ಕೋಲಾರ: ಕೆಜಿಎಫ್ ಎಸ್ಪಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆ ನಕಲು ಮಾಡಿರುವ ಘಟನೆ ನಡೆದಿದೆ.
ಕೆಜಿಎಫ್ ಜಿಲ್ಲಾ ಪೊಲೀಸ್ ಎಸ್ಪಿ ಶಿವಾಂಶು ರಜಪೂತ್ ಅವರ ಭಾವಚಿತ್ರ ಇರುವ ಜಿಲ್ಲಾ ಪೊಲೀಸ್ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯನ್ನು ನಕಲು ಮಾಡಿದ್ದಾರೆ. ನಕಲಿ ಖಾತೆಯನ್ನು ಎಸ್‌ಪಿ-ಕೆಜಿಎಫ್ ಹೆಸರಿನಲ್ಲಿ ತೆರೆದಿರುವ ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಯನ್ನೂ ಬಿಟ್ಟಿಲ್ಲ.
ಸದ್ಯ ನಕಲಿ ಖಾತೆಯನ್ನು 119 ಮಂದಿ ಫಾಲೋ ಮಾಡುತ್ತಿದ್ದು, ಈಗಾಗಲೇ 22 ಫಾಲೋವರ್ಸ್ ಇದ್ದಾರೆ. ಈ ಖಾತೆಯನ್ನು ಬ್ಲ್ಯಾಕ್ ಮಾಡಬೇಕು. ಯಾರೂ ಸಹ ಈ ಖಾತೆಯನ್ನು ಫಾಲೋ ಮಾಡಬಾರದೆಂದು ಕೆಜಿಎಫ್ ಪೊಲೀಸರು ಮನವಿ ಮಾಡಿದ್ದು, ಎಸ್‌ಪಿ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಈ ಕುರಿತು ಹೇಳಿಕೊಂಡಿದ್ದಾರೆ.
ಈಚೆಗೆ ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮ ಇಲಾಖೆ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಇಲಾಖೆಗೆ ಫೇಕ್ ಕಾಟ ಶುರುವಾಗಿದೆ. ಸದ್ಯ ಐಪಿಎಸ್ ಸೇರಿದಂತೆ ಪೊಲೀಸ್ ಅಧಿಕಾರಿಗಳನ್ನೂ ಬಿಡದೇ ಕಳ್ಳರು ಕೈಚಳಕ ತೋರುತ್ತಿದ್ದಾರೆ.