ಲಕ್ನೋ: ಉತ್ತರಪ್ರದೇಶ(Uttar Pradesh) ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ವಿದ್ಯುತ್ ಕಡಿತಗೊಳಿಸಿದ್ದ ಹಿನ್ನೆಲೆ ವೈದ್ಯರು ಮೊಬೈಲ್ ಟಾರ್ಚ್ (Mobile Torch) ಬಳಸಿ ರೋಗಿಗೆ ಚಿಕಿತ್ಸೆ ನೀಡಿದ್ದಾರೆ.
ಧಾರಾಕಾರ ಮಳೆ ಸುರಿದ ಹಿನ್ನೆಲೆ ಬಲಿಯಾ(Balia) ಜಿಲ್ಲೆಯ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಹೀಗಾಗಿ ರೋಗಿಗಳಿಗೆ ಒಂದು ಗಂಟೆಗೂ ಹೆಚ್ಚು ಕಾಲ ಮೊಬೈಲ್ ಟಾರ್ಚ್ ಲೈಟ್‍ನಲ್ಲಿಯೇ ಚಿಕಿತ್ಸೆ ನೀಡಿದ್ದಾರೆ. ಇದನ್ನೂ ಓದಿ: ಬಾರ್‌ನಲ್ಲಿ ಝಳಪಿಸಿದ ಲಾಂಗ್-ಮಚ್ಚು: ಕುಡಿಯಲು ಬಂದವರಿಂದ ಏಕಾಏಕಿ ಅಟ್ಯಾಕ್
Advertisement
Advertisement
ಹಲವಾರು ಜನರು ಮಹಿಳೆಯರು ಕತ್ತಲೆಯಲ್ಲಿ ಸ್ಟ್ರೆಚರ್ ಮೇಲೆ ಕುಳಿತಿದ್ದು, ವ್ಯಕ್ತಿಯೋರ್ವ ಮೊಬೈಲ್ ಫೋನ್ ಅನ್ನು ಹಿಡಿದಿಟ್ಟುಕೊಂಡಿದ್ದರೆ, ವೈದ್ಯರು ಮಹಿಳೆಯನ್ನು ಚೆಕ್‍ಆಪ್ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!
Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಮತ್ತು ಪ್ರಭಾರ ಮುಖ್ಯಾಧಿಕಾರಿ ಡಾ.ಆರ್.ಡಿ.ರಾಮ್ ಜನರೇಟರ್‌ಗಾಗಿ(Generator) ಬ್ಯಾಟರಿಗಳನ್ನು ಪಡೆಯುತ್ತಿದ್ದರಿಂದ 15-20 ನಿಮಿಷಗಳ ಕಾಲ ವ್ಯತ್ಯಯವಾಗಿದೆ. ಆಸ್ಪತ್ರೆಯಲ್ಲಿ ಬ್ಯಾಕ್‍ಅಪ್‍ಗಾಗಿ ಜನರೇಟರ್ ಇದೆ. ಆದರೆ ಬ್ಯಾಟರಿಗಳನ್ನು ಪಡೆಯಲು ಸಮಯ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
ಜನರೇಟರ್ ಬ್ಯಾಟರಿ ಇಲ್ಲದೇ ಇರಲು ಕಾರಣವೇನು ಎಂಬ ಪ್ರಶ್ನಿಸಿದಾಗ, ಯಾವಾಗಲೂ ಬ್ಯಾಟರಿಗಳು ಕಳ್ಳತನವಾಗುವ ಭಯ ಇದ್ದೇ ಇರುತ್ತದೆ. ಹಾಗಾಗಿ ತೆಗೆದಿಡಲಾಗಿತ್ತು ಎಂದಿದ್ದಾರೆ. ಆದರೆ ಈ ಘಟನೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.