ಬಾಲಿವುಡ್ ಖ್ಯಾತನಟ ಅಮಿತಾಭ್ ಬಚ್ಚನ್ ಹೆಸರಿನಲ್ಲಿ ಖಾಸಗಿ ಸಂಸ್ಥೆಯೊಂದು ನಕಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಸಂಬಂಧ, ತಮ್ಮ ಹೆಸರು ದುರ್ಬಳಕೆ ವಿರುದ್ಧ ದೆಹಲಿಯ ಹೈಕೋರ್ಟ್ ಗೆ ಮೊರೆ ಹೋಗಿದ್ದರು ಅಮಿತಾಭ್. ಈ ಹೋರಾಟದಲ್ಲಿ ಅವರಿಗೆ ಜಯ ದೊರೆತಿದ್ದು, ಅನಧಿಕೃತ ವೆಬ್ ಸೈಟ್, ವಾಟ್ಸಪ್ ಗ್ರೂಪ್ ಸೇರಿದಂತೆ ಎಲ್ಲವನ್ನೂ ಬಂದ್ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ.
Advertisement
ಸಂಸ್ಥೆಯೊಂದು ಅಮಿತಾಭ್ ಅವರ ಧ್ವನಿ ದುರ್ಬಳಕೆ ಮಾಡಿಕೊಂಡು ವಾಟ್ಸಪ್ ಮೂಲಕ ಬಂಪರ್ ಪ್ರೈಸ್ ಆಮಿಷ ಒಡ್ಡುತ್ತಿತ್ತು. ಅಲ್ಲದೇ, ಅಮಿತಾಭ್ ಅವರ ಪೊಟೊಗಳನ್ನು ಬಳಸಿಕೊಂಡು ನಕಲಿ ವೆಬ್ಸೈಟ್ ಕೂಡ ಮಾಡಿಕೊಂಡಿತ್ತು. ತಮ್ಮ ಹೆಸರು, ಪೊಟೊ ಹಾಗೂ ಧ್ವನಿಯ ದುರ್ಬಳಕೆ ತಡೆಯುವಂತೆ ದೆಹಲಿ ಹೈಕೋರ್ಟಿಗೆ ಅಮಿತಾಭ್ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!
Advertisement
Advertisement
ಅಮಿತಾಭ್ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ.ನವೀನ್ ಚಾವ್ಲಾ ಇಂದು ಅಮಿತಾಭ್ ಪರ ತೀರ್ಪು ನೀಡಿದ್ದಾರೆ. ಅಮಿತಾಭ್ ಬಚ್ಚನ್ ಹೆಸರಿನಲ್ಲಿರುವ ಅನಧಿಕೃತ ವೆಬ್‌ಸೈಟ್ ತೆರವು ಮಾಡುವಂತೆ ಹಾಗೂ ಧ್ವನಿ, ಚಿತ್ರ ದುರ್ಬಳಕೆ ಮಾಡಿಕೊಂಡು ವಾಟ್ಸಪ್ ಸೇರಿದಂತೆ ಇತರೆಡೆ ಜನರಿಗೆ ಮೋಸ ಮಾಡುವ ನಂಬರ್ ಗಳನ್ನು ಬ್ಲಾಕ್ ಮಾಡುವಂತೆ ಸೂಚನೆ ನೀಡಲಾಗಿದೆ. ಟೆಲಿಕಾಂ ಸಂಸ್ಥೆಗಳು ಮತ್ತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.