ನವದೆಹಲಿ: ಕೋವಿಡ್ನಿಂದಾಗಿ ಕೇಂದ್ರದ ಶೇ. 50ರಷ್ಟು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ನೀಡಲಾಗಿದೆ.
ಕಾರ್ಯದರ್ಶಿ ರ್ಯಾಂಕ್ಗಿಂತ ಕೆಳಗಿನ ಶೇ.50 ರಷ್ಟು ಮಂದಿಗೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಈ ಪ್ರಕಾರ ದಿವ್ಯಾಂಗರು, ಗರ್ಭಿಣಿಯರು ಕಚೇರಿಗೆ ಹಾಜರಾಗುವುದರಿಂದ ವಿನಾಯ್ತಿ ನೀಡಲಾಗಿದೆ.
Advertisement
Advertisement
ಕಂಟೈನ್ಮೆಂಟ್ ವಲಯದ ಸಿಬ್ಬಂದಿ ಆ ವಲಯಗಳನ್ನು ಕೋವಿಡ್ ಕಂಟೈನ್ಮೆಂಟ್ ಮುಕ್ತವಾಗಿಸುವವರೆಗೆ ಕಚೇರಿಗೆ ಬರುವಂತಿಲ್ಲ. ಕಚೇರಿಯಲ್ಲಿ ಹೆಚ್ಚಿನ ಜನದಟ್ಟಣೆ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕಚೇರಿಯ ಒಟ್ಟಾರೆ ಸಂಖ್ಯೆಯ ಶೆ. 50 ರಷ್ಟು ಮಂದಿಗೆ ಮಾತ್ರವೇ ಕಚೇರಿಯಲ್ಲಿರಬೇಕು. ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ
Advertisement
Advertisement
ಬಯೋಮೆಟ್ರಿಕ್ಗೆ ಬ್ರೇಕ್: ಕೇಂದ್ರ ತನ್ನ ಎಲ್ಲಾ ಉದ್ಯೋಗಿಗಳು ಬಯೋಮೆಟ್ರಿಕ್ ಹಾಜರಾತಿ ಹಾಕುವುದನ್ನು ಜನವರಿ 31ರವರೆಗೆ ಸ್ಥಗಿತಗೊಳಿಸಿದೆ. ಮುಂದಿನ ಆದೇಶದವರೆಗೆ ಉದ್ಯೋಗಿಗಳು ಹಾಜರಾತಿ ರೆಜಿಸ್ಟರ್ನಲ್ಲಿ ದಾಖಲಿಸಬೇಕು. ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.