ಲಕ್ನೋ: ನೋಟುಗಳ ಪರಿಶೀಲನೆ ವೇಳೆ 454 ನಕಲಿ ನೋಟುಗಳು ಪತ್ತೆಯಾಗಿರುವ ಬಗ್ಗೆ ಆರ್‌ಬಿಐ ಸಹಾಯಕ ವ್ಯವಸ್ಥಾಪಕ ಸತ್ಯವೀರ್ ಸಿಂಗ್ ದೂರು ದಾಖಲಿಸಿದ್ದಾರೆ.
ಲಕ್ನೋದ ಆಡಿಟ್‌ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಚೆಸ್ಟ್‌ನಲ್ಲಿ 47,710 ರೂ. ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿವೆ. ನೋಟುಗಳ ಪರಿಶೀಲನೆಯ ವೇಳೆ 454 ನಕಲಿ ನೋಟುಗಳು ಪತ್ತೆಯಾಗಿರುವ ಬಗ್ಗೆ ಆರ್‌ಬಿಐ ವ್ಯವಸ್ಥಾಪಕ ಸತ್ಯವೀರ್ ಸಿಂಗ್ ದೂರು ದಾಖಲಿಸಿಕೊಂಡಿದ್ದಾರೆ.
ನಕಲಿ ನೋಟುಗಳಲ್ಲಿ 10 ರೂ.ಯ 1 ನೋಟು, 50 ರೂ.ಯ 18 ನೋಟುಗಳು, 100 ರೂ.ಯ 443 ನೋಟುಗಳು, 500 ರೂ. ಹಾಗೂ 2,000 ರೂ.ಯ ಒಂದೊಂದು ನಕಲಿ ನೋಟುಗಳು ಪತ್ತೆಯಾಗಿವೆ ಎಂದು ಸತ್ಯವೀರ್ ಸಿಂಗ್ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂಟರ್ನೆಟ್ ಇಲ್ಲದೆ ಆನ್‍ಲೈನ್‍ನಲ್ಲಿ ಹಣ ಕಳುಹಿಸಿ!
ನಕಲಿ ನೋಟುಗಳ ಮುದ್ರಣ ಹಾಗೂ ಚಲಾವಣೆ ಗಂಭೀರ ಅಪರಾಧ. ಪ್ರಕರಣ ದಾಖಲಾದ ಬಳಿಕ ತನಿಖೆಗಾಗಿ ಅವುಗಳನ್ನು ಕರೆನ್ಸಿ ಪ್ರಿಂಟಿಂಗ್ ಪ್ರೆಸ್ ಅಥವಾ ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರದ ಶೆ.50ರಷ್ಟು ಸಿಬ್ಬಂದಿಗೆ ವರ್ಕ್ ಫ್ರಂ ಹೋಂ
ನಕಲಿ ನೋಟುಗಳನ್ನು ಅಸಲಿ ನೋಟುಗಳ ಮೌಲ್ಯದಲ್ಲಿ ಬಳಸಿರುವ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ದಿನೇಶ್ ಚಂದ್ರ ಮಿಶ್ರಾ ತಿಳಿಸಿದ್ದಾರೆ. ಕಳೆದವರ್ಷವೂ ಆರ್‌ಬಿಐ ಪರಿಶೀಲನೆ ವೇಳೆ 20 ಹಾಗೂ 100 ರೂ. ಮುಖಬೆಲೆಯ 44 ನಕಲಿ ನೋಟುಗಳು ಪತ್ತೆಯಾಗಿದ್ದವು.