Bengaluru CityCinemaLatestLeading NewsMain PostSandalwood

ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!

ನಟಿ ವೈಷ್ಣವಿ ಗೌಡ (Vaishnavi Gowda)  ಜೊತೆ ನಿಶ್ಚಿತಾರ್ಥ ಆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ನಟಿಯೊಬ್ಬರ ಆಡಿಯೋ ಸದ್ದು ಮಾಡುತ್ತಿದ್ದು, ವಿದ್ಯಾಭರಣ್ (Vidya Bharan )ಮೇಲೆ ಅನೇಕ ಆರೋಪಗಳನ್ನ ಮಾಡಿದ್ದಾರೆ.

ಇನ್ ಸ್ಟಾಗ್ರಾಂ ಖಾತೆಯಿಂದ ಅನೇಕ ಹುಡುಗಿಯರೊಂದಿಗೆ ಮೆಸೇಜ್ ಮಾಡಿ ಅನುಚಿತ ವರ್ತನೆ ತೋರಿದ್ದಾನೆ. ಏನೇ ಆಗಲಿ ವೈಷ್ಣವಿಗೆ ಮೋಸ ಆಗಬಾರದು ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಆಡಿಯೋ ಇದೀಗ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ

ಆಡಿಯೋನಲ್ಲಿ ಏನಿದೆ?: ವ್ಯಕ್ತಿಯೊಬ್ಬರಿಗೆ ಕರೆ ಮಾಡಿರುವ ನಟಿ, ಅವನು ಒಂದೇ ಒಂದು ಡಬ್ಬಾ ಸಿನಿಮಾದಲ್ಲಿ ನಟಿಸಿದ್ದಾನೆ. ಅದು ಒಂದು ವಾರ ಸಹ ಹೆಸರು ಮಾಡಲಿಲ್ಲ. ಅವನ ನಿಜವಾದ ಹೆಸರು ವಿದ್ಯಾಭರಣ್ ಅಂತಾ ಹಳ್ಳಿಯಿಂದ ಬಂದು ಇಲ್ಲೇ ಮನೆ ಕಟ್ಟಿಕೊಂಡಿದ್ದಾನೆ, ಒಂದು ಸಾಯಿಬಾಬಾ ಟೆಂಪಲ್ ಇದೆ. ತನ್ನ ಇನ್ಸ್‌ ಸ್ಟಾಗ್ರಾಮ್ ಖಾತೆಯಿಂದ ಅನೇಕ ಹುಡುಗಿಯರಿಗೆ ಮೆಸೇಜ್ ಮಾಡಿದ್ದಾನೆ. ಈಗ 3-4 ಸಾವಿರ ಫಾಲೋವರ್ಸ್ ಇದ್ದ ಆ ಖಾತೆಯೇ ಇಲ್ಲ. ಹುಡ್ಗಿಯರಿಗೆ ಮೆಸೇಜ್ ಮಾಡ್ತಾ ನಾನು ನಿಮ್ಮನ್ನ ಮದುವೆ ಆಗ್ತಿನಿ, ಡೇಟ್ ಮಾಡೋಣ? ಅಂತಾ ಕರೆದಿದ್ದಾನೆ.

ಫ್ಯಾಶನ್ ಡಿಸೈನರ್ ಒಬ್ಬರನ್ನ ಮನೆಗೆ ಕರೆದುಕೊಂಡು ಹೋಗಿ ನನ್ನ ಹೆಂಡತಿ ಆಗೋಳು ಅಂತಾ ಪರಿಚಯ ಮಾಡಿಸಿದ್ದಾನೆ. ನಂತರ ಬ್ರೇಕಪ್ ಮಾಡಿಕೊಂಡಿದ್ದಾನೆ. ಹಾಗೆಯೇ ನನಗೂ ಮೆಸೇಜ್ ಮಾಡಿ, ತುಂಬ ಇಷ್ಟ ಆಗಿದ್ದೀರಾ, 150 ಕೋಟಿ ಆಸ್ತಿಯಿದೆ, ಆಡಿ ಕಾರ್‌ ಇದೆ. ಟೆಂಪಲ್ ಇದೆ ಎಂದು ಹೇಳಿಕೊಂಡಿದ್ದ. ಡೇಟ್ ಮಾಡಲು ಕರೆದಿದ್ದ. ನಾನು ಆಗಲ್ಲ ಎಂದು ಹೇಳಿದೆ. ಇದಲ್ಲದೇ ರಾಜಕಾರಣಿಗಳ ಹೆಸರು ಬಳಸಿಕೊಂಡು ಹೆದರಿಸುವ ಕೆಲಸವನ್ನು ಆತ ಮಾಡಿದ್ದಾನೆ ಅನ್ನೋ ಅನೇಕ ಆರೋಪಗಳನ್ನ ಮಾಡಿದ್ದಾರೆ. ಇದನ್ನೂ ಓದಿ:‘ಡವ್ ಮಾಸ್ಟರ್’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

ಬಿಗ್ ಬಾಸ್ ನಂತರ ಕಿರುತೆರೆಯಿಂದ ದೂರ ಉಳಿದಿದ್ದ ನಟಿ ಮತ್ತೆ ಹೊಸ ಧಾರಾವಾಹಿ ಮೂಲಕ ವೈಷ್ಣವಿ ಕಂಬ್ಯಾಕ್ ಆಗಿದ್ದಾರೆ. ಈ ಮಧ್ಯೆ ನಟಿಯ ಎಂಗೇಜ್‌ಮೆಂಟ್ ವಿಚಾರ ಎಲ್ಲೆಡೆ ಸದ್ದು ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ವೈಷ್ಣವಿ ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಹುಡುಗನ ಕಡೆಯವರು ಬಂದು ನೋಡಿ, ಮಾತುಕತೆ ಮಾಡಿರೋದು ನಿಜಾ ಆದರೆ ಇದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

Live Tv

Leave a Reply

Your email address will not be published. Required fields are marked *

Back to top button