ಬೆಂಗ್ಳೂರಲ್ಲಿ ನಕಲಿ ಪಟಾಕಿ ಹಾವಳಿ- ಡಿಸ್ಕೌಂಟ್ ಹೆಸ್ರಲ್ಲಿ ಗ್ರಾಹಕರ ಕಣ್ಣಿಗೆ ಮಣ್ಣು

Public TV
2 Min Read
pataki final copy

ಬೆಂಗಳೂರು: ಸಿಲಿಕಾನ್ ಸಿಟಿಗೆ ನಕಲಿ ಪಟಾಕಿಗಳು ಲಗ್ಗೆ ಇಟ್ಟಿವೆ. ಡಿಸ್ಕೌಂಟ್ ನಲ್ಲಿ ಸಿಗುವ ಈ ಪಟಾಕಿಯನ್ನ ಕೊಂಡರೆ ಅಪಾಯ ಕಟ್ಟಿಟ್ಟಬುತ್ತಿ. 3 ಸಾವಿರ ರೂ. ಬೆಲೆ ಹಾಕಿ 300 ರೂ.ಗೆ ಮಾರಾಟ ಮಾಡುತ್ತಾರೆ. ಈ ನಕಲಿ ಪಟಾಕಿಗಳ ರಹಸ್ಯ ಪಬ್ಲಿಕ್ ಟಿವಿ ಸ್ಟಿಂಗ್ ನಲ್ಲಿ ಬಯಲಾಗಿದೆ.

ಹೌದು. ದೀಪಾವಳಿ ಹಬ್ಬ ಅಂದರೆ ದೀಪಗಳ ಜೊತೆಗೆ ಪಟಾಕಿಗಳ ಭರಾಟೆ. ಹಲವರು ದೀಪಾವಳಿಗೆ ದೀಪ ಹಚ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಪಟಾಕಿ ಮಾತ್ರ ಭರ್ಜರಿಯಾಗಿ ಹೊಡೀತಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಂಡಲ್ ಬಂಡಲ್ ಪಟಾಕಿ ತಂದು ಸಿಡಿಸೋ ಹುಚ್ಚು. ಕೆಲವರಂತೂ ಹೆಚ್ಚು ಹೆಚ್ಚು ಪಟಾಕಿ ತಂದು ಸಿಡಿಸೋ ಆಸಲಿ ಭರ್ಜರಿ ಡಿಸ್ಕೌಂಟ್ ಇರೋ ಕಡೆ ಮುಖ ಮಾಡುತ್ತಾರೆ. ಪಟಾಕಿ ಮಾರಾಟಗಾರರು ಕೂಡ ಇಂಥವರನ್ನೇ ಟಾರ್ಗೆಟ್ ಮಾಡುತ್ತಾರೆ. ನಕಲಿ ಪಟಾಕಿಗಳನ್ನ ಡಿಸ್ಕೌಂಟ್ ರೇಟಲ್ಲಿ ಮಾರಿ ಮೋಸ ಮಾಡುತ್ತಾರೆ.

pataki 1

ಡಮ್ಮಿ ಪಟಾಕಿಗಳನ್ನು ಶೇ.70 ರಿಂದ 80ರಷ್ಟು ಡಿಸ್ಕೌಂಟ್ ದರದಲ್ಲಿ ಸೇಲ್ ಮಾಡುತ್ತಾರೆ. 3000 ಸಾವಿರ ರೂ. ಎಂಆರ್‍ಪಿ ಹಾಕಿ, ಅದನ್ನು ಕೇವಲ 300 ರೂಪಾಯಿಗೆ ಮಾರಾಟ ಮಾಡುತ್ತಾರೆ.

ಪ್ರತಿನಿಧಿ: ಎಷ್ಟು ಇದು? ಇದರ ಎಲ್ಲಾ ಐಟಂ ಇರ್ತಾವಾ?
ಶಾಪ್ ಮಾಲೀಕರು: ಹೂಂ ಇರ್ತಾವೆ ಸರ್. ಬರೀ 300 ರೂಪಾಯಿ ಅಷ್ಟೇ?
ಪ್ರತಿನಿಧಿ : ಮತ್ತೆ ಇದರಲ್ಲಿ 2200 ರೂ. ಅಂತ ಹಾಕಿದ್ದೀರಾ?
ಶಾಪ್ ಮಾಲೀಕರು: ಅದು ಹಾಕಿರ್ತೀವಿ ಅಷ್ಟೇ..
ಪ್ರತಿನಿಧಿ: ಇಷ್ಟು ಕಡಿಮೆಗೆ ಹೇಗೆ?
ಶಾಪ್ ಮಾಲೀಕರು: 250ರೂ. ಕೊಟ್ಟು ತಗೋಳಿ ಸರ್..

pataki 4

ಪ್ರತಿನಿಧಿ: ಇದು 3350 ರೂ. ಹಾಕಿದ್ದೀರಾ ಇದು ಹೇಗೆ..?
ಶಾಪ್ ಮಾಲೀಕ: ಇದಕ್ಕೆ ಬರೀ 350 ಕೊಡಿ ಸರ್
ಪ್ರತಿನಿಧಿ: ಏನ್ರೀ ಮೂರು ಸಾವಿರ ಹಾಕಿ ಬರೀ 350 ರೂ.ಗೆ ಕೊಡ್ತಾ ಇದ್ದೀರಾ?
ಶಾಪ್ ಮಾಲೀಕ: 70% ಡಿಸ್ಕೌಂಟ್ ಸರ್

ಪ್ರತಿನಿಧಿ: ಜಾಸ್ತಿ ರೇಟ್ ನೋಡಿ ನಮಗೆ ಭಯ ಆಯ್ತು
ಶಾಪ್ ಮಾಲೀಕ: ಡಿಸ್ಕೌಂಟ್ ಇದೆ ತಗೋಳಿ ಸರ್
ಪ್ರತಿನಿಧಿ: ಇಷ್ಟೊಂದು ಕಡಿಮೆಗೆ ಕೊಡುತ್ತೀರಾ ಚೆನ್ನಾಗಿದ್ದಾವ ಇಲ್ವಾ..?
ಶಾಪ್ ಮಾಲೀಕ: ಚೆನ್ನಾಗಿ ಇದ್ದಾವೆ. ಈ ಬಾಕ್ಸ್ ಒಳಗಡೆ 23 ಐಟಂ ಬರುತ್ತಾರೆ
ಪ್ರತಿನಿಧಿ: ಏನು ಚೆನ್ನಾಗಿ ಇರ್ತಾವೋ…

pataki 2

ಇಲ್ಲಿ ಈ ರೀತಿ ಜಾಸ್ತಿ ರೇಟ್ ಹಾಕಿ ಕಡಿಮೆ ರೇಟ್‍ಗೆ ನಕಲಿ ಪಟಾಕಿಗಳನ್ನ ಸೇಲ್ ಮಾಡುತ್ತಾರೆ. ಆದರೆ ಪ್ರತಿಷ್ಠಿತ ಕಂಪನಿಗಳ ಬ್ರಾಂಡ್‍ನ ಇದೇ ಮಾದರಿ ಬಾಕ್ಸ್ 800 ರೂ. ಅಂತ ಹೇಳುತ್ತಾರೆ. ಅಲ್ಲಿ 300, ಇಲ್ಲಿ 800 ಯಾಕೆ ಅಂದರೆ ಅದು ಡಮ್ಮಿ ಇದು ಸ್ಟಾಂಡರ್ಡ್ ಅಂತ ಅವರ ಬಾಯಲ್ಲೇ ಉತ್ತರ ಬರುತ್ತೆ.

ಪ್ರತಿನಿಧಿ: ಎಷ್ಟು ಸರ್ ಬಾಕ್ಸ್?
ಶಾಪ್ ಮಾಲೀಕ: 800 ರೂ. ಸರ್
ಪ್ರತಿನಿಧಿ: ಅಷ್ಟೋಂದಾ ಸರ್..?
ಶಾಪ್ ಮಾಲೀಕ: ಸ್ಟಾಂಡರ್ಡ್ ಸರ್ ಇದು
ಪ್ರತಿನಿಧಿ: ಮತ್ತೆ ಇದೇ ಬಾಕ್ಸ್ 300 ರೂ. ಕೊಡ್ತಾರೆ

pataki 7

ಶಾಪ್ ಮಾಲೀಕ: ಇದು ಸ್ಟಾಂಡರ್ಡ್
ಪ್ರತಿನಿಧಿ: ಇದು ಸ್ಟಾಂಡರ್ಡ್..? ಅದು ಡಮ್ಮಿನಾ ಹಾಗಾದ್ರೆ..?
ಶಾಪ್ ಮಾಲೀಕ: ಹು ತಗೊಂಡು ನೋಡಿ.. ನಿಮಗೆ ಗೊತ್ತಾಗುತ್ತೆ

ಹೀಗೆ ಮೂರು ಸಾವಿರ, ನಾಲ್ಕು ಸಾವಿರ ರೇಟ್ ಹಾಕಿ ಬರೀ 300, 200 ರೂಪಾಯಿಗೆ ಮಾರಾಟ ಮಾಡುತ್ತಾರೆ ಅಂದರೆ ಜನರನ್ನು ಎಷ್ಟರ ಮಟ್ಟಿಗೆ ಯಾಮಾರಿಸುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಒಟ್ಟಿನಲ್ಲಿ ಡಿಸ್ಕೌಂಟ್‍ನಲ್ಲಿ ಸಿಗುತ್ತದೆ ಎಂದು ಡಮ್ಮಿ ಪಟಾಕಿನಾ ತಗೊಂಡು ಹೋಗಿ ಅಪಾಯ ಮೈ ಮೇಲೆ ಎಳೆದು ಕೊಳ್ಳುವ ಮೊದಲು ಎಚ್ಚರವಹಿಸಿ.

pataki 6

Share This Article
Leave a Comment

Leave a Reply

Your email address will not be published. Required fields are marked *