DistrictsHaveriLatestMain Post

7 ಎಕರೆ ಆಸ್ತಿಗಾಗಿ ಕಿಡ್ನಾಪ್ ಆಗಿದ್ದ 98ರ ಅಜ್ಜಿ ಓಣಿಯಲ್ಲಿ ಪತ್ತೆ

Advertisements

ಹಾವೇರಿ: 7 ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಿಂದ ಕಿಡ್ನಾಪ್  ಮಾಡಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿದ ಬೆನ್ನಲ್ಲೇ ಗ್ರಾಮದ ಓಣಿಯಲ್ಲಿ ಈಗ ಅಜ್ಜಿ ಪತ್ತೆಯಾಗಿದ್ದಾರೆ.

ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತಿದ್ದಂತೆ ಅಜ್ಜಿಯನ್ನ ಗ್ರಾಮದ ಓಣಿಯಲ್ಲಿ ಬಿಟ್ಟು ಹೋಗಿದ್ದಾರೆ. ದೇವಕ್ಕನ ಸಂಬಂಧಿಕರು ಈಗ ಅಜ್ಜಿಯನ್ನ ಆಡೂರು ಪೊಲೀಸ್ ಠಾಣೆ ಕರೆದುಕೊಂಡು ಬಂದಿದ್ದಾರೆ. ಅಜ್ಜಿಯನ್ನ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಕಿಡ್ನಾಪ್ ಮಾಡಿದ ಆರೋಪಿಗಳನ್ನ ಬಂಧಿಸಿ ತಕ್ಕಶಿಕ್ಷೆ ಕೊಡಿಸಬೇಕು ಎಂದು ಅಜ್ಜಿಯ ಸಂಬಂಧಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 7 ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನೇ ಕಿಡ್ನಾಪ್‍ಗೈದ್ರು

ನಡೆದಿದ್ದೇನು?: ಕಳೆದ ನಾಲ್ಕು ದಿನಗಳ ಹಿಂದೆ 5 ಮಂದಿ ಸೇರಿಕೊಂಡು ವೃದ್ಧೆಯನ್ನ ಕಿಡ್ನಾಪ್ ಮಾಡಿರೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದೇವಕ್ಕ ಅವರಿಗೆ ಸಂತಾನ ಇಲ್ಲದ್ದರಿಂದ ತನ್ನ ಜಮೀನನ್ನ ಮಾಣಿಕಪ್ಪ ದುಂಡಣ್ಣನವರಿಗೆ  ಆಸ್ತಿಯನ್ನ ಬರೆದು ಕೊಟ್ಟಿದ್ದರು. ಹಲವು ವರ್ಷಗಳಿಂದ ವೃದ್ಧೆಯನ್ನ ಆರೈಕೆ ಮಾಡಿಕೊಂಡು ಮಾಣಿಕಪ್ಪ ಕುಟುಂಬಸ್ಥರು ಬಂದಿದ್ದರು. ಅದರೆ ವೃದ್ಧೆಯ ಸಂಬಂಧಿಕರಾಗಿರೋ ಸಂತೋಷ, ಈರಪ್ಪ, ಆದಪ್ಪ, ಪ್ರಕಾಶ ಮತ್ತು ಮಂಜಪ್ಪ ಎಂಬುವರ ಅಜ್ಜಿಯನ್ನ ಆಸ್ತಿಯಾಗಿ ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿತ್ತು. ಇದೀಗ ಅಜ್ಜಿ ಪತ್ತೆಯಾಗಿದ್ದು, ಪೊಲೀಸರು ಅಜ್ಜಿಯನ್ನು ವಿಚಾರಣೆ ಮಾಡಿ ಮಾಹಿತಿ ಕಲೆಹಾಕುತ್ತಿದ್ದಾರೆ.

Leave a Reply

Your email address will not be published.

Back to top button