ಹುಬ್ಬಳ್ಳಿ: ನಾನು ಮೈಸೂರಿನಲ್ಲಿ ಪಿಎಸ್‍ಐ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿ ಪೊಲೀಸ್ ಇಲಾಖೆಯಲ್ಲಿ ಕಾನ್‍ಸ್ಟೇಬಲ್ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 4,15,000 ರೂಪಾಯಿ ಪಡೆದು, ನಕಲಿ ನೇಮಕಾತಿ ಪತ್ರ ಕೊಟ್ಟು ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
Advertisement
ಹುಬ್ಬಳ್ಳಿಯ ಗದಗ ರಸ್ತೆಯ ಲೈದಿಯಾ ಜೆಸ್ಸಿ ವಂಚನೆಗೀಡಾದವರು. ನಾನು ಮೈಸೂರಿನಲ್ಲಿ ಪಿಎಸ್‍ಐ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ನಗರದ ಬೃಂದಾವನ ಕಾಲನಿಯ ಕ್ರಿಶ್ಚಿನಾ ಗೋಟಿಮುಕ್ಕಲು ನಕಲಿ ಐಡಿ ತೋರಿಸಿ ಲೈದಿಯಾ ಅವರನ್ನು ಪರಿಚಯ ಮಾಡಿಕೊಂಡಿದ್ದಳು. ನನಗೆ ಪೊಲೀಸ್ ಇಲಾಖೆಯಲ್ಲಿರುವ ಮೈಸೂರಿನ ಅಧಿಕಾರಿಗಳ ಪರಿಚಯವಿದೆ ನಿಮಗೆ ಕಾನ್‍ಸ್ಟೇಬಲ್ ಉದ್ಯೋಗ ಕೊಡಿಸುತ್ತೇನೆ ಎಂದು ಕ್ರಿಶ್ಚಿನಾ ನಂಬಿಸಿದ್ದಳು. ಇದನ್ನೂ ಓದಿ: ಬಿಟ್ ಕಾಯಿನ್ ಆಯ್ತು… ಈಗ ನೆಕ್ಸ್ ಕಾಯಿನ್ ಹೆಸರಲ್ಲಿ 8.13 ಲಕ್ಷ ರೂ. ವಂಚನೆ!
Advertisement
Advertisement
ಉದ್ಯೋಗ ಕೊಡಿಸಲು ಲೈದಿಯಾ ಬಳಿ ಹಣದ ಬೇಡಿಕೆ ಇಟ್ಟ ಕ್ರಿಶ್ಚಿನಾ ಜೂನ್ 15 ರಿಂದ ಸೆಪ್ಟೆಂಬರ್ 15 ರವರೆಗೆ ಹಂತ ಹಂತವಾಗಿ ಲೈದಿಯಾ ಹಾಗೂ ಅವರ ಪತಿಯಿಂದ ಫೋನ್ ಪೇ ಮೂಲಕ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಳು. ನಂತರ ನಕಲಿ ಮೆಡಿಕಲ್ ಸರ್ಟಿಫಿಕೇಟ್ ಹಾಗೂ ನಕಲಿ ಆರ್ಡರ್ ಪ್ರತಿ ನೀಡಿ ವಂಚಿಸಿದ್ದಾಳೆ ಎಂದು ಲೈದಿಯಾ ಆರೋಪಿಸಿದ್ದು, ಕ್ರಿಶ್ಚಿನಾ ವಿರುದ್ಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ – ರೆಡ್ ಅಲರ್ಟ್ ಫೋಷಣೆ
Advertisement