ಬೆಂಗಳೂರು: ನ್ಯೂ ಇಯರ್ (New Year) ಸೆಲೆಬ್ರೇಶನ್‍ಗೆ ಈಗಾಗಲೇ ತಯಾರಿ ಶುರುವಾಗಿದ್ದು, ಪಬ್‍ಗಳು ಸಹ ತಯಾರಿ ನಡೆಸಿದೆ. ಈ ಮಧ್ಯೆ 18 ವರ್ಷ ತುಂಬದ ಅಪ್ರಾಪ್ತರು ಪಾರ್ಟಿ ಎಂಜಾಯ್ ಮಾಡಲು ಕಳ್ಳದಾರಿ ಹಿಡಿದಿದ್ದು, ಕಲರ್ ಝೆರಾಕ್ಸ್‌ನ ಫೇಕ್ ಆಧಾರ್ ಕಾರ್ಡ್‍ಗಳನ್ನು (Aadhar Card) ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಬೆಂಗಳೂರಿನಲ್ಲಿ (Bengaluru) ನ್ಯೂ ಇಯರ್ ಸೆಲೆಬ್ರೇಶನ್ ಎಂದ್ರೆ ಎಣ್ಣೆ, ಎಣ್ಣೆ ಜೊತೆಗೆ ಡಿಜೆ ಬೇಕೇ ಬೇಕು. ಇದಕ್ಕಂತಲೇ ಸಿಲಿಕಾನ್ ಸಿಟಿಯ ಪಬ್‍ಗಳು ಈ ವರ್ಷ ಹೊಸ ಹೊಸ ಡಿಜೆ ಪಾರ್ಟಿಗಳನ್ನು ಆಯೋಜನೆ ಮಾಡಿದೆ. ಆದರೆ ಕಳೆದೆರಡು ವರ್ಷದಿಂದ ನ್ಯೂ ಇಯರ್ ಸೆಲೆಬ್ರೇಶನ್ ಮಾಡದ ಕಾರಣ ಈ ವರ್ಷ ನ್ಯೂ ಇಯರ್‌ಗೆ ಯಾವುದೇ ಅಡೆ ತಡೆಗಳು ಇಲ್ಲ. ಹೀಗಾಗಿ ಎಲ್ಲರೂ ಪಾರ್ಟಿ ಮೂಡ್‍ನಲ್ಲಿದ್ದಾರೆ. ಹೀಗೆ ಪಾರ್ಟಿ ಮೂಡ್‍ನಲ್ಲಿ ಇರೋರ ಪೈಕಿ 20 ವರ್ಷದೊಳಗಿನವರು ಕೂಡಾ ಇದ್ದಾರೆ. ಸರ್ಕಾರದ ರೂಲ್ಸ್ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ಪಬ್ ಹಾಗೂ ಬಾರ್‌ನೊಳಗೆ ಪ್ರವೇಶ ಇಲ್ಲ. ಒಂದೊಮ್ಮೆ ಪ್ರವೇಶ ನೀಡಿದರೆ ಪಬ್ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
Advertisement
Advertisement
20 ವರ್ಷದ ಮೇಲ್ಪಟ್ಟವರು ಅಂತಾ ಖಾತರಿ ಪಡಿಸಿಕೊಳ್ಳಲು ಪಬ್ ಮಾಲೀಕರು ಆಧಾರ್ ಕಾರ್ಡ್ ಪರಿಶೀಲನೆ ಮಾಡಬೇಕು. ಇದೇ ಕಾರಣಕ್ಕೆ ಈ ಬಾರಿ ನ್ಯೂ ಇಯರ್ ಸೆಲೆಬ್ರೆಶನ್ ಮಾಡಲು ಪಬ್‍ನೊಳಗೆ ಎಂಟ್ರಿ ನೀಡಲು ಬೆಂಗಳೂರಿನ ಮಕ್ಕಳು ಫೇಕ್ ಆಧಾರ್ ಕಾರ್ಡ್‍ಗಳನ್ನು ಮಾಡಿಕೊಂಡಿದ್ದಾರೆ. ಅದನ್ನೇ ಕಲರ್ ಝೆರಾಕ್ಸ್ ಮಾಡಿಸಿಕೊಂಡು ಪಬ್‍ನೊಳಗೆ ಎಂಟ್ರಿ ನೀಡುತ್ತಿದ್ದಾರಂತೆ. ಇದಕ್ಕೆ ಸಂಬಂಧಿಸಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಬಂದಿದ್ದು, ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಗೆ ಎಚ್ಚರ ವಹಿಸಲು ಸೂಚನೆ ನೀಡಿದೆ.
Advertisement
Advertisement
ಚರ್ಚ್ ಸ್ಟ್ರೀಟ್ ಹಾಗೂ ಕೋರಮಂಗಲ, ಇಂದಿರಾ ನಗರ ಸೇರಿದಂತೆ ಹಲವೆಡೆ ಸ್ಕೂಲ್ ಹಾಗೂ ಕಾಲೇಜು ಮಕ್ಕಳು ಸ್ಕೂಲ್ ಮುಗಿಸಿಕೊಂಡು ಪಬ್‍ಗಳತ್ತ ಮುಖ ಮಾಡುತ್ತಿದ್ದಾರೆ. ಪಬ್‍ನೊಳಗೆ ಎಂಟ್ರಿ ಕೊಡಲು ಆಧಾರ್ ಕಾರ್ಡ್ ಫೇಕ್ ಮಾಡಿಕೊಂಡು 22-23 ವಯಸ್ಸಿನವರು ಎಂದು ಹೇಳಿಕೊಂಡು ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ನ್ಯೂ ಇಯರ್ ಪಾರ್ಟಿಯೊಳಗೆ ಎಂಟ್ರಿ ಕೊಡುವುದಕ್ಕೆ ಹೆಚ್ಚು ಮಕ್ಕಳು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಪೊಲೀಸ್ ಇಲಾಖೆ ಹಲವು ಪಬ್‍ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಇತ್ತ ಅಬಕಾರಿ ಇಲಾಖೆಯ ಅಧಿಕಾರಿಗಳು ಕೂಡಾ 18 ವರ್ಷದೊಳಗಿನ ಮಕ್ಕಳಿಗೆ ಪಬ್‍ನೊಳಗೆ ಎಂಟ್ರಿ ಕೊಟ್ಟರೇ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!
ಸ್ಕೂಲ್‍ಗೆ ಹೋಗಿ ಮನೆಗೆ ಬರುವ ಮಕ್ಕಳು ಎಣ್ಣೆ ಹೊಡೆದುಕೊಂಡು ಬರುತ್ತಿರುವ ಬಗ್ಗೆ ಪೋಷಕರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಕೂಡಾ ಬಂದಿದೆ. ಹೀಗಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಗೆ ಪಬ್ ಹಾಗೂ ಬಾರ್‌ಗಳ ಮೇಲೆ ಹದ್ದಿನಕಣ್ಣಿಡಲು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಮಚ್ಚು ತೋರಿಸಿದ ಪ್ರಕರಣ – ದಂಪತಿ ವಿರುದ್ಧ ರೌಡಿಶೀಟರ್ ಕೇಸ್ ಹಾಕಿ ಅರೆಸ್ಟ್