ಲಕ್ನೋ: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಅಮಿತ್ ಶಾ, ಪಿಯೂಷ್ ಗೋಯಲ್, ನಿತಿನ್ ಗಡ್ಕರಿ ಹೆಸರಿನ ನಕಲಿ ಕೋವಿಡ್ ಲಸಿಕಾ ಪ್ರಮಾಣಪತ್ರವನ್ನು ನೀಡಲಾಗಿದೆ. ಈ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಪ್ರಮಾಣಪತ್ರಗಳನ್ನು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ತಖಾ ತಹಸಿಲ್‌ನಲ್ಲಿರುವ ಆರೋಗ್ಯ ಕೇಂದ್ರದಿಂದ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನು ಗಮನಿಸಿದ ಅಧಿಕಾರಿಯೊಬ್ಬರು ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದಿದ್ದಾರೆ.
Advertisement
Advertisement
ಪ್ರಮಾಣಪತ್ರದಲ್ಲಿ ಕೇಂದ್ರ ಸಚಿವ ಅಮಿತ್ ಶಾ, ನಿತಿನ್ ಗಡ್ಕರಿ, ಹಾಗೂ ಪಿಯೂಷ್ ಗೋಯಲ್ ಅವರ ಹೆಸರು ಹೋಲುತ್ತದೆ. ನಕಲಿ ಲಸಿಕೆ ಪ್ರಮಾಣಪತ್ರದಲ್ಲಿ ಅಮಿತ್ ಶಾ ಅವರ ವಯಸ್ಸು 33, ನಿತಿನ್ ಗಡ್ಕರಿ ಅವರ ವಯಸ್ಸು 30, ಪುಷ್ಯು ಗೋಯಲ್ ಅವರ ವಯಸ್ಸು 37 ಹಾಗೆಯೇ ಓಂ ಬಿರ್ಲಾ ಅವರ ವಯಸ್ಸು 26 ಎಂದು ನಮೂದಿಸಲಾಗಿದೆ. ಇದನ್ನೂ ಓದಿ: ಹಳ್ಳಿಗೆ 300 ಕೋವಿಡ್ ಲಸಿಕೆಗಳನ್ನು ಸಾಗಿಸಿದ ಡ್ರೋನ್
Advertisement
Advertisement
ಈ ವ್ಯಕ್ತಿಗಳ ಮೊದಲ ಡೋಸ್ ಅನ್ನು ಡಿಸೆಂಬರ್ 12ರಂದು ನೀಡಲಾಗಿದೆ ಎಂದು ಉಲ್ಲೇಖಿಸಿದೆ. ಜೊತೆಗೆ ಎರಡನೇ ಡೋಸ್‌ಗೆ 2022ರ ಮಾರ್ಚ್ 5ರಿಂದ ಎಪ್ರಿಲ್ 3ರ ಒಳಗಾಗಿ ನಿಗದಿ ಪಡಿಸಿರುವಂತೆ ಉಲ್ಲೇಖವಾಗಿದೆ.
ಈ ಪ್ರಮಾಣಪತ್ರಗಳ ಪ್ರತಿಯನ್ನು ಪರಿಶೀಲಿಸಿದಾಗ ಅದರಲ್ಲಿ ನಮೂದಿಸಲಾದ ಆರೋಗ್ಯ ಕೇಂದ್ರದಲ್ಲಿ ಅಂತಹ ಯಾವುದೇ ಲಸಿಕೆಗಳನ್ನು ನೀಡಲಾಗಿಲ್ಲ ಎಂದು ತಿಳಿದು ಬಂದಿದೆ. ಇದನ್ನೂ ಓದಿ: 7 ಎಕರೆ ಆಸ್ತಿಗಾಗಿ ಕಿಡ್ನಾಪ್ ಆಗಿದ್ದ 98ರ ಅಜ್ಜಿ ಓಣಿಯಲ್ಲಿ ಪತ್ತೆ
ಈ ವಿಷಯದ ಬಗ್ಗೆ ಸಮುದಾಯ ಆರೋಗ್ಯ ಕೆಂದ್ರ ಉಸ್ತುವಾರಿಯವರನ್ನು ಸಂಪರ್ಕಿಸಿದಾಗ ನಮ್ಮ ಐಡಿಯನ್ನು ಡಿಸೆಂಬರ್ 12 ರಂದು ಹ್ಯಾಕ್ ಮಾಡಲಾಗಿದೆ ಮತ್ತು ಈ ಐಡಿಯನ್ನು ಮುಚ್ಚುವಂತೆ ಪತ್ರ ಬರೆದಿದ್ದೇವೆ ಎಂದು ಹೇಳಿದರು.
ಕೇಂದ್ರ ಸಚಿವರ ಹೆಸರನ್ನು ಉದ್ದೇಶ ಪೂರ್ವಕವಾಗಿ ಬಳಸಿಕೊಳ್ಳಲಾಗಿದೆ. ಇದಕ್ಕಾಗಿ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಲಾಗಿದೆ. ಶೀಘ್ರವೇ ಪಿತೂರಿ ನಡೆಸಿರುವವರನ್ನು ಬಯಲಿಗೆಳೆಯಲಾಗುತ್ತದೆ ಎಂದು ಸಿಎಂಒ ಡಾ. ಭಗವಾನ್ ದಾಸ್ ಬಿರೋರಿಯಾ ಹೇಳಿದ್ದಾರೆ. ಇದನ್ನೂ ಓದಿ: ದೇಶದಲ್ಲಿ 62 ಲಕ್ಷಕ್ಕೂ ಅಧಿಕ ಕೋವಿಡ್ ಡೋಸ್ ವ್ಯರ್ಥ