ಬೆಂಗಳೂರು: ಕಾಂಗ್ರೆಸ್‌ನ ಭಾರತ್ ಜೋಡೋ ಪಾದಯಾತ್ರೆ (Bharat Jodo Yatra) ಮತ್ತು ಬಳ್ಳಾರಿ ಸಮಾವೇಶದ ವಿರುದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿ ಉತ್ತರ ನೀಡುವಂತೆ ಆಹ್ವಾನ ಕೊಟ್ಟರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದೆ ಸೋನಿಯಾ ಗಾಂಧಿ (Sonia Gandhi) ಅವರು ಲೋಕಸಭೆಗೆ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ನಾನು ಮತ್ತೆ ಬಳ್ಳಾರಿ ಕ್ಷೇತ್ರ ಬಿಟ್ಟು ಹೋಗೊಲ್ಲ ಅಂದಿದ್ದರು. ಆದ್ರೆ ಬಳ್ಳಾರಿ ಬಿಟ್ಟು ರಾಯ್ ಬರೇಲಿಗೆ ಹೋದ್ರು. ಕನಿಷ್ಠ ಪಕ್ಷ ಬಳ್ಳಾರಿ ಜನತೆಗೆ ಕೃತಜ್ಞತೆ ಕೂಡಾ ಹೇಳಲಿಲ್ಲ. ಅಂದು ಬಳ್ಳಾರಿಗೆ 3 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ರು. ಆದ್ರೆ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಲಿಲ್ಲ. ಕಾಂಗ್ರೆಸ್ (Congress) ಈಗ ಯಾವ ಮುಖ ಇಟ್ಟುಕೊಂಡು ಇವತ್ತು ಬಳ್ಳಾರಿಯಲ್ಲಿ ಸಮಾವೇಶ ಮಾಡ್ತಾರೆ? ಇದಕ್ಕೆ ಉತ್ತರ ಕೊಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ರಾಹುಲ್ ಗಾಂಧಿಗೆ ಯಾವುದೇ ದೂರದೃಷ್ಟಿ ಇಲ್ಲ: ಅರುಣ್ ಸಿಂಗ್
ಕಾಂಗ್ರೆಸ್‌ನ ಭಾರತ್ ಜೋಡೋ ಅರ್ಥ ಏನು? ಯಾಕೆ ಈಗ ಭಾರತ್ ಜೋಡೋ ಮಾಡ್ತಿದ್ದಾರೆ ಗೊತ್ತಿಲ್ಲ. ಈಗ ಭಾರತ ಒಗ್ಗಟ್ಟಾಗಿ ನಡೆಯುತ್ತಿದೆ. ಮತ್ತೆ ಯಾಕೆ ಜೋಡಿಸುತ್ತಿದ್ದೀರಾ? ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಮುಂದಿದೆ. ಇಡೀ ವಿಶ್ವದಲ್ಲಿ ನಮ್ಮ ಆರ್ಥಿಕತೆ ಮುಂದಿದೆ. ಹೀಗಿರುವಾಗ ಈ ಕಾಂಗ್ರೆಸ್ ಜೋಡೋಗೆ ಅರ್ಥವಿಲ್ಲ ಅಂತಾ ಕಿಡಿಕಾರಿದರು.
ಕಾಂಗ್ರೆಸ್ ಅವರು ರಾಹುಲ್ ಅನ್ನೋ ಮಿಸೈಲ್ ಬಿಟ್ಟಿದ್ದರು. ಅದು ಫೇಲ್ ಆಯ್ತು. ಈಗ ಮತ್ತೆ ಲಾಂಚ್ ಮಾಡೋಕೆ ಈ ಪಾದಯಾತ್ರೆ ಮಾಡ್ತಿದ್ದಾರೆ ಲೇವಡಿ ಮಾಡಿದರು. ಇದನ್ನೂ ಓದಿ: RSS ಶಕ್ತಿ ಸಹಿಸದೆ ಹೊಟ್ಟೆಕಿಚ್ಚಿನಿಂದ ಮಾತನಾಡುವವರ ಸಮಸ್ಯೆಗೆ ಮದ್ದಿಲ್ಲ: ಪ್ರಮೋದ್ ಮಧ್ವರಾಜ್