ಹಾವೇರಿ: ಏಳು ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನು ಕಿಡ್ನಾಪ್ ಆದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ.
ದೇವಕ್ಕ ದುಂಡಣ್ಣನವರ ಅಪಹರಣಗೊಂಡ ವೃದ್ಧೆ. ಈಗ ವೃದ್ಧೆಯ ಸಂಬಂಧಿಕರಾಗಿರುವ ಸಂತೋಷ, ಈರಪ್ಪ, ಆದಪ್ಪ, ಪ್ರಕಾಶ ಮತ್ತು ಮಂಜಪ್ಪ ಎಂಬುವರ ವಿರುದ್ಧ ಕಿಡ್ನಾಪ್ ಮಾಡಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಶ್ರೀನಿವಾಸ್ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್
Advertisement
ಸಂತಾನ ಇಲ್ಲದ್ದರಿಂದ ತನ್ನ ಜಮೀನನ್ನು ಮಾಣಿಕಪ್ಪ ದುಂಡಣ್ಣನವರ ಎಂಬುವರಿಗೆ ದೇವಕ್ಕ ಬರೆದು ಕೊಟ್ಟಿದ್ದರು. ದೇವಕ್ಕ ಅವರನ್ನು ಆರೈಕೆ ಮಾಡುತ್ತಿದ್ದ ಮಾಣಿಕಪ್ಪ ಕಳೆದ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಮಾಣಿಕಪ್ಪ ಮೃತಪಟ್ಟಿದ್ದರೂ ಅವರ ಕುಟುಂಬಸ್ಥರು ಹಲವು ವರ್ಷಗಳಿಂದ ದೇವಕ್ಕ ಅವರನ್ನು ನೋಡಿಕೊಳ್ಳುತ್ತಿದ್ದರು. ಇದನ್ನೂ ಓದಿ: ಸಂಡೂರು ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಪಟ್ಟು – ಸದನದ ಬಾವಿಗಿಳಿದು ಧರಣಿ
Advertisement
ಮಾಣಿಕಪ್ಪನ ಮನೆಯವರು ಜಮೀನಿಗೆ ಹೋಗಿದ್ದ ವೇಳೆ ವೃದ್ಧೆಯನ್ನ ಆರೋಪಿಗಳು ಹುಡುಕಾಡಿ ಹೊತ್ತುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆಡೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ವೃದ್ಧೆಯ ಐವರು ಸಂಬಂಧಿಕರ ವಿರುದ್ಧ ಕೇಸ್ ದಾಖಲಾಗಿದೆ.