ತಿರುವನಂತಪುರಂ: ಚಂದ್ರಯಾನ-2ರ (Chandrayaan-3) ವೈಫಲ್ಯದಿಂದ ಕಲಿತ ಪಾಠಗಳು ಭಾರತದ ಚಂದ್ರಯಾನ-3 (Chandrayaan-3) ಯಶಸ್ಸಿಗೆ ಕಾರಣವಾಗಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಾಜಿ ಬಾಹ್ಯಾಕಾಶ ವಿಜ್ಞಾನಿ ನಂಬಿ ನಾರಾಯಣನ್ (Nambi Narayanan) ಅಭಿಪ್ರಾಯಪಟ್ಟಿದ್ದಾರೆ.
ಚಂದ್ರಯಾನ-3 ಮಿಷನ್ ವಿಜ್ಞಾನಿಗಳಿಗೆ ನಂಬಿ ನಾರಾಯಣನ್ ಅಭಿನಂದನೆ ಸಲ್ಲಿಸಿದರು. ಚಂದ್ರಯಾನ-2ರ ಪ್ರತಿ ವೈಫಲ್ಯವನ್ನು ಇಲ್ಲಿ ಪರಿಹರಿಸಲಾಗಿದೆ. ಉಪಗ್ರಹ ಸಮಸ್ಯೆಯಾಗಿರಲಿ, ಸ್ಥಿರತೆಯ ಸಮಸ್ಯೆಯಾಗಿರಲಿ ಅಥವಾ ಹೆಚ್ಚುವರಿ ಅವಶ್ಯಕತೆಯ ಸಮಸ್ಯೆಯಾಗಿರಲಿ.. ಎಲ್ಲವನ್ನೂ ಚಂದ್ರಯಾನ-3ರಲ್ಲಿ ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಸಕ್ಸಸ್ – ಇಸ್ರೋ ಅಧ್ಯಕ್ಷರಿಗೆ ಸೋನಿಯಾ ಗಾಂಧಿ ಪತ್ರ
Advertisement
Advertisement
ಇಸ್ರೋ ವಿಜ್ಞಾನಿಗಳು ಅದ್ಭುತ ಕೆಲಸ ಮಾಡಿದ್ದಾರೆ. ಚಂದ್ರಯಾನ-3 ಯಶಸ್ವಿಯಾಗಲಿದೆ ಎಂಬ ವಿಶ್ವಾಸ ನಮಗೆ ಉಡಾವಣೆಗೂ ಮುನ್ನ ಇತ್ತು. ಇಸ್ರೋ ವಿಜ್ಞಾನಿಗಳಿಗೆ ನನ್ನ ಅಭಿನಂದನೆಗಳು ಎಂದು ಹೇಳಿದ್ದಾರೆ.
Advertisement
Advertisement
ಇದು ಇಸ್ರೋ, ಭಾರತ ಮತ್ತು ಮನುಕುಲಕ್ಕೂ ಉತ್ತಮ ದಿನವಾಗಿದೆ. ನಾವು ಸಾಧಿಸಿದ್ದು ಒಂದರ್ಥದಲ್ಲಿ ನಂಬಲಸಾಧ್ಯ. ಚಂದ್ರಯಾನ-2 ವೈಫಲ್ಯದ ಬಳಿಕ ಕಡಿಮೆ ಬಜೆಟ್‌ನಲ್ಲಿ ಚಂದ್ರಯಾನ-3 ಕೈಗೊಂಡು ಯಶಸ್ಸು ಸಾಧಿಸಿದ್ದು ನಿಜಕ್ಕೂ ಸವಾಲಿನ ಕಾರ್ಯವಾಗಿತ್ತು. ಇಷ್ಟೆಲ್ಲ ಸವಾಲುಗಳ ನಡುವೆ ಮಿಷನ್ ಉದ್ದೇಶವನ್ನು ಸಾಧಿಸಿದ್ದಾರೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: Chandrayaan-3 ಸಕ್ಸಸ್; ಇಸ್ರೋ ಅಧ್ಯಕ್ಷರು, ವಿಜ್ಞಾನಿಗಳಿಗೆ ಸಿಎಂ ಅಭಿನಂದನೆ
ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು. ಆ.23 ರಂದು ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈನಲ್ಲಿ ಇಳಿಯಿತು. ಭಾರತವು ಯುಎಸ್, ರಷ್ಯಾ ಮತ್ತು ಚೀನಾದ ನಂತರ ಚಂದ್ರನ ಲ್ಯಾಂಡಿಂಗ್ ಮಿಷನ್ ಅನ್ನು ಯಶಸ್ವಿಯಾಗಿ ನಡೆಸಿದ ನಾಲ್ಕನೇ ರಾಷ್ಟ್ರವಾಗಿದೆ.
Web Stories