ರಭಾವ ಬೀರಬಾರದು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಕೂಡಾ ರಾಜೀನಾಮೆ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: 2024ಕ್ಕೆ ಭಾರತದಲ್ಲಿ ಮೋದಿ ಸರ್ಕಾರ ಇರಲ್ಲ: ಸಂತೋಷ್ ಲಾಡ್
Web Stories