ಬೆಂಗಳೂರು: ನಗರದಲ್ಲಿ ನಕಲಿ ಔಷಧಿ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಔಷಧ ನಿಯಂತ್ರಣ ಇಲಾಖೆಯ ವಲಯ ಅಧಿಕಾರಿ ಅಮಾನತು ಮಾಡಲಾಗಿದೆ.
ಸಹಾಯಕ ಔಷಧ ನಿಯಂತ್ರಣಾಧಿಕಾರಿ ಓಂಕಾರೇಶ್ವರ್ ಅಮಾನತಾದ ಅಧಿಕಾರಿ. ಕರ್ತವ್ಯ ಲೋಪ ಹಿನ್ನೆಲೆ ಅಧಿಕಾರಿ ಸಸ್ಪೆಂಡ್ ಆಗಿದ್ದಾರೆ.
ಕೃಪಾ ಹೆಲ್ತ್ ಕೇರ್ ಏಜೆನ್ಸಿ ಲೆಸೆನ್ಸ್ ಸಸ್ಪೆಂಡ್ ಮಾಡಿರಲಿಲ್ಲ ಅನ್ನುವ ಕಾರಣಕ್ಕೆ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ನಕಲಿ ಔಷಧ ಜಾಲದ ಕಿಂಗ್‌ಪಿಗ್ ವೀರೇಶ್ ಜೈನ್‌ನಾ ಕೃಪಾ ಹೆಲ್ತ್ ಕೇರ್ ಏಜೆನ್ಸಿ ಆಗಿದೆ.

