ಹಾಸ್ಟೆಲ್‍ಗೆ ನುಗ್ಗಿ ಸಿಬ್ಬಂದಿ, ವಿದ್ಯಾರ್ಥಿನಿಯರಿಗೆ ನಕಲಿ ಪತ್ರಕರ್ತರಿಂದ ಬೆದರಿಕೆ

Public TV
1 Min Read
bgk public tv collage copy

– 6 ಮಂದಿಯನ್ನು ಇಬ್ಬರು ಪೊಲೀಸ್ ವಶಕ್ಕೆ

ಬಾಗಲಕೋಟೆ: ಪಬ್ಲಿಕ್ ಟವಿಯ ಹೆಸರು ಹೇಳಿಕೊಂಡು ಲೇಡಿಸ್ ಹಾಸ್ಟೆಲ್‍ಗೆ ನುಗ್ಗಿ ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ, ಅವಾಂತರ ಸೃಷ್ಟಿಸಿದ್ದ 6 ಜನ ನಕಲಿ ಪತ್ರಕರ್ತರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಈ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ. ಓರ್ವ ಮಹಿಳೆ ಹಾಗೂ 5 ಜನ ಪುರುಷರು ತಾವು ಪಬ್ಲಿಕ್ ಟಿವಿಯವರು ಅಂತಾ ಹೇಳಿ ನವನಗರದ 45ನೇ ಸೆಕ್ಟರ್ ನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವೃತ್ತಿಪರ ಮಹಿಳಾ ವಸತಿ ನಿಲಯಕ್ಕೆ ಶನಿವಾರ ಭೇಟಿ ನೀಡಿ, ಹಾಸ್ಟಲ್ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರಿಗೆ ಬೆದರಿಸಿ ಹಣ ವಸೂಲಿ ಮಾಡಲು ಮುಂದಾಗಿದ್ದರು.

bgk public tv 4

ಸದ್ಯ ಈ ವಿಷಯ ತಿಳಿಯುತ್ತಿದ್ದಂತೆಯೇ ಪಬ್ಲಿಕ್ ಟಿವಿಯ ಪ್ರತಿನಿಧಿಗಳು ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಘಟನೆಯಿಂದ ಗಾಬರಿಗೊಂಡಿದ್ದ ಹಾಸ್ಟೆಲ್ ಸಿಬ್ಬಂದಿಗೆ ಧೈರ್ಯ ಹೇಳಿ, ಹಾಸ್ಟೆಲ್ ಸಿಬ್ಬಂದಿಯಿಂದ ನವನಗರ ಠಾಣೆಯಲ್ಲಿ ದೂರು ಕೊಡಿಸಲಾಗಿದೆ.

bgk public tv 3

ಸೆಕ್ಷನ್ 353 ಅಡಿ ಪ್ರಕರಣ ದಾಖಲಿಸಿಕೊಂಡಿರುವ ನವನಗರದ ಮಹಿಳಾ ಠಾಣೆ ಪೊಲೀಸರು, 6 ಮಂದಿ ನಕಲಿ ಪತ್ರಕರ್ತರ ಪೈಕಿ ಕಿಂಗ್‍ಪಿನ್ ಆಗಿದ್ದ ಶಶಿಕಲಾ, ವಿಜಯ್‍ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವೀರೇಶ್ ಲಮಾಣಿ, ಸಿದ್ದು ಕಳ್ಳಿಮನಿ, ರಾಮನಗೌಡ ನ್ಯಾಮಗೌಡರ್ ಸೇರಿದಂತೆ 5 ಜನ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

bgk public tv 2

ಈ ನಕಲಿ ಪತ್ರಕರ್ತರು 10 ಜನರ ಒಂದು ತಂಡವನ್ನು ಮಾಡಿಕೊಂಡು ಸುಮಾರು 15 ದಿನಗಳಿಂದ ಪಬ್ಲಿಕ್ ಟಿವಿ ಹೆಸರು ಹೇಳಿಕೊಂಡು ಬಾಗಲಕೋಟೆ ಜಿಲ್ಲೆಯಲ್ಲಿ ಓಡಾಡುತ್ತಿದ್ದರು. ಆದರೆ ಶನಿವಾರ ಮಹಿಳಾ ವಸತಿನಿಲಯಕ್ಕೆ ಪರವಾಣಿಗೆ ಇಲ್ಲದೇ ನುಗ್ಗಿ ಅಲ್ಲಿದ್ದ ವಿದ್ಯಾರ್ಥಿನಿಯರಿಗೆ ಬೆದರಿಸಿರುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *