ಬೆಂಗಳೂರು: ಪೊಲೀಸರ (Police) ವೇಷದಲ್ಲಿ ಬಂದು ಕಾರು ಅಡ್ಡ ಹಾಕಿ, 80 ಲಕ್ಷ ರೂ. ದೋಚಿಕೊಂಡು ಎಸ್ಕೇಪ್ ಆಗಿದ್ದ ದರೋಡೆಕೋರರನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭರತ್ ಶಿವರಾಮ್, ಶೇಕ್ ಚೆಂಪತಿ ಲಾಲ್ ಪಾಷ, ಶೇಕ್ ಚಂಪತಿ ಜಾಕಿರ್, ಬಂಧಿತ ಆರೋಪಿಗಳು. ಆರೋಪಿಗಳು ಮೂಲತಃ ಆಂಧ್ರಪ್ರದೇಶದವರು ಆಗಿದ್ದು, ಆರೋಪಿಗಳ ವಿರುದ್ಧ ಆಂಧ್ರಪ್ರದೇಶದಲ್ಲಿ ಒಬ್ಬೊಬ್ಬರ ಮೇಲೆ 50ಕ್ಕೂ ಹೆಚ್ಚು ಕೇಸ್‌ಗಳಿದ್ದರಿಂದ ಅವರೆಲ್ಲರೂ ಬೆಂಗಳೂರಿಗೆ (Bengaluru) ಬಂದು ದರೋಡೆ ಮಾಡಿಕೊಂಡು ಹೋಗಿದ್ದರು.
Advertisement
Advertisement
ದರೋಡೆಕೋರರು ಡಿ. 27ರ ಮಧ್ಯಾಹ್ನ 1:30ರ ಸುಮಾರಿಗೆ ಶಾಂತಿನಗರ ಬಸ್ ನಿಲ್ದಾಣದ ಕೆ.ಹೆಚ್.ರಸ್ತೆಯ ಸಿಗ್ನಲ್ ಬಳಿ ಸ್ವಿಫ್ಟ್ ಡಿಜೈರ್ ಕಾರೊಂದನ್ನು ಅಡ್ಡಗಟ್ಟಿ ಸಿನಿಮಾ ಸ್ಟೈಲ್‌ನಲ್ಲಿ ಹಣ ದೋಚಿಕೊಂಡು ಹೋಗಿದ್ದರು. ಡಿ. 27ರಂದು ಅಡಿಕೆ ವ್ಯಾಪರಸ್ಥರಾದ ದಕ್ಷಿಣಮೂರ್ತಿ ಮತ್ತು ಮೋಹನ್ ಎಂಬವರು ಕುಮಾರಸ್ವಾಮಿ ಮತ್ತು ಚಂದನ್ ಎಂಬ ಕೆಲಸಗಾರರಿಗೆ 80 ಲಕ್ಷ ರೂ. ಹಣ ನೀಡಿ, ಅಡಿಕೆ ಖರೀದಿಗೆ ಎಂದು ತಮಿಳುನಾಡಿಗೆ ಕಳುಹಿಸಿಕೊಟ್ಟಿದ್ದರು.
Advertisement
ಶಾಂತಿನಗರದ ಕೆ.ಹೆಚ್.ಬಿ ರಸ್ತೆ ಬಳಿ ಬರುತ್ತಿದ್ದಂತೆ ಅವರನ್ನು ನಕಲಿ ಪೊಲೀಸರು ಅಡ್ಡ ಹಾಕಿದ್ದಾರೆ. ನಂತರ ನಾವು ಪೊಲೀಸರು ಹವಾಲ ಹಣವನ್ನು ಸಾಗಿಸ್ತಿದ್ದೀರಾ ಎಂದು ಬೆದರಿಸಿ, 2 ಬ್ಯಾಗ್‌ನಲ್ಲಿದ್ದ 80 ಲಕ್ಷ ಹಣವನ್ನು ಕಸಿದು ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ವಲಸಿಗರಿಗೆ ಆಪರೇಷನ್ ಮಾಡಲು ಹೋಗಿ ಕೈ ಸುಟ್ಟುಕೊಂಡ ಕಾಂಗ್ರೆಸ್ ಪಾಳಯ
Advertisement
ಘಟನೆ ಸ್ಥಳದ ಸಿಸಿಟಿವಿ ಪರಿಶೀಲನೆ ಮಾಡಿದಾಗ ನಕಲಿ ಪೊಲೀಸರು ಅನ್ನೋದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಸತತವಾಗಿ ಒಂದು ತಿಂಗಳ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ. (Arrest) ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ್ದ 80 ಲಕ್ಷ ಜೂಜಾಟವಾಡಿ ಹಣ ಕಳೆದುಕೊಂಡಿದ್ದರು. ಹಣ ಹೊಂದಿಸಲು ದರೋಡೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
80 ಲಕ್ಷದಲ್ಲಿ 37 ಲಕ್ಷ ಅಷ್ಟೇ ವಶಕ್ಕೆ ಪಡೆಯಲಾಗಿದೆ. ರಾಬರಿ ಮಾಡಿದ್ದ 80 ಲಕ್ಷ ಕೂಡ ಹವಾಲ ಹಣ (Money) ಎನ್ನುವುದು ಪತ್ತೆಯಾಗಿದ್ದು, ಐಟಿ ಇಲಾಖೆಗೆ ಮಾಹಿತಿಯನ್ನು ರವಾನಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ. ಇದನ್ನೂ ಓದಿ: Madhya Pradesh Plane Crash: ಮಿರಾಜ್ 2000 ಯುದ್ಧ ವಿಮಾನದ ಪೈಲಟ್ ದುರ್ಮರಣ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k